ಮಕ್ಕಳು ಕಂಡ ಕಂಡ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿರುತ್ತಾರೆ. ಕಾಯಿನ್ ಅಂತಹ ವಸ್ತುಗಳನ್ನು ಹಾಕಿಕೊಂಡರೆ, ಅದು ಗಂಟಲಲ್ಲಿ ಸಿಕ್ಕಾಕಿಕೊಂಡರೆ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆ ಅಗತ್ಯ.
ಮಕ್ಕಳು ಏನಾದರು ವಸ್ತು ನುಂಗಿದ್ದರೆ ಬಾಯಿಯಿಂದ ಲಾಲಾರಸ ಸೋರುತ್ತಿರುತ್ತದೆ. ಬಿಕ್ಕಿ ಬಿಕ್ಕಿ ಅಳ್ತಿರ್ತಾರೆ. ಉಸಿರಾಡಲು ಕಷ್ಟ ಪಡ್ತಿರ್ತಾರೆ.
ಇದು ಅನುಭವಕ್ಕೆ ಬಂದಾಗ. ಕೂಡಲೇ ಕುಡಿಯಲು ನೀರು ಕೊಡಿ. ಮೂತ್ರದಲ್ಲಿ ಹೊರಬಂತ ನೋಡಿ,ಅದಿಲ್ಲ ಅಂತಾದ್ರೆ ಬಾಳೆಹಣ್ಣು ನೀಡಿ. ನೀರನ್ನು ಚೆನ್ನಾಗಿ ಕುಡಿಸಿ. ಗಂಟಲಲ್ಲಿ ಸಿಲುಕದೆ ಹೊಟ್ಟೆಗೆ ಹೋಗಿದ್ದಾರೆ ಅಪಾಯ ತಪ್ಪಿದ್ದಂತೆ. ಮಗುವಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಎರಡು ದಿನವಾದರೂ ಕಾಯಿನ್ ಹೊರಗೆ ಬರದಿದ್ದರೆ ಆಸ್ಪತ್ರೆಗೆ ಹೋಗಿ , ಸ್ಕ್ಯಾನಿಂಗ್ ಮಾಡಿಸಿ, ವೈದ್ಯರು ನೀಡಿದ ಔಷಧಿ ನೀಡಿ.