ಹುಡ್ಗಿ ಕೊಟ್ಟ ಲವ್ ಲೆಟರನ್ನು ಅಮ್ಮನಿಗೆ ಕೊಟ್ಟು ನಕ್ಕಿದ್ದ ಬೆಣ್ಣೆ ನಗರಿ ಹುಡ್ಗ…!

Date:

ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ ಅಂತ ಹುಡುಗರು ಹುಡ್ಗೀರ ಹಿಂದೆ ಬೀಳೋದು ಕಾಮನ್. ಪ್ರೀತ್ಸು ಅಂತ ಹುಡಿಗಿಯರೇ ಹುಡುಗರ ಹಿಂದೆ ಬೀಳೋದು ತುಂಬಾ ಅಪರೂಪ…! ಈ ವಿಷ್ಯದಲ್ಲಿ ಆ್ಯಂಕರ್ ಮಂಜುನಾಥ್ ಅದೃಷ್ಟವಂತರೇ…! ಆದ್ರೆ, ಯಾವ ಹುಡುಗಿಯ ಪ್ರಪೋಸ್ ಅನ್ನೂ ಒಪ್ಪಿಕೊಂಡಿಲ್ಲ…! ಕಾರಣ ಪ್ರೀತ್ಸೋಕೆ ಮುಂದೆ ಬೇಜಾನ್ ಟೈಮ್ ಇರುತ್ತೆ, ಅದರಲ್ಲಿ ಕಳೆದೋದ್ರೆ ಸಾಧನೆಗೆ ಸಮಯ ಕೂಡಿ ಬರಲ್ಲ ಅಂತ ತನ್ನ ವೃತ್ತಿ ಕಡೆ ಹೆಚ್ಚು ‘ಫೋಕಸ್’ ಮಾಡ್ತಿದ್ದಾರೆ.

ಮಂಜುನಾಥ್ ದಾವಣಗೆರೆ… ಚಂದದ ಮಾತುಗಾರ…ಎಷ್ಟೋ ಹುಡುಗಿಯರ ನಿದ್ರೆಗೆಡಿಸಿದ ಚಿತ್ತ ಚೋರ.


ದಾವಣೆಗೆರೆಯ ತಿಪ್ಪೇಸ್ವಾಮಿ ಮತ್ತು ಸುವರ್ಣಮ್ಮ ದಂಪತಿಯ ಮಗ ಮಂಜುನಾಥ್. ಅಕ್ಕ ಅನಿತಾ, ಬಾವ ವಿರುಪಾಕ್ಷ. ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಿಕ್ಷಣ ಪಡೆದ್ದು ದಾವಣಗೆರೆಯ ಡಿಆರ್‍ಆರ್ ಶಾಲೆಯಲ್ಲಿ. ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಎಂಎಸ್ ಬಿ ಕಾಲೇಜಿನಲ್ಲಿ ಪದವಿ (ಬಿಎ), ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.


ಪಿಯುಸಿ ಓದುವಾಗ ಕ್ಲಾಸ್ ಮೇಟ್ ಒಬ್ಬಳು ಮಂಜುನಾಥ್ ಅವರಿಗೆ ಲವ್ ಲೆಟರ್ ಕೊಟಿದ್ದಳಂತೆ. ಮಂಜು ಆ ಲೆಟರ್ ಅನ್ನು ತಗೊಂಡೋಗಿ ಅಮ್ಮನಿಗೆ ಕೊಟ್ಟು ನಕ್ಕಿದ್ರಂತೆ…!


ಡಿಗ್ರಿಗೆ ಬಂದ ಮೇಲೂ ಹುಡುಗಿಯರ ಕಾಟ ತಪ್ಪಿರ್ಲಿಲ್ಲವಂತೆ. ಮೂವರು ಹುಡುಗಿಯರು ಪ್ರಪೋಸ್ ಮಾಡಿದ್ರಂತೆ…! ಮಾಸ್ಟರ್ ಡಿಗ್ರಿಯಲ್ಲೂ ಬೇರೆ ಬೇರೆ ಡಿಪಾರ್ಟ್‍ಮೆಂಟ್ ಹುಡ್ಗೀರು ಕಣ್ಣಾಕಿದ್ರು…! ಈಗಂತೂ ಸಿಕ್ಕಾಪಟ್ಟೆ ಜನ ಹುಡುಗಿಯರು ಮೆಸೇಜ್ ಮಾಡ್ತಾರೆ…!ಐ ಲವ್ ಯು ಅಂತೇಳ್ತಾರೆ… ಅದ್ಯಾವುದಕ್ಕೂ ಸೊಪ್ಪು ಹಾಕದೆ ತಾನಾಯ್ತು ತನ್ನ ಕೆಲ್ಸ ಆಯ್ತು ಅಂತ ಬ್ಯುಸಿಯಾಗಿದ್ದಾರೆ ಫೋಕಸ್ ಟಿವಿಯ ನಿರೂಪಕ ಮಂಜುನಾಥ್.

ಮಂಜುನಾಥ್ ಅವರಿಗೆ ಪತ್ರಿಕೋದ್ಯಮ ಆಸಕ್ತಿ ಇತ್ತು ಆದ್ರೆ ಬಂದಿದ್ದು ಆಕಸ್ಮಿಕ. ಎಸ್ ಎಸ್ ಎಲ್ ಸಿ ಆದ್ಮೇಲೆ ಕಂಪ್ಯೂಟರ್ ಸೈನ್ಸ್ ಡಿಪ್ಲೋಮ ಮಾಡ್ಬೇಕು ಅಂತಿದ್ರು. ದಾವಣಗೆರೆಯಲ್ಲಿ ಅವಕಾಶ ಸಿಗದೇ ಬೇರೆ ಕಡೆಗೆ ಹೋಗ್ಬೇಕಾಯ್ತು. ಊರು ಬಿಟ್ಟು ಹೋಗಲು ಮನಸ್ಸು ಬರದೇ ಆಟ್ರ್ಸ್ ವಿಷಯ ತಗೊಂಡು ಪಿಯುಸಿ ಮಾಡಿದ್ರು.


ಡಿಗ್ರಿ ಮುಗಿದ ಮೇಲೂ ಅಷ್ಟೇ ಪತ್ರಿಕೋದ್ಯಮ ಎಂಎ ಯೋಚನೆ ಮಾಡಿರ್ಲಿಲ್ಲ. ಕೆಲಸಕ್ಕೆ ಅಂತ ಬೆಂಗಳೂರಿಗೆ ಬಂದ್ರು. ಜಾಹಿರಾತೊಂದನ್ನು ನೋಡಿ ಅಭಿನಯ ತರಬೇತಿ ಶಾಲೆಯೊಂದಕ್ಕೆ ಸೇರಿದ್ರು. ಮೂರು ದಿನ ತರಗತಿ ಅಟೆಂಡ್ ಮಾಡಿದ್ರೇನೋ ಅಷ್ಟೇ. ಅಕ್ಕನಿಗೆ ಹೆರಿಗೆ ಆಗಿದ್ರಿಂದ ಮನೆಗೆ ಹೋಗ್ಬೇಕಾಯ್ತು. ಅಮ್ಮ ಮನೆಗೆ ಬಾ ಎಂದು ಕರೆದಾಗ ಹೋಗದೇ ಇಲ್ಲ ಎನ್ನಲಾಗದ ಐದೇ ಐದು ದಿನಕ್ಕೆ ಊರಿಗೆ ವಾಪಸ್ಸಾದ್ರು.


ಅಭಿನಯ ತರಬೇತಿ ಸಂಸ್ಥೆಯವರು ದುಡ್ಡು ವಾಪಸ್ಸು ಕೇಳಿದ್ರೂ ಕೊಟ್ಟಿರಲಿಲ್ಲ. ಮುಂದೆ ಆ ಸಂಸ್ಥೆ ನಡೆಸುತ್ತಿದ್ದವ ಚಾನಲ್ ಒಂದರಲ್ಲಿ ವೀಡಿಯೋ ಎಡಿಟರ್ ಆಗಿ ಮಂಜು ಅವರ ಕಣ್ಣಿಗೆ ಬಿದ್ದಿದ್ದ…! ಅವನನ್ನು ನೋಡಿಯೂ ಮಂಜು ಸುಮ್ಮನಿದ್ರು. ನಂತರ ಆತನೇ ಅವಮಾನದಿಂದ ಸಂಸ್ಥೆ ಬಿಟ್ಟು ಹೊರ ಹೋಗಿದ್ದು ಇತಿಹಾಸ.


ಬೆಂಗಳೂರಿಂದ ವಾಪಸ್ಸಾದ ಮೇಲೆ ಮಂಜು ದಾವಣಗೆರೆ ಯೂನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಅಪ್ಲಿಕೇಶನ್ ಹಾಕಿದ್ರು. ಮೆರೀಟ್ ಲೀಸ್ಟ್ ನಲ್ಲಿ 800 ಮಂದಿಯಲ್ಲಿ 2ಸ್ಥಾನದಲ್ಲಿದ್ರು. ಆದ್ರೆ ಕೌನ್ಸಿಲಿಂಗ್ ಬಗ್ಗೆ ಮಾಹಿತಿ ಇರಲಿಲ್ಲ. ವಿವಿಯಿಂದ ಫೋನ್ ಬಂದಾಗಲೇ ಗೊತ್ತಾಗಿದ್ದು…!


ಅಡ್ಮಿಶನ್ ಗೆ ಅಂತ ಮಂಜು ಮತ್ತು ಗೆಳೆಯರಾದ ಸಂತು, ಚಂದ್ರು ಯೂನಿವರ್ಸಿಟಿಗೆ ಹೋಗುವಾಗ. ಯಾರೋ ಪತ್ರಿಕೋದ್ಯಮದ ಬಗ್ಗೆ ಮಾತಾಡ್ತ ಇದ್ದುದು ಕಿವಿಗೆ ಬಿತ್ತು. ಡಿಪಾರ್ಟ್‍ಮೆಂಟ್ ಗೆ ಹೋಗಿ ವಿಚಾರಿಸಿದಾಗ ಕೂಡಲೇ ಅರ್ಜಿ ಹಾಕಿ ಅಂದ್ರು. ಅರ್ಜಿ ಹಾಕಿದ್ರು, ಮೂವರೂ ಸೆಲೆಕ್ಟ್ ಆದ್ರು. ದಾವಣಗೆರೆ ವಿವಿಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಮೊದಲ ಬ್ಯಾಚ್ ಮಂಜು ಅವರದ್ದು. ಇಲ್ಲಿ ಪ್ರಾದ್ಯಾಪಕ ವಿನಯ್ ಅವರು ಹೇಳಿಕೊಟ್ಟ ಮಾಧ್ಯಮ ಅ, ಆ, ಇ,ಈ, ಅವರು ನೀಡಿದ ಒಳ್ಳೆಯ ಮಾರ್ಗದರ್ಶನ ತುಂಬಾ ದೊಡ್ಡದು ಎನ್ನುತ್ತಾರೆ ಮಂಜು.


ದಾವಣಗೆರೆ ವಿವಿಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಪ್ರಪ್ರಥಮ ಗೋಲ್ಡ್ ಮೆಡಲಿಸ್ಟ್ ಬೆಣ್ಣೆನಗರಿಯ ಇದೇ ಮಂಜುನಾಥ್.
ಶಾಲಾ-ಕಾಲೇಜು ದಿನಗಳಿಂದಲೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಸ್ತಿದ್ರು ಮಂಜು. ನಾಟಕಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ರು. ಶಿಕ್ಷಕರು,ಉಪನ್ಯಾಸಕರು ಇವರೊಳಗಿನ ಕಲಾವಿದ, ಮಾತುಗಾರನನ್ನು ಗುರುತಿಸಿದ್ರು. ನೀನು ಆ್ಯಂಕರ್ ಆಗಬಹುದು ಅಂದಿದ್ರು. ಎಸ್‍ಎಸ್‍ಎಲ್‍ಸಿಯಲ್ಲಿರುವಾಗಲೇ ನಾಟಕ ತಂಡವೊಂದಕ್ಕೆ ಸೇರಲು ಆಫರ್ ಬಂದಿತ್ತು.


ನಿರೂಪಕರನ್ನು ಟಿವಿ ಪರದೆಯಲ್ಲಿ ಕಂಡು ನಾನು ಇವರಂಥೆ ಆಗಲು ಆಗುತ್ತ…? ಇಲ್ಲ ಅಂದುಕೊಂಡಿದ್ರು ಮಂಜು. ಮುಂದೆ ನಿರೂಪಣೆಯೇ ವೃತ್ತಿ ಆಯಿತು…!


2014ರಲ್ಲಿ ಮಾಸ್ಟರ್ ಡಿಗ್ರಿ ಪರೀಕ್ಷೆ ಮುಗಿದರಲಿಲ್ಲ. ಆಗಿನ್ನೂ ಪ್ರಜಾ ಟಿವಿ ಹೊಸದಾಗಿ ಆರಂಭವಾಗುತ್ತಿತ್ತು. ಇಂಟರ್ ವ್ಯೂ ಗೆ ಕರೆದಿದ್ರು. ಎಲ್ಲಾ ವಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳಂತೆ ದಾವಣಗೆರೆ ವಿವಿ ಬ್ಯಾಚ್ ಕೂಡ ಹೋಯ್ತು.


ಮಂಜು ಮತ್ತವರ ಸಹಪಾಠಿಗಳು ಇಂಟರ್ ವ್ಯೂ ಗಿಂತ ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಬಂದಿದ್ರು. ಹೇಗಿದ್ರು ಬಂದಿದ್ದೀವಲ್ಲ…? ಟಿವಿ9ಗೆ ಹೋಗೋಣ ಅಂತ ಟಿವಿ9ನಲ್ಲಿ ಇಂಟರ್ ವ್ಯೂ ಅಟೆಂಡ್ ಮಾಡಿದ್ರು. ಮರು ದಿನ ಪ್ರಜಾ ಟಿವಿಯಲ್ಲಿ ಇಂಟರ್ ವ್ಯೂ ಆಯ್ತು.

ಎಕ್ಸಾಮ್ ಮುಗಿಸಿಕೊಂಡು ಬಂದು ಎಲ್ಲಾ ಚಾನಲ್ ಗಳಿಗೆ ರೆಸ್ಯೂಮ್ ಕೋಡೋಕೆ ಸುತ್ತೋದಕ್ಕಿಂತ ಈಗಲೇ ಕೊಟ್ಟು ಹೋಗಿ ಬಿಡೋಣ ಎಂದು ಕಸ್ತೂರಿ, ಜೀ ಕನ್ನಡ, ಸಮಯ ಚಾನಲ್ ಗೆ ರೆಸ್ಯೂಮ್ ಕೊಟ್ಟು, ಇಂಟರ್ ವ್ಯೂ ಅಟೆಂಡ್ ಮಾಡಿ ಬಂದಿದ್ರು.


ಕಸ್ತೂರಿ, ಸಮಯ, ಪ್ರಜಾ ಎಲ್ಲದಕ್ಕು ಮಂಜು ಸೆಲೆಕ್ಟ್ ಆಗಿದ್ರು. ಟಿವಿ9ಗೂ ಆಯ್ಕೆಯಾಗೋ ಹಂತದಲ್ಲಿದ್ರು. ಆದರೆ, ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಪರೀಕ್ಷೆ ಮುಗಿದ ಮೇಲೆ ಪ್ರಜಾ ಬಳಗ ಸೇರಿದ್ರು. ಇಲ್ಲಿ ಎಂ. ಆರ್ ಸುರೇಶ್ ಅವರ ಸಪೋರ್ಟ್ ಹಾಗೂ ಮಾರ್ಗದರ್ಶನ ದೊರೆಯಿತು.


ಪ್ರಜಾದಲ್ಲಿ ಟ್ರೈನಿಯಾಗಿ 5 ತಿಂಗಳು ಕೆಲಸ ಮಾಡಿದ ಬಳಿಕ ಸಹೋದ್ಯೋಗಿ ರುದ್ರಮ್ಮ ಅವರಿಂದ ರಾಜ್ ನ್ಯೂಸ್ ನ ರಾಚಪ್ಪ ಸುತ್ತೂರು ಅವರ ಪರಿಚಯ ಆಗುತ್ತೆ. ಅವರಿಂದ ರಾಜ್ ನ್ಯೂಸ್ ನಲ್ಲಿ ಅವಕಾಶ ಸಿಕ್ತು. 2015ರಲ್ಲಿ ರಾಜ್ ಸೇರಿದ್ರು. ಹಮೀದ್ ಪಾಳ್ಯ ಅವರ ಪ್ರೋತ್ಸಾಹದಿಂದ ರಾಜ್ ಪರದೆ ಮೇಲೂ ಬರೋ ಅವಕಾಶ ಸಿಕ್ತು.


ಇಲ್ಲಿ ನಿಶ್ಚಿತ, ಮಾದೇಶ್, ಮಂಜುಳ, ಶಾಲಿನಿ, ತನುಜಾ ನೀಡಿದ ಪ್ರೋತ್ಸಾಹವವನ್ನು ಮಂಜು ನೆನಪು ಮಾಡಿಕೊಳ್ತಾರೆ.
2016ರಲ್ಲಿ ಜನಶ್ರೀ ಕಡೆಗೆ ಮಂಜು ಪಯಣ. ಅಲ್ಲಿ ಹಬೀಬ್, ಕಮಲಾಕ್ಷ್ಮಿ ಅವರಂತಹ ಅನುಭವಿ ಪತ್ರಕರ್ತರ ಪ್ರೋತ್ಸಾಹದಿಂದ ಗುರುತಿಸಿಕೊಂಡ್ರು. ತಾನೇನೆಂದು ಸಾಭೀತು ಪಡಿಸಿಕೊಂಡ್ರು.


‘ಡೇ ವಿತ್ ಲೀಡರ್’, ‘ಅರುಣೋದಯ’ ಕಾರ್ಯಕ್ರಮವನ್ನಿಲ್ಲಿ ನಡೆಸಿಕೊಟ್ಟಿದ್ರು. ಇನ್ನುಳಿದಂತೆ ನ್ಯೂಸ್, ಡಿಸ್ಕಷನ್ಸ್ ಇದ್ದಿದ್ದೇ.
ಈಗ ಹೊಸದಾಗಿ ಆರಂಭವಾದ ‘ಫೋಕಸ್ ಟಿವಿ’ಯಲ್ಲಿದ್ದಾರೆ. ಸುದ್ದಿ ನಿರೂಪಣೆ, ಡಿಸ್ಕಷನ್ಸ್ ಗಳನ್ನು ನಡೆಸಿಕೊಡ್ತಾರೆ.


ಈ ನಡುವೆ ‘ಸಿಎಂ ಗೆ ಒಂದು ಪತ್ರ’ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ ಇದು ಬಿಡುಗಡೆ ಆಗಿಲ್ಲ. ಸಾಕಷ್ಟು ಧಾರವಾಹಿ, ಸಿನಿಮಾಗಳಲ್ಲಿ ನಟಿಸಲು ಅವಕಾಶ ಬರುತ್ತಿದ್ದರೂ ಸ್ವಲ್ಪ ಸಮಯ ಸುದ್ದಿವಾಹಿನಿಯಲ್ಲೇ ಮುಂದುವರೆ ಬೇಕೆಂಬುದು ಮಂಜು ಅವರಾಸೆ. ಮುಂದಿನ ದಿನಗಳಲ್ಲಿ ಒಂದಲ್ಲ ಒಂದು ದಿನ ಮಂಜು ಬೆಳ್ಳಿತೆರೆ ಮೇಲೆ ಬಂದೇ ಬರುತ್ತಾರೆ. ಆ್ಯಂಕರ್ ಮಂಜು ನಟನಾಗಿಯೂ ಮಿಂಚಲಿ ಎಂದು ಹಾರೈಸೋಣ.


ವೃತ್ತಿ ಬದುಕಿನ ಮೊದ ಮೊದಲ ದಿನಗಳಲ್ಲಿ ‘ಇವನಿಂದ’ ಆಗದು ಎಂಬ ಮಾತನ್ನು ಕೆಲವರು ಮಂಜು ಬಗ್ಗೆ ಹೇಳಿದ್ರು…! ಕಾಲೇಜು ದಿನಗಳಲ್ಲಿ ತುಂಬಾ ಮುಗ್ಧರಾಗಿದ್ದ ಇವರನ್ನು ನೋಡಿ ಫ್ರೆಂಡ್ಸ್ ಇವನಾ..? ಏನ್ ಮಾಡ್ತಾನೆ ಬಿಡು ಗುರು ಅಂತಿದ್ರು. ಇವತ್ತು ಅವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟು ಕೊಂಡಿದ್ದಾರೆ…! ಅದಕ್ಕೇ ಹೇಳೋದು ಯಾರನ್ನೂ ಕಡೆಗಾಣಿಸ ಬಾರದು ಅಂತ.


ಮಂಜು ಮಾಸ್ಟರ್ ಡಿಗ್ರಿಗೆ ಅಪ್ಲಿಕೇಶನ್ ಹಾಕುವ ದಿನವೇ ಅಕ್ಕನ ಪುಟ್ಟ ಮಗ ತೀರಿಕೊಂಡಿದ್ದು…! ಆ ದಿನ ಅಳುತ್ತಾ ಪಿಜಿಗೆ ಅರ್ಜಿ ಹಾಕಿದ್ರು. ಮಾಸ್ಟರ್ ಡಿಗ್ರಿ ಮುಗಿದ ಮೇಲೆ ಬೆಂಗಳೂರಿಗೆ ಹೊರಟು ನಿಂತ ಮಂಜುಗೆ ಅಮ್ಮ ಇಲ್ಲೇ ಏನಾದ್ರು ಕೆಲಸ ಮಾಡು, ಬೆಂಗಳೂರು ಬೇಡ ಅಂತ ಹೇಳಿ ಅತ್ತಿದ್ರು…! ಈ ಎರಡು ಘಟನೆಗಳೆನ್ನೆಂದೂ ಮರೆಯಲು ಸಾಧ್ಯವಿಲ್ಲ ಅಂತಾರೆ ಮಂಜು.


ಮಂಜು ಅವರ ಚಿಕ್ಕಮ್ಮ ತಾನೇ ಜೊತೆಯಲ್ಲಿಟ್ಟುಕೊಂಡು, ಸಾಕಿ ಓದಿಸೋದಾಗಿ ತನ್ನ ಜೊತೆ ಬಾ ಎಂದು ಕೇಳಿಕೊಂಡಿದ್ರು. ಮಂಜು ಅವತ್ತು ಚಿಕ್ಕಮ್ಮನ ಮನೆಯಲ್ಲಿ ಬೆಳೆದಿದ್ರೆ ಇವತ್ತು ಮುಂಬೈಯಲ್ಲಿ ಅವರೊಡನೆಯೇ ಇರುತ್ತಿದ್ದರೇನೋ…?


ಅಪ್ಪ-ಅಮ್ಮ ಕಷ್ಟ ಏನೆಂದು ಒಂಚೂರು ಗೊತ್ತಾಗದಂತೆ ಮಂಜು ಅವರನ್ನು ಬೆಳೆಸಿದ್ರು. ಮುದ್ದಿನ ಮಗನಾಗಿ ಬೆಳೆದ, ಕಷ್ಟಗಳೆಂದರೇನು ಎಂಬುದರ ಅರಿವೇ ಇಲ್ಲದಿದ್ದ ಮಂಜು ಅವರಿಗೆ ಬೆಂಗಳೂರಿಗೆ ಬಂದ ಮೇಲೆ ಬದುಕಿನ ಕಷ್ಟಗಳು ಒಂದೊಂದಾಗೇ ತಿಳಿಯುತ್ತ ಬಂದವು.

ಹಸಿದಾಗ ಕೈಯಲ್ಲಿ ದುಡ್ಡಿದ್ದರೂ ಊಟ ಸಿಗದೆ ನೀರು ಕುಡಿದೇ ಮಲಗಬೇಕಾದ ಬೆಂಗಳೂರಿನ ಬ್ಯಾಚ್ಯುಲರ್ ಗಳ ಸ್ಥಿತಿ ಸಾಕಪ್ಪ ಸಾಕು ಅಂತ ಮಂಜುಗೂ ಅದೆಷ್ಟೋ ಬಾರಿ ಅನುಭವಕ್ಕೆ ಬಂದಿದೆ. ಇವನ್ನೆಲ್ಲಾ ನೆನೆಸಿಕೊಂಡು ಅಪ್ಪ-ಅಮ್ಮನ ಜೊತೆ ಬದುಕೋ ಬದುಕೇ ಸುಂದರ. ಊರೇ ಸ್ವರ್ಗ ಎನ್ನುತ್ತಾರೆ ಮಂಜು.


ಹ್ಞಾಂ ಕೊನೆದಾಗಿ ಮಂಜು ಅವರಿಗೆ ಪ್ರಪೋಸ್ ಮಾಡಬೇಕೆಂದಿರೋ ಹುಡ್ಗಿಯರಿಗೊಂದು ಟಿಪ್ಸ್, ನೀವು ಮಂಜು ಬಳಿ ಹೋಗಿ ಪ್ರೀತಿಸ್ತೀನಿ ಅಂದ್ರೆ ಉಪಯೋಗವಿಲ್ಲ. ಅವರ ಮನೆ ಅಡ್ರಸ್ ತಗೊಂಡು ಅವರ ಅಪ್ಪ-ಅಮ್ಮನನ್ನು ಭೇಟಿ ಮಾಡಿ. ಕಾರಣ ಮಂಜು ಅವರಿಗೆ ಲವ್ ಮ್ಯಾರೇಜ್ ಇಷ್ಟವಿಲ್ಲ…ಅರೆಂಜ್ ಮ್ಯಾರೇಜೇ ಆಗೋದಂತೆ…!

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

53) 03ಜನವರಿ 2018 : ದಿವ್ಯಶ್ರೀ

54) 04ಜನವರಿ