ಚಿಕ್ಕವಯಸ್ಸಲ್ಲಿ ಮಾಡಿದ ಎರಡು ತಪ್ಪುಗಳು ಅವರಿಬ್ಬರನ್ನೂ ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡುತ್ತೆ..! ಪತ್ಯೇಕ ಅಪರಾಧಗಳಲ್ಲಿ ಭಾಗಿಯಾಗಿ ಬಾಲ್ಯದಲ್ಲೇ ಜೈಲು ಸೇರಿದ್ದ ಅವರಿಬ್ಬರ ನಡುವೆ ಯೌವನದಲ್ಲಿ `ನಾಟಕ’ವೊಂದು ಪ್ರೀತಿ ಹುಟ್ಟಲು ಕಾರಣವಾಗುತ್ತೆ..! ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸ್ತಾರೆ..! ನಂತರ ಮದುವೆಯೂ ಆಗ್ತಾರೆ..! ಜೈಲಲ್ಲೇ ದಾಂಪತ್ಯ ಜೀವನ ನಡೆಸಿದರ ಫಲವಾಗಿ ಒಂದು ಮುದ್ದಾದ ಹೆಣ್ಣು ಮಗುವಿನ ಅಪ್ಪ-ಅಮ್ಮ ಆಗ್ತಾರೆ..! ಇಷ್ಟೆಲ್ಲಾ ಆದ ಮೇಲೆ ಅವಳಿಗೆ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಭಾಗ್ಯ ಸಿಗುತ್ತೆ..! ಆದರೆ ಅವನಿಗೆ ಜೈಲೇ ಗತಿಯಾಗಿರುತ್ತೆ..! ಪುಟ್ಟ ಮಗುವಿನೊಂದಿಗೆ ಅವಳೀಗ ಗಂಡನ ಮನೆಯಲ್ಲಿ..! ಗಂಡ ಮಾತ್ರ ಜೈಲಲ್ಲಿ..! ಈ ಲವ್ ಸ್ಟೋರಿ ಅಥವಾ ಇಂಥಾ ಲವ್ ಸ್ಟೋರಿಯನ್ನು ಕೇಳಿದ್ದೀರಾ..?! ಸಿನಿಮಾಗಳಲ್ಲಿ ನೋಡಿದ್ದೀರಾ..?! ಖಂಡಿತಾ ನೀವೂ ನೋಡಿರಲಿಕ್ಕಿಲ್ಲ..! ಮುಂಬರುವ ಸಿನಿಮಾ ಸ್ಟೋರಿಯಂತೂ ಇದಲ್ಲ..! ಸಿನಿಮಾ ಸ್ಟೋರಿಯಂತೆಯೇ ಇರೋ ರಿಯಲ್ ಸ್ಟೋರಿ..!
ಅವರು ಅಂಬುರಾಜ್ ಮತ್ತು ರೇವತಿ. ಚೆನ್ನೈನ ರೇವತಿಗೆ ಆಗಿನ್ನೂ 14 ವರ್ಷ ವಯಸ್ಸು. ಯಾರದ್ದೋ ಮನೆ ಕೆಲಸಕ್ಕಂತ ಬೆಂಗಳೂರಿಗೆ ಅವರನ್ನು ಕರೆತರಲಾಗಿರುತ್ತೆ..! ಬೆಂಗಳೂರಲ್ಲೊಂದು ಮನೆಯಲ್ಲಿ ಮನೆ ಕೆಲಸದಾಕೆಯಾಗಿ ಕೆಲಸಕ್ಕೆ ಸೇರಿಕೊಂಡು ಪ್ರಮಾಣಿಕವಾಗಿಯೇ ಕೆಲಸ ಮಾಡ್ತಾ ಇರ್ತಾರೆ 14ರ ರೇವತಿ..! ಆ ಮನೆ ಒಡತಿಗೇನು ಬಂದಿತ್ತೋ ಗೊತ್ತಿಲ್ಲ..! ಪುಟ್ಟ ರೇವತಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಸಂಚು ರೂಪಿಸಿ ಬಿಟ್ಟಿದ್ದಳು..! ರೆಡ್ ಲೈಟ್ ಏರಿಯಾಕ್ಕೆ ತನ್ನನ್ನು ಕಳಿಸ್ತಾರೆ ಅಂತ ಗೊತ್ತಾದಾಗ ರೇವತಿ ಪ್ರತಿಭಟಿಸಿದ್ದರು..! ಆಗ ಬಾಲಕಿ ರೇವತಿಯ ಮಾತನ್ನು ಯಾರೂ ಕೇಳಲಿಲ್ಲ..! ಆಕೆಯ ಪ್ರತಿಭಟನೆಗೆ ಯಾರೂ ಯಾರೆಂದರೆ ಯಾರೂ ಕಿವಿಗೊಡಲಿಲ್ಲ..! ಜೋರು ಜೋರು ಗಲಾಟೆ ನಡೆಯುತ್ತೆ..! ಚಾಕುವಿನಿಂದ ರೇವತಿಗೆ ಗಾಯ ಆಗುತ್ತೆ..! ಅದೇ ಚಾಕುವನ್ನು ಕಿತ್ತುಕೊಂಡ ರೇವತಿ ತನ್ನ ಮಾನ-ಪ್ರಾಣ ಉಳಿಸಿಕೊಳ್ಳೋಕೆ ಮನೆಯಾಕೆಗೆ ತಿವಿಯುತ್ತಾಳೆ..! ರೇವತಿ ಇರಿದ ಚಾಕುವಿನಿಂದಾಗಿ ಮನೆಯಾಕೆ ಸಾಯುತ್ತಾಳೆ..! ಶೀಲ-ಪ್ರಾಣ ಉಳಿಸಿಕೊಳ್ಳಲು ಕೊಲೆ ಮಾಡಿದ ತಪ್ಪಿಗಾಗಿ ಬಾಲಕಿ ರೇವತಿ ಅವತ್ತು ಜೈಲು ಸೇರುತ್ತಾಳೆ..!
ಇತ್ತ ಅಂಬುರಾಜ್ 1998ರ ಏಪ್ರಿಲ್ 10ರಂದು ಕುರಿ ಮೇಯಿಸಲು ಕಾಡಿಗೆ ಹೋಗಿದ್ದ ಅಂಬುರಾಜ್ ನನ್ನು ಕಾಡುಗಳ್ಳ ವೀರಪ್ಪನ್ ಟೀಂ ಅಂದಿಯೂರು ಕಾಡಿನಿಂದ ಅಪಹರಿಸುತ್ತೆ..! ನಂತರ ವೀರಪ್ಪನ್ ಆದೇಶದಂತೆ ಒಂದು ತಂಡ ಪೊಲೀಸರಿಗೆ ಶರಣಾಗ ಬೇಕಾಗುತ್ತೆ ಆ ತಂಡದಲ್ಲಿ ಈ ಅಂಬುರಾಜ್ ಕೂಡ ಇದ್ದರು..! ಆಗಿನ್ನೂ ಅವರಿಗೆ 17 ವರ್ಷ, ಅವನಿಗೆ 2006ರಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತು..! ಅಂಬುರಾಜ್ ಮೈಸೂರು ಜೈಲಲ್ಲಿ ಕಂಬಿ ಎಣಿಸ ತೊಡಗಿದರು…! ಹೀಗಿರುವಾಗಲೇ..
ಅದು 2008ರಲ್ಲಿ ಹುಲುಗಪ್ಪ ಕಟ್ಟಿಮನಿಯವರು ರಾಜ್ಯ ಜೈಲುವಾಸಿಗಳಿಂದ ಮಾಡಿಸುತ್ತಿದ್ದ ನಾಟಕಕ್ಕೆ ರೇವತಿ ಮತ್ತು ಅಂಬುರಾಜ್ ಇಬ್ಬರೂ ಆಯ್ಕೆ ಆಗ್ತಾರೆ..! ಆ ನಾಟಕದ ಸಂದರ್ಭದಿ ಪರಿಚಿತರಾದ ಅಂಬುರಾಜ್, ರೇವತಿ ನಡುವೆ ಪ್ರೇಮಾಂಕುರವಾಗುತ್ತೆ..! ಅಂಬುರಾಜ್ ಮನೆಯವರು ಇವರ ಮದುವೆಗೆ ಒಪ್ಪುತ್ತಾರೆ..! 2011ರ ಮಾರ್ಚ್ 28ರಲ್ಲಿ ಪೆರೋಲ್ ಮೇಲೆ ಊರು ತಮಿಳುನಾಡಿಗೆ ತೆರಳಿ ಮದುವೆಯಾಗ್ತಾರೆ..! ಇಬ್ಬರನ್ನೂ ಒಂದೆಡೆ ಇಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತೆ ಬೆಂಗಳೂರಿನಲ್ಲಿದ್ದ ರೇವತಿಯನ್ನೂ ಮೈಸೂರು ಜೈಲಿಗೆ ವರ್ಗಾಯಿಸಲಾಗುತ್ತೆ..! ಜೈಲಲ್ಲೇ ದಾಂಪತ್ಯ ಜೀವನ ನಡೆಸ್ತಾರೆ..! ಇವರಿಗೀಗ ಒಂಬತ್ತು ತಿಂಗಳ ಹೆಣ್ಣು ಮಗು ಕೂಡ ಇದೆ..! ಸನ್ನಡತೆಯ ಮೇರೆಗೆ ಇದೀಗ ರೇವತಿ ಬಿಡುಗಡೆಯಾಗಿದ್ದು, ಅಂಬುರಾಜ್ ಜೈಲಲ್ಲೇ ಇರಬೇಕಾಗಿದೆ..! ಜೈಲಲ್ಲಿ ಪ್ರೇಮಿಸಿ ಮದುವೆಯಾದ ದಂಪತಿಗಳೀಗ ದೂರದೂರ..!
ಟೈಲರಿಂಗ್ ನಡೆಸಿ ಮಗುವನ್ನು ನೋಡಿಕೊಳ್ಳುತ್ತೇನೆ..! ಅತ್ತೆ ಮಾವನ ಜೊತೆ ಇರುತ್ತೇನೆ..! ನನ್ನ ಗಂಡನ ಮೇಲೆ ಕರುಣೆ ತೋರಿಸಿ ಅವರಿಗೂ ಬಿಡುಗಡೆ ನೀಡಲಿ ಎಂದು ರೇವತಿ ಮನವಿ ಮಾಡ್ತಾ ಇದ್ದಾರೆ..! ಪುಟ್ಟ ಕಂದಮ್ಮ, ಪ್ರೀತಿಸಿ ಮದುವೆಯಾದ ಮಡದಿಯ ಜೊತೆ ಕಾಲಕಳೆಯುವಂತಾಗ ಬೇಕೆಂಬುದು ಅಂಬುರಾಜ್ ರ ಆಸೆ ಕೂಡ ಆಗಿದೆ. ಏನಾಗುತ್ತೋ ಕಾದು ನೋಡ ಬೇಕು..! ಎಲ್ಲಾ ಒಳ್ಳೆಯದೇ ಆದರೆ ಸಾಕು..! ಪ್ರೀತಿ ಉಳಿಯಲಿ, ಪ್ರೀತಿಸಿ ಮದುವೆಯಾಗಿ ಜೈಲು ದಾಂಪತ್ಯ ನಡೆಸಿದ ದಂಪತಿಗಳ ಹೊಸ ಜೀವನ ಸುಖಮಯವಾಗಿರಲಿ.
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!