ಗಣರಾಜ್ಯೋತ್ಸವಕ್ಕೆ ಬಿಡುಗಡೆಯಾಗ್ತಿದೆ ಮದಗಜದ 3ಡಿ ಮೋಷನ್ ಟೀಸರ್..

admin
1 Min Read

ಗಣರಾಜ್ಯೋತ್ಸವಕ್ಕೆ ಬಿಡುಗಡೆಯಾಗ್ತಿದೆ ಮದಗಜ ಚಿತ್ರದ 3ಡಿ ಮೋಷನ್ ಟೀಸರ್.. 

ಶ್ರೀಮುರುಳಿ ಅಭಿನಯದ ಮದಗಜ ತಂಡ ಸಂಕ್ರಾಂತಿ ಹಬ್ಬದಂದು ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಇದೀಗ ಮದಗಜ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರ ಬಂದಿದೆ. ಅದೇ ಮದಗಜ ಚಿತ್ರದ 3ಡಿ ಮೋಷನ್ ಟೀಸರ್ ಬಿಡುಗಡೆಯಾಗಲಿದೆ. ಗಣರಾಜ್ಯೋತ್ಸವ ದಿನದಂದು ಮದಗಜ ಚಿತ್ರದ 3ಡಿ ಮೋಷನ್ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರಿಸಿದೆ. ಇನ್ನು ಭರಾಟೆ ಚಿತ್ರದಲ್ಲಿ ಸದ್ಯ ಬ್ಯೂಸಿ ಇರುವ ಶ್ರೀಮುರಳಿ, ಈ ಚಿತ್ರದ ಚಿತ್ರೀಕರಣ ಮುಗಿದ ಮೇಲೆ ಮದಗಜ ಚಿತ್ರತಂಡವನ್ನು ಸೇರಲಿದ್ದಾರೆ.ಶ್ರೀಮುರಳಿ ಅಭಿನಯಿಸುತ್ತಿರುವ ಮದಗಜ ಚಿತ್ರಕ್ಕೆ ಉಮಾಪತಿ ಎಸ್ ಬಂಡವಾಳ ಹೂಡುತ್ತಿದ್ದಾರೆ. ಅಯೋಗ್ಯ ಸಿನಿಮಾದ ನಿರ್ದೇಶಕ ಮಹೇಶ್ ಕುಮಾರ್ ಈ ಚಿತ್ರವನ್ನು ಕೂಡ ನಿರ್ದೇಶಿಸುತ್ತಿದ್ದಾರೆ. ಹಾಗೆ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿದೆ.

Share This Article
Leave a Comment