ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ ! ಅವಳು ಅವನಿಗೆ ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ

Date:

ಅವತ್ತು ಖಾಸಗಿ ಆಸ್ಪತ್ರೆ, ಕ್ಲಿನಿಕ್ ವೈದ್ಯರು ಹಾಗೂ ವಿವಿಧ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಹತ್ತಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿದಿದ್ದರು.
ಕೆಲವು ಗಂಟೆಗಳವರೆಗೆ ಆಸ್ಪತ್ರೆ, ತರಗತಿಗಳನ್ನು ಬಹಿಷ್ಕರಿಸಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ದೇಶ ವ್ಯಾಪಿ ಏಕಕಾಲದಲ್ಲಿ ನಡೆಯುತ್ತಿದ್ದ ಆ ಪ್ರತಿಭಟನೆಯ ಕಾವು ಬೆಂಗಳೂರಲ್ಲಿಯೂ ಜೋರಾಗಿಯೇ ಇತ್ತು.


ಪ್ರತಿಭಟನೆ ನೇತೃತ್ವವಹಿಸಿದ್ದವರೆಲ್ಲಾ ಒಬ್ಬೊಬ್ಬರಾಗಿಯೇ ಮಾತನಾಡಿದರು. ಎಲ್ಲರ ಭಾಷಣ ಮುಗಿದ ಮೇಲೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಮಾತನ್ನಾರಂಭಿಸಿದರಳು. ಅವಳ ಮಾತುಗಳು, ಅವಳು ಬೇಡಿಕೆಗಳನ್ನು ಮಂಡಿಸುತ್ತಿದ್ದ ರೀತಿ ಎಂಥವರನ್ನೂ ನಿಬ್ಬೆರಗಾಗಿಸುವಂತಿತ್ತು..!

ದೃಶ್ಯಮಾಧ್ಯಮಗಳ ಕ್ಯಾಮರಾ, ಲೋಗೋ ಅವಳತ್ತ ತಿರುಗಿದವು..! ಅವಳ ಮಾತುಗಳ ಮುಂದೆ ಮೊದಲು ಮಾತನಾಡಿದವರ ಮಾತೆಲ್ಲಾ ಗೌಣವಾಯಿತು.
ಮರುದಿನ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಅವಳ ಮಾತೇ ಪ್ರಮುಖ ಸುದ್ದಿ..! ಆ ಸುದ್ದಿಯನ್ನು ಕಟ್ಟಿಕೊಟ್ಟವನು ಯುವ ಜರ್ನಲಿಸ್ಟ್ ವಿಶ್ವಾಸ್. ಪ್ರಭಾವಿ ಭಾಷಣ ಮಾಡಿದ ಆ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ.
