7.65 ಟಿಎಂಸಿ ನೀರು ಬಿಡಲು ಸಾಧ್ಯವಿಲ್ಲ ಎಂದ ಮಹದಾಯಿ ನ್ಯಾಯಾಧೀಕರಣ.
ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ತೀರ್ಪು ಇಂದು ಹೊರಬಿದ್ದಿದ್ದು, ಕನಾಟಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿ ಆದೇಶ ಹೊರಡಿಸಿದೆ.
ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸರುವ ನ್ಯಾ. ಪಾಂಚಾಲ್ ನೇತೃತ್ವದ ನ್ಯಾಯಾಧಿಕರಣ ಕರ್ನಾಟಕಕ್ಕೆ 7.65 ಟಿಎಂಸಿ ಅಡಿ ನೀರು ಬಳಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಧಿಕರಣ, ಈ ತೀರ್ಪಿನಿಂದ ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದೆ.
ಗೋವಾ ಮತ್ತು ಕರ್ನಾಟಕ ಪರ ವಕೀಲರು ಸೋಮವಾರ ಮಂಡಿತವಾದ ವಾದವನ್ನು ಆಲಿಸಿದ ಜೆ.ಎಂ ಪಾಚಾಲ್ ನೇತೃತ್ವದ ತ್ರೀಸದಸ್ಯ ಪೀಠವು ಮಹದಾಯಿ ತೀರ್ಪನ್ನು ಜು.27ಕ್ಕೆ ಕಾಯ್ದಿರಿಸಲಾಗಿತ್ತು. ಈ ವೇಳೆ ಗೋವಾ ಮಹದಾಯಿ ನದಿ ನೀರಿನ ವಿವಾಧಕ್ಕೇ ಭಾರಿ ವಿರೋಧ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ನೀರನ್ನು ಕೊಡಬಾರದು ಎಂದು ಎಚ್ಚರಿಕೆ ನೀಡಿತ್ತು. ಮಲಪ್ರಭಾ ನದಿಯು ಕೃಷ್ಣಾ ಕಣಿವೆಗೆ ಸೇರಿದ್ದು ನದಿಗೆ ನಿರ್ಮಿಸಿರುವ ಜಲಾಶಯಕ್ಕಾಗಿ ಕರ್ನಾಟಕವು ಮಹದಾಯಿ ನದಿ ಕಣಿವೆಗೆ ಬೇಡಿಕೆ ಸಲ್ಲಿಸಿರುವುದು ಸರಿಯಲ್ಲ ಎಂಬುದು ಗೋವಾ ವಾದವಾಗಿದೆ.
ಮಹದಾಯಿ ನದಿ ನ್ಯಾಯಾಧಿಕರಣ ತೀರ್ಪು ಹೊರ ಬದ್ದ ನಂತರ ಮಾತನಾಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, ರಾಜ್ಯದ ಹಿತ ಕಾಪಾಡಲು ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ತೀರ್ಪಿನ ಸಂಪೂರ್ಣ ಮಾಹಿತಿ ನನಗೆ ಸಿಕ್ಕಿಲ್ಲ, ಈ ಕುರಿತು ಸರ್ಕಾರಿ ವಕೀಲರು ಹೆಚ್ಚಿನ ಮಾಹಿತಿ ನೀಡುತ್ತಾರೆ ನೆಲ ಜಲ ಭಾಷೆಯ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಡಲು ಸಿದ್ದರಿದ್ದೇವೆ. ಸರ್ವ ಪಕ್ಷ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಹದಾಯಿ ತೀರ್ಪಿನ ಕುರಿತು ಮಾತನಾಡಿದ ಜಯ ಕರ್ನಾಟಕ ಸಂಘದ ದೀಪಕ್, ಈ ತೀರ್ಪಿನಿಂದ ಭಾರಿ ಅಘಾತ ಉಂಟಾಗಿದೆ, ಈಗಾಗಲೇ ಗದಗ್ ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ನಮ್ಮ ಸಂಘದವರು ರೈತರ ಜೊತೆ ಕೈಜೋಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೆಯೇ ಇಂದು ಸಂಜೆ 5 ಗಂಟೆಗೆ ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಜನಪರ ಕಾಳಜಿವುಳ್ಳ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಮನವಿಯನ್ನು ಸಲ್ಲಿಸಲಿದ್ದೇವೆ. ರಾಜ್ಯದ ಜನರ ಹಿತ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಮಹದಾಯಿ ತೀರ್ಪಿನ ಕುರಿತು ಕೇಂದ್ರದ ಜೊತೆ ಆದಷ್ಟು ಬೇಗ ಮಾತುಕತೆ ನಡೆಸಿ ಸರಿಯಾದ ನ್ಯಾಯ ಒದಗಿಸಿಕೊಡುವಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೂ ನಾವು ಸಿಧ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
POPULAR STORIES :
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!