ನಂಗೆ ಲವ್ವರ್ ಬೇಕು. ನಾನು ನಿಮ್ ಜೊತೆ ಬರಲ್ಲ. ಲವ್ವರ್ ಜೊತೆ ಬದುಕೋಕೆ ಬಿಡಿ ಎಂದು ದ್ವಿತೀಯ ಪಿಯಸಿ ವಿದ್ಯಾರ್ಥಿನಿ ರಂಪಾಟ ಮಾಡಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದಲ್ಲಿ ನಡೆದಿದೆ.
ಕಲ್ಲೂಡಿ ಗ್ರಾಮದ ವಿದ್ಯಾರ್ಥಿನಿ ಹಾಗೂ ವಿದುರಾಶ್ವತ್ಥ ಗ್ರಾಮದ ಆಟೋ ಚಾಲಕ ಕಳೆದ ನಾಲ್ಕು ವರ್ಷದಿಂದ ಪಸರಸ್ಪರ ಪ್ರೀತಿಸುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಯುವತಿ ಯುವಕನ ಜೊತೆ ಪರಾರಿಯಾಗಿ ಆತನ ಮನೆ ಸೇರಿದ್ದಳು.
ಈ ವಿಷಯ ತಿಳಿದು ಆಕೆಯನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಲು ತಂದೆ ಹಾಗೂ ಸಂಬಂಧಿಕರು ಬಂದಾಗ ಆಕೆ ರಂಪಾಟ ಮಾಡಿದ್ದಾಳೆ. ತಂದೆ ಪರಿ ಪರಿಯಾಗಿ ಬೇಡಿಕೊಂಡರೂ ಆಕೆ ಪಟ್ಟು ಸಡಿಲಸದೆ ಲವ್ವರ್ ಜೊತೆಯೇ ಇರ್ತೀನಿ ಎಂದು ಹಠ ಹಿಡಿದಿದ್ದಾಳೆ. ಲವ್ವರ್ ಜೊತೆ ಇರಲು ಬಿಡದೇ ಇದ್ದರೆ ಸಾಯ್ತೀನಿ ಎಂದಿದ್ದಾಳೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಇಬ್ಬರನ್ನ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ಇತ್ಯರ್ಥಪಡಿಸಿದ್ದಾರೆ. ದ್ವಿತೀಯ ಪಿಯುಸಿ ಮುಗಿಸಿ ಹಾಗೂ ಯುವಕ ಸಹ ಉತ್ತಮ ಸ್ಥಾನಕ್ಕೆ ಬರಲಿ ತದ ನಂತರ ನಾವೇ ಮದುವೆ ಮಾಡಿಕೊಡ್ತೀವಿ ಇಬ್ಬರಿಗೂ ಸಮಾಧಾನಪಡಿಸಿದ ಪೋಷಕರು ಯುವತಿಯನ್ನ ತಂದೆ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಆದ್ರೆ ಮನೆಗೆ ಹೋದ ಯುವತಿ ಮನಸ್ಸನ್ನ ಬದಲಾಯಿಸಬಿಡಹುದು ಅಂತ ಯುವಕ ತನ್ನ ಸ್ನೇಹಿತರ ಮೂಲಕ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ತನ್ನ ಪ್ರೇಮ ಪ್ರಕರಣವನ್ನ ಬಯಲು ಮಾಡಿಸಿಕೊಂಡಿದ್ದಾನೆ.