ಇನ್ನು ಮುಂದಕ್ಕೆ ನೀವು ಓದಲಿರುವುದು ಅನನ್ಯ ಮತ್ತು ವಿಶ್ವಾಸ್ ಇಂಟ್ರಸ್ಟಿಂಗ್ ಲವ್ ಸ್ಟೋರಿ.ಅವನು ಯುವ ಪತ್ರಕರ್ತ ವಿಶ್ವಾಸ್, ಅವಳು ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ. ಈ ಮೊದಲೇ ಹೇಳಿರುವಂತೆ ಅದೊಂದು ಪ್ರತಿಭಟನೆಯ ಸಂದರ್ಭದಲ್ಲಿ ವಿಶ್ವಾಸ್ ಅನನ್ಯಳನ್ನು ನೋಡಿದ್ದ. ಅವಳ ಮಾತಿನ ಶೈಲಿ, ಕಣ್ಣೋಟ, ಚೆಲುವಿಗೆ ಕ್ಲೀನ್ ಬೋಲ್ಡ್ ಆಗಿದ್ದ ವಿಶ್ವಾಸ್. ಅದರ ಫಲಶ್ರುತಿಯೇ ಮರುದಿನ ಪ್ರಕಟವಾದ ವರದಿ…! ಅವಳ ಮಾತುಗಳನ್ನು ಇನ್ನೂ ಹರಿತವಾಗಿ, ಸೊಗಸಾಗಿ ಕಟ್ಟಿಕೊಟ್ಟಿದ್ದ. ಬೇರೆಲ್ಲಾ ಪತ್ರಿಕೆಗಳಿಗಿಂತ ಚೆನ್ನಾಗಿ, ವಿಭಿನ್ನವಾಗಿ ಮೂಡಿಬಂದಿದ್ದ ಸುದ್ದಿಯನ್ನು ಪ್ರತಿಭಟನೆಯ ನೇತಾರರೆಲ್ಲಾ ಮೆಚ್ಚಿ ಫೋನಾಯಿಸಿದ್ರು ವಿಶ್ವಾಸ್ ಗೆ. ತಮ್ಮ ವಿದ್ಯಾರ್ಥಿನಿ ಹಾಗು ಕಾಲೇಜನ್ನು ಹೈಲೈಟ್ ಮಾಡಿ ಬರೆದಿದ್ದಕ್ಕೆ ಅನನ್ಯ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ವಿಶ್ವಾಸ್ ನಿಗೆ ಹೊಗಳಿಕೆ ಮಳೆಗೈದರು. ಆದರೆ, ವಿಶ್ವಾಸ್ ಗೆ ಅವರ್ಯಾರ ಮಾತು ಖುಷಿಕೊಡಲಿಲ್ಲ. ಅನನ್ಯ ನನ್ನ ನಂಬರ್ ಕಲೆಕ್ಟ್ ಮಾಡಿಕೊಂಡು ಫೋನ್ ಮಾಡ್ತಾಳೆ, ಅನನ್ಯ ಆಫೀಸ್ ಗೆ ಬಂದು ಹೋಗ್ತಾಳೆ ಅಂಥ ಕನಸು ಕಾಣ್ತಾ ದಿನಗಳೆದಿದ್ದ ವಿಶ್ವಾಸ್. ಅಷ್ಟೊತ್ತಿಗಾಗಲೇ ಅವನ ಹೃದಯ ಅನನ್ಯ ಅನನ್ಯ ಎಂದು ಬಡಿಯುತ್ತಿತ್ತು!


