ಆಸ್ತಿ ವಿಚಾರವಾಗಿ ಅಣ್ಣ ತಮ್ಮನನ್ನು ಕೊಲ್ಲುವುದು ಅಳಿಯ ಮಾವನನ್ನು ಕೊಲ್ಲಲು ಸ್ಕೆಚ್ ಹಾಕೋದೆಲ್ಲಾ ನೀವು ಹಲವಾರು ಸಿನಿಮಾದಲ್ಲಿ ನೋಡಿರ್ತೀರ ಆದ್ರೆ ರಿಯಲ್ ಲೈಫ್‍ನಲ್ಲಿ ಎಂದಾದ್ರೂ ನೋಡಿದೀರಾ..? ಹಾಗಾದ್ರೆ ಈ ಸ್ಟೋರಿ ನೋಡಿ.. ಕಾಪೌಂಡ್ ತೆರವುಗೊಳಿಸುವ ವಿಚಾರವಾಗಿ ಎರಡೂ ಮನೆಯವರ ಮಧ್ಯೆ ಕಾದಾಟ ಶುರುವಾಗಿ ಕೊನೆಗೆ ಲಾಂಗು ಮಚ್ಚುಗಳಿಂದ ಅಂತ್ಯ ಕಂಡಿದೆ ನೋಡಿ.. ತುಮಕೂರು ಜಿಲ್ಲೆಯ ಬುಗುಡನ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ಲಕ್ಷ್ಮಿನಾರಾಯಣ ಮತ್ತು ವೆಂಕಟಪ್ಪ ಕುಟುಂಬಗಳ ಮಧ್ಯೆ ಸಿನಿಮೀಯ ರೀತಿಯಲ್ಲಿ ಬಿಗ್ ಫೈಟ್ ಆಗಿದೆ. ಕಲ್ಲು ಇಟ್ಟಿಗೆ ಹಾಗೂ ಮಚ್ಚಿನಿಂದ ಆರಂಭವಾದ ಜಗಳವನ್ನು ನೋಡಿ ಗ್ರಾಮಸ್ಥರೇ ದಂಗಾಗಿ ಹೋಗಿದ್ದಾರೆ.. ಲಕ್ಷ್ಮಿನಾರಾಯಣ ಎಂಬುವವರ ಜಮೀನಿಗೆ ಹೊಂದಿಕೊಂಡಂತೆ ವೆಂಕಟಪ್ಪ ಅವರು ಕಾಂಪೌಂಡ್ ಕಟ್ಟಿದ್ದಾರೆ. ಈ ವೇಳೆ ಕಾಂಪೌಂಡ್ ತೆರವುಗೊಳಿಸಲು ಲಕ್ಷ್ಮಿನಾರಾಯಣ ಮುಂದಾಗುವ ವೇಳೆಯಲ್ಲಿ ಎರಡೂ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.. ಕ್ರಮೇಣ ಈ ಜಗಳ ತಾರಕಕ್ಕೆ ಹೋಗುತ್ತಿದ್ಂತೆ ಕಲ್ಲು, ಇಟ್ಟಿಗೆ ಮಚ್ಚುಗಳಿಂದ ಹೊದೆದಾಡಿಕೊಳ್ಳಲು ಆರಂಭಿಸಿದ್ದಾರೆ.. ಪರಿಣಾಮವಾಗಿ ಲಕ್ಷ್ಮಿನಾರಾಯಣ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲ ವೆಂಕಟಪ್ಪನಿಗೂ ಇಟ್ಟಿಗೆಯಿಂದ ಏಟು ಬಿದ್ದಿದೆ.. ಇಬ್ಬರು ಕುಟುಂಬಗಳು ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ..
https://youtu.be/8QOKi_NBul0
POPULAR STORIES :
ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!
ಅಪ್ಪನ ಅಪ್ಪುಗೆಯಿಂದ ಬದುಕುಳಿಯಿತು ಕೂಸು..!