ಬೆಂಗಳೂರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ ನಾರಾಯಣ ಸ್ವಾಮಿ ರವರು ತಮ್ಮ ಹುಟ್ಟು ಹಬ್ಬವನ್ನು ಸೆಪ್ಟೆಂಬರ 2ರ ಶುಕ್ರವಾರದಂದು ಜಗದೀಶ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಇವರ ಹುಟ್ಟು ಹಬ್ಬಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳು ಶುಭ ಹಾರೈಸುತ್ತಿದ್ದಾರೆ.
ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಇವರು ವಿದ್ಯಾರ್ಥಿ ದೆಸೆಯಿಂದಲೇ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ, ಸತತ 3 ಬಾರಿ ಕೆಪಿಸಿಸಿ ಸದಸ್ಯರಾಗಿ, ಪಕ್ಷ ವಹಿಸಿದ್ದ ಹಲವಾರು ಅತ್ಯುನ್ನತ ಜವಾಬ್ದಾರಿಗಳನ್ನು ಅತ್ಯಂತ ದಕ್ಷತೆಯಿಂದ ಹಾಗು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಕಾಂಗ್ರೆಸ್ ಪರಿವಾರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಇದೀಗ ಎಂ. ನಾರಾಯಣ ಸ್ವಾಮಿ ಅವರು ಬೆಂಗಳೂರು ನಗರಾದ್ಯಂತ ಹಲವಾರು ಅಭಿವೃದ್ದಿ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಎಲ್ಲರ ಮನೆಮಾತಾಗಿದ್ದು, ಶಾಸಕರಿಗೆ ಎಲ್ಲಡೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಪ್ರಸ್ತುತ ಗ್ರಂಥಾಲಯ ಹಾಗೂ ಅಧೀನ ಶಾಸನ ರಚನಾ ಸಮಿತಿಗಳ ಸದಸ್ಯರಾಗಿರುವ ಶ್ರೀಯುತ ಎಂ ನಾರಾಯಣ ಸ್ವಾಮಿ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಶಾಸಕರ ನಿವಾಸದ ಬಳಿ ಉಚಿತ ರಕ್ತದಾನ ಶಿಬಿರವನ್ನೂ ಸಹ ಆಯೋಜಿಸಲಾಗಿದೆ.
ಶಾಸಕರ ಹುಟ್ಟು ಹಬ್ಬಕ್ಕೆ ರಾಷ್ಟ್ರ ಹಾಗೂ ರಾಜ್ಯದ ರಾಜಕೀಯ ಮುಖಂಡರುಗಳು, ಶಾಸಕ ಮಿತ್ರರು ಜೊತೆಗೆ ಜಯ ಕರ್ನಾಟಕ ಸಂಘ ಮತ್ತು ಹಲವಾರು ಸಂಘಟನೆಗಳು ಸೇರಿದಂತೆ ರಾಜ್ಯದ ಹಲವಾರು ಭಾಗಗಳಿಂದ ಅಭೀಮಾನಿಗಳು ಶುಭ ಕೋರಿದ್ದಾರೆ
POPULAR STORIES :
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.