ಗೆಳತಿ, ಪತ್ನಿ ಮೇಲೆ ಅನುಮಾನ ಇದ್ದವರು ಇದನ್ನು ಓದಲೇ ಬೇಕು.
ಸಂಗಾತಿ ಮೇಲೆ ಅನುಮಾನ ಪಡುವುದಕ್ಕಿಂತ ಅನುಮಾನದಿಂದ ಎದುರಾಗುವ ಸಮಸ್ಯೆಗಳನ್ನು ಬೇಗನೇ ಬಗೆಹರಿಸಿಕೊಳ್ಳದೆ ಮುಂದುವರೆಸುವುದು ದೊಡ್ಡ ತಪ್ಪು.
ನಿಮ್ಗೆ ನಿಮ್ಮ ಸಂಗಾತಿ ಮೇಲೆ ಅನುಮಾನ ಬಂದರೆ ಹೀಗೆ ಮಾಡಿ.
* ವಾಸ್ತವ ಅರಿಯುವ ಕೆಲಸ ಮಾಡಿ. ಸತ್ಯ-ಸುಳ್ಳು, ಸರಿ-ತಪ್ಪು ತಿಳಿದುಕೊಳ್ಳಿ.
*ನಿಮ್ಮದೇ ಸರಿ ಎಂಬುದು, ನೀವು ಅಂದುಕೊಂಡಿದ್ದೇ ಸರಿ ಎಂದುಕೊಳ್ಳಬೇಡಿ. ನೀವು ಅಂದುಕೊಂಡಿರೋದೇ ಸತ್ಯ ಅಲ್ಲ ಎಂಬುದನ್ನು ತಿಳಿದು ಮಾತಾಡಿ ಬಗೆಹರಿಸಿಕೊಳ್ಳಿ.
* ನಿಮ್ಮ ಸಂಗಾತಿಯ ಬಗ್ಗೆ ಎಲ್ಲದಕ್ಕೂ ಅಪಾರ್ಥ ಕಲ್ಪಿಸಿಕೊಳ್ಬೇಡಿ. ಪದೇ ಪದೇ ಪ್ರಶ್ನಿಸ ಬೇಡಿ.
*ಅವರು ನಿಮ್ಮ ಕೈ ತಪ್ಪಿ ಹೋಗುತ್ತಾರೆ ಎಂಬ ಭಾವನೆ ನಿಮ್ಮನ್ನು ಅವರಿಂದ ಮತ್ತಷ್ಟು ದೂರ ಮಾಡುತ್ತದೆ.
ಏನೇ ಅನುಮಾನವಿದ್ದರೂ ಮಾತಾಡಿ ಬಗೆಹರಿಸಿಕೊಳ್ಳಿ.