ಡಿ.24ರಿಂದ ಜನವರಿ 2ರವರೆಗೆ 10 ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾಗಿ ಉತ್ಸವ ನಡೆಯಲಿದೆ. ಇದಕ್ಕಾಗಿ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಡಿಸೆಂಬರ್ 24ರ ಸಂಜೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಈ ಬಾರಿ ವಿವಿಧ ಬಣ್ಣ ಬಣ್ಣದ ಪುಷ್ಪಗಳಿಂದ ಹಲವು ಕಲಾಕೃತಿಗಳನ್ನ ನಿರ್ಮಿಸಲಿದ್ದು, ಪ್ರಮುಖವಾಗಿ 55 ಅಡಿ ಉದ್ದ, 12 ಅಡಿ ಅಗಲ, 28 ಅಡಿ ಎತ್ತರದ ಕಾಶಿ ವಿಶ್ವನಾಥ ದೇಗುಲ ಮಾದರಿ ಚಿತ್ರ, ಸಾವಿತ್ರಿ ಬಾಯಿ ಫುಲೆ, ನಮೀಬಿಯಾದ ಆಮಾದಾದ ಚೀತಾಗಳು,
ಜಯಚಾಮರಾಜ ಒಡೆಯರ್ ಜೊತೆ ಸರ್.ಎಂ.ವಿಶ್ವೇಶ್ವರಯ್ಯ ಸಂಭಾಷಣೆ ಮಾಡ್ತಿರುವ ಚಿತ್ರಗಳನ್ನ ಹೂವಿಂದ ನಿರ್ಮಿಸಲಾಗುತ್ತೆ.
ಜೊತೆಗೆ ಪ್ರತಿ ನಿತ್ಯ ರಾತ್ರಿ 7 ರಿಂದ 9 ಗಂಟೆವರೆಗೆ ಅರಮನೆಗೆ ದೀಪಾಲಂಕಾರ ಮಾಡಲಾಗಿರುತ್ತೆ. ಡಿ.31ರಂದು ರಾತ್ರಿ 11 ರಿಂದ 12 ಗಂಟೆವರೆಗೆ ಪೊಲೀಸ್ ಬ್ಯಾಂಡ್ ನೆರವೇರಲಿದ್ದು, ಹೊಸ ವರ್ಷಾಚರಣೆ ಪ್ರಯುಕ್ತ ಶಬ್ಧ ರಹಿತ ಪಟಾಕಿ ಸಿಡಿತವೂ ಇರಲಿದೆ. ಮಾಗಿ ಉತ್ಸವಕ್ಕಾಗಿಯೇ 50 ಲಕ್ಷ ರೂ. ಅನುದಾನ ಕೋರಿ ಪ್ರವಾಸೋದ್ಯಮ ಇಲಾಖೆ ಮೂಲಕ ಸರ್ಕಾರಕ್ಕೆ ಡಿಸಿ ರಾಜೇಂದ್ರ ಪತ್ರ ಬರೆದಿದ್ದಾರೆ. ಈ ಮೂಲಕ ವರ್ಷಾಂತ್ಯದಲ್ಲಿ ಮೈಸೂರಿಗೆ ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.