ನೀವು ನಿಮ್ಮ ಮನಸ್ಸು ಕದ್ದ ಹುಡುಗಿಗೆ ಲವ್ ಲೆಟರ್ ಕೊಡಲು ಯೋಚಿಸ್ತಾ ಇದ್ದೀರ? ಲವ್ ಲೆಟರ್ ಬರೆದಿಟ್ಟುಕೊಂಡು ಹೇಗೆ ಕೊಡೋದು ಅಂತ ಪ್ಲಾನ್ ಮಾಡ್ತಾ ಇದ್ದೀರಾ? ಒಂದೇ ಒಂದ್ ನಿಮಿಷ ಲವ್ ¯ವ್ ಲೆಟರ್ ಕೊಡುವ ಮುನ್ನ ಈ ಸುದ್ದಿ ಓದಿ.
ಇಲ್ಲೊಬ್ಬ ಹುಚ್ಚು ಪ್ರೇಮಿ ಬಾಲಕಿಗೆ ಲವ್ ಲೆಟರ್ ಕೊಟ್ಟ ತಪ್ಪಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ. ಮಹಾರಾಷ್ಟ್ರಾದ 21 ವರ್ಷದ ಯುವಕ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಬಲವಂತದಿಂದ ಲವ್ ಲೆಟರ್ ಕೊಟ್ಟಿದ್ದ ತಪ್ಪಿಗೆ ಜೈಲು ಸೇರಿದ್ದಾನೆ.
ಪ್ರತಿದಿನ ಬಾಲಕಿಯನ್ನು ಪ್ರೀತ್ಸೆ ಪ್ರೀತ್ಸೆ ಅಂತ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ. ಅವಳು ನಿರಾಕರಿಸಿದ ಬಳಿಕ ಕೈ ಹಿಡಿದು ಲವ್ ಲೆಟರ್ ಕೊಟ್ಟು ಹೋಗಿದ್ದ. ಈ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಇದೀಗ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.