ದೇಶದಲ್ಲಿ ಸರಕು ಸೇವೆಗಳ ದರ ಏರಿಕೆಯಾದ್ರೆ ಯಾರ್ತಾನೆ ಆಗ್ಲಿ ಬಿಡಿ ಅಂತ ಹೇಳ್ತಾರೆ ಹೇಳಿ..? ಈ ಸರ್ಕಾರ ಬಂದಿದ್ದೇ ಬಂದಿದ್ದು ಎಲ್ಲಾ ಬೆಲೇನು ಗಗನಕ್ಕೇರ್ತಪ್ಪಾ ಅಂತ ಬೈತಾನೆ ಇರ್ತಾರೆ. ಅದೇ ರೀತಿ ಪೆಟ್ರೋಲ್ ಬೆಲೆ ಏರಿಕೆ ಕಂಡಾಗಲೂ ಅಷ್ಟೆ. ತಿಂಗಳಿಗೆ ಎರಡು ಮೂರು ಬಾರಿ ಪೆಟ್ರೋಲ್ ಬೆಲೆ ಏರಿಕೆ ಕಂಡ್ರೆ ಇತ್ತ ಸಾಮಾನ್ಯ ಜನರ ಎದೆ ಬಡಿತಾನು ಅದೇ ಪ್ರಮಾಣದಲ್ಲಿ ಏರಿಕೆಯಾಗುತ್ತೆ. ಇನ್ನು ನಮ್ ದೇಶದಲ್ಲಿ ಯಾವುದಕ್ಕೆ ಬೇಡಿಕೆ ಇದಿಯೋ ಇಲ್ವೋ ಗೊತ್ತಿಲ್ಲ ತೈಲೋತ್ಪನ್ನಗಳಿಗೆ ಮಾತ್ರ ಭಾರಿ ಬೇಡಿಕೆ ಇದೆ. ನಾಳೆ ಪೆಟ್ರೋಲ್ ಏರಿಕೆ ಆಗುತ್ತೆ ಅನ್ನೋ ಕ್ಲೂ ಸಿಕ್ಕಿದ್ರೆ ಸಾಕು ಬಂಕ್ ಮುಂದೆ ಸಾಲು ಸಾಲು ವಾಹನಗಳು ನಿಲ್ತಾವೆ. ವಿಪರ್ಯಾಸ ಅಂದ್ರೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ್ರೂ ಕೂಡ ನಮ್ಮ ದೇಶದಲ್ಲಿ ಮಾತ್ರ ಅದೇ ಬೆಲೆಯಲ್ಲಿ ಮಾರಾಟವಾಗ್ತಾ ಇರುತ್ತೆ. ಈ ರೀತಿಯ ವ್ಯವಸ್ಥೆ ನಮ್ಮ ದೇಶದಲ್ಲಿ ಬಿಟ್ರೆ ವಿಶ್ವದ ಯಾವುದೇ ರಾಷ್ಟ್ರದಲ್ಲು ಕಂಡು ಬರೋದಿಲ್ಲ ಅನ್ಸುತ್ತೆ ನೋಡಿ. ನಮ್ಮ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75 ರೂಪಾಯಿ. ಈ ದರದಲ್ಲಿ ಯಾವಾಗ ಬೇಕಾದ್ರೂ ವ್ಯತ್ಯಾಸ ಕಾಣ್ಬೋದು. ಹಾಗಾದ್ರೆ ಯಾವ ಯಾವ ದೇಶದಲ್ಲಿ ಪೆಟ್ರೋಲ್ ದರ ಕಡಿಮೆ ಇದೆ..? ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟಿರ್ಬೋದು ಅಂತ ತಿಳಿಯೋ ಕುತೂಹಲ ನಿಮ್ಗಿದ್ರೆ ಅಂತಹ ಟಾಪ್-10 ದೇಶಗಳ ಪೆಟ್ರೋಲ್ ರೇಟ್ ಪಟ್ಟಿನ ನಾವ್ ತೋರುಸ್ತೀವಿ ನೋಡಿ.
ನಂ.1 ವೆನೆಜುವೆಲಾ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.02 ಡಾಲರ್ (1.36ರೂ)
ನಂ.2 ಸಿರಿಯಾ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.05 ಡಾಲರ್ (3.41ರೂ)
ನಂ.3 ಲಿಬಿಯಾ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.12 ಡಾಲರ್ (8.18ರೂ)
ನಂ.4 ಸೌದಿ ಅರೇಬಿಯಾ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.15 ಡಾಲರ್ (10.22ರೂ)
ನಂ.5 ಟರ್ಕ್ ಮೆನಿಸ್ತಾನ್. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.21 ಡಾಲರ್ (14.30ರೂ)
ನಂ.6 ಕುವೈತ್. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.22 ಡಾಲರ್ (14.98ರೂ)
ನಂ.7 ಇರಾನ್. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.24 ಡಾಲರ್ (16.35ರೂ)
ನಂ.8 ಬಹ್ರೇನ್. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.25 ಡಾಲರ್ (17.03ರೂ)
ನಂ.9 ಕತಾರ್. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.25 ಡಾಲರ್ (17.3ರೂ)
ನಂ.10 ಆಲ್ಜೀರಿಯಾ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ: 0.25 ಡಾಲರ್ (17.3ರೂ)
ಇದ್ರಲ್ಲಿ ಟಾಪ್-1 ಲಿಸ್ಟ್ ನಲ್ಲಿರುವ ವೆಜುವೆಲಾದಲ್ಲಿ ಕಾರ್ ಫುಲ್ ಟ್ಯಾಂಕ್ ಮಾಡ್ಸೋಕೆ ಕೇವಲ 65ರೂ. ಇದ್ರೆ ಸಾಕು. ಅದೇ ನಮ್ ದೇಶದಲ್ಲಿ 5.250ರೂ. ಬೇಕು..!
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್
ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ
ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!
ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!