ವಿಶ್ವಾಸ್ ಗೆ ಅನನ್ಯಗೊತ್ತು ಆದರೆ, ಅನನ್ಯಗೆ ವಿಶ್ವಾಸ್ ಗೊತ್ತಿಲ್ವೇ? ಪತ್ರಿಕೆಯಲ್ಲಿ ವರದಿಗಾರ ವಿಶ್ವಾಸ್ ಹೆಸರು ಇರಲಿಲ್ಲ. ಜೊತೆಗೆ ಅನನ್ಯಗೆ ನಂಬರ್ ಹುಡುಕಿ ಕಾಲ್ ಮಾಡಿ ಮಾತಾಡೋದು, ಹೊಗೊಳೋದು ಮಾಡಿ ಬಕೆಟ್ ಹಿಡಿಯೋ ಗುಣವೂ ಇಲ್ಲ. ಹಾಗಾಗಿ ವಿಶ್ವಾಸ್ ನ ಪರಿಚಯ ಅನನ್ಯಗೇ ಆಗಲಿಲ್ಲ.


ವಾರದ ನಂತರ ಅನನ್ಯ ಓದುತ್ತಿದ್ದ ವೈದ್ಯಕೀಯ ಕಾಲೇಜಿನಲ್ಲೇ ರಾಷ್ಟ್ರ ಮಟ್ಟದ ವೈದ್ಯಕೀಯ ಸಮ್ಮೇಳನ ಏರ್ಪಾಡಾಗಿತ್ತು. ಆ ಒಂದು ವಾರದ ಸುದ್ದಿ ಮಾಡೋ ಜವಾಬ್ದಾರಿ ವಿಶ್ವಾಸ್ ನದ್ದಾಗಿತ್ತು.
ಮೊದಲ ದಿನ ಕಾರ್ಯಕ್ರಮ ಆರಂಭವಾಯಿತು. ವೇದಿಕೆ ಮೇಲೆ ನಿರೂಪಕಿಯಾಗಿ ನಿಂತಿದ್ದಳು ಅನನ್ಯ. ಅವಳನ್ನು ಕಂಡಾಗ ವಿಶ್ವಾಸ್ ಗೆ ಅದೇನೋ ಒಂಥರಾ ತಳಮಳ. ಮಾತನಾಡಿಸಬೇಕು, ಮನಸ್ಸಿನಲ್ಲಿರುವ ವಿಷಯವನ್ನೆಲ್ಲಾ ಹೇಳಲೇ ಬೇಕು ಎನ್ನುವ ತವಕ. ಆದರೆ, ಅದನ್ನೆಲ್ಲಾ ಹೇಳಲು ಧೈರ್ಯ ಸಾಲದು. ಕಾರ್ಯಕ್ರಮ ಶುರುವಾಯಿತು, ಉದ್ಘಾಟನಾ ಸಮಾರಂಭ ಮುಗಿಯಿತು. ಸಮ್ಮೇಳನಕ್ಕೆ ಮುಖ್ಯ ಅತಿಥಿಗಳ ಭಾಷಣ ಆರಂಭವಾಯಿತು. ಅನನ್ಯ ವೇದಿಕೆ ಬಿಟ್ಟು ಕೆಳಗಿಳಿದು ಗೆಳತಿಯರು ಜೊತೆ ಕೂರಲು ರಿಸರ್ವ್ ಇದ್ದ ಸೀಟಿನತ್ತ ಹೊರಟಳು.

ಪ್ರಸ್ ಗ್ಯಾಲರಿಯ ಎಡಭಾಗದಲ್ಲಿದ್ದ ಹಾದಿಯಲೇ ಫ್ರೆಂಡ್ ತನಗಾಗಿ ಕಾಯ್ದಿರಿಸಿದ್ದು ಸೀಟಿನತ್ತ ಹೋಗ ಬೇಕಿತ್ತು. ನಗುತ್ತಾ ಗೆಳತಿಯರತ್ತ ಕೈ ಬೀಸುತ್ತಾ ಅತ್ತ ಹೊರಟಳು, ಪ್ರೆಸ್ ಗ್ಯಾಲರಿಯ ಎಡ ತುದಿಯಲ್ಲಿ ಕುಳಿತಿದ್ದ ವಿಶ್ವಾಸ್ ನ ಜರ್ಕಿ ಜಿಪ್ ಗೆ ಅನನ್ಯಳ ಸೀರೆ ಸೆರಗು ಆಕಸ್ಮಿಕವಾಗಿ ಸಿಕ್ಕಾಕಿಕೊಂಡಿತು. ಅದೇ ಮೊದಲು ಅನನ್ಯ ವಿಶ್ವಾಸ್ ನನ್ನು ಮುಖಕೊಟ್ಟ ನೋಡಿದ್ದು. ..! ಅವಳು ಸಾರಿ ಎಂದು ಜಿಪ್ ನಿಂದ ಸೆರಗು ಬಿಡಿಸಿಕೊಳ್ಳಲು ಪ್ರಯತ್ನಿಸಿದಳು. ಹ್ಞೂಂ ಹ್ಞೂಂ ಪ್ರಯೋಜನವಾಗಿಲ್ಲ. ವಿಶ್ವಾಸ್ ಗೆ ಭಯಮಿಶ್ರಿತ ಖುಷಿ.


! ಬೆವರಿದ, ಜರ್ಕಿ ತೆಗೆದು ಅವಳ ಕೈಗೆ ಕೊಟ್ಟ..! ಅವಳು ಕೈ ರಟ್ಟೆ ಮೇಲೆ ಸೆರಗು ಮತ್ತು ವಿಶ್ವಾಸ್ ಜರ್ಕಿ ಇಟ್ಟುಕೊಂಡು ಹೋಗಿ ತನಗಾಗಿ ಕಾದಿದ್ದ ಚೇರ್ನಲ್ಲಿ ಕುಳಿತಳು. ಜರ್ಕಿ ಜಿಪ್ ನಿಂದ ಸೆರಗಿನ ಕುಚ್ಚು ಬಿಡಿಸಿಕೊಳ್ಳುತ್ತಿರುವಾಗ ಪಕ್ಕದಲ್ಲಿ ಕುಳಿತ ಗೆಳತಿ ಹೇಳಿದ ಮೇಲೆಯೇ ಅನನ್ಯಗೆ ತಿಳಿದಿದ್ದು ಅವನೇ ವಿಶ್ವಾಸ್ ಎಂದು..! ಕಣ್ಮುಚ್ಚಿ ಸೆರಗು ಗಂಟು ಬಿದ್ದ ಸೀನ್ ನೆನೆದಳು, ವಿಶ್ವಾಸ್ ಮುಖ ಕಣ್ಣೆದುರಿಗೆ ಬಂತು..! ಅಷ್ಟೊತ್ತಿಗೆ ಜಿಪ್ ನಿಂದ ಸೆರಗಿನ ಕುಚ್ಚನ್ನು ಬಿಡಿಸಿದ್ದಳು…!ಅತ್ತ ಭಾಷಣವೂ ಮುಗಿದಿತ್ತು ಊಟದ ಸಮಯ ಬಂದಿತ್ತು. ವಿಶ್ವಾಸನತ್ತ ನೋಡಿದಳು..! ಅವನು ಅಲ್ಲಿರಲಿಲ್ಲ. ಸುತ್ತಮುತ್ತ ಹುಡುಕಿದರು ಸಿಗಲಿಲ್ಲ. ಅವನಾಗಲೇ ಹೊರಟು ಹೋಗಿದ್ದ.
ಅನನ್ಯ ವಿಶ್ವಾಸ್ ನ ಜರ್ಕಿ ಇಟ್ಕೊಂಡು ಮನೆಗೆ ಹೋದಳು. ಮರದಿನ ಸಮ್ಮೇಳನದ ಎರಡನೆಯ ದಿನ. ವಿಶ್ವಾಸ್ ಬೇರೆಲ್ಲಾ ಮಾಧ್ಯಮದವರಿಗಿಂತ ಬೇಗನೇ ಹೋದ. ಅನನ್ಯ ಕೂಡ ಬೇಗನೆ ಬಂದಳು. ಜರ್ಕಿ ಕೈಗಿತ್ತಳು. ಪರಸ್ಪರ ಪರಿಚಯಿಸಿಕೊಂಡರು. ವಾರದ ಸಮ್ಮೇಳನ ಮುಗಿಯುವಷ್ಟರಲ್ಲಿ ಇವರದ್ದೇ ಸುದ್ದಿ..!


ಅನನ್ಯಗೆ ಕಿಚಾಯಿಸುವ ಗೆಳತಿಯರು, ವಿಶ್ವಾಸ್ ಗೆ ಕಾಲೆಳೆಯುವ ಮಾಧ್ಯಮದ ಸಹ ಮಿತ್ರರು. ದಿನ, ತಿಂಗಳುಗಳು ಕಳೆದವು. ವಿಶ್ವಾಸ್ ಅನನ್ಯಗೆ ಪ್ರಪೋಸ್ ಮಾಡಿದ. ಅವಳು ಗ್ರೀನ್ ಸಿಗ್ನಲ್ ಕೊಟ್ಟಳು.
ಇದೀಗ ಅನನ್ಯಳ ಎಂಬಿಬಿಸ್ ಕೋರ್ಸ್ ಮುಗಿದಿದೆ. ವಿಶ್ವಾಸ್ ಮತ್ತು ಅನನ್ಯ ತಮ್ಮ ಪೋಷಕರನ್ನು ಒಪ್ಪಿಸುವ ಪ್ರಯತ್ನದಲ್ಲಿದ್ದಾರೆ.
ಆದಷ್ಟು ಬೇಗ ಅವರಿಬ್ಬರ ಕುಟುಂಬದವರೂ ಒಪ್ಪಿ ಮದುವೆ ಊಟ ಹಾಕಿಸಲಿ. ನಾನು ಆ ದಿನಕ್ಕೆ ಕಾಯುತ್ತಿದ್ದೇನೆ. ವಿಶ್ವಾಸ್ ನನ್ನ ಆತ್ಮೀಯ, ಗೆಳತಿ ಅನ್ಯನಳಿಂದಲೇ ಆತ ನನಗೆ ಪರಿಚಿತ…! ಅವರಿಬ್ಬರನ್ನೂ ನಾ ಬಲ್ಲೆ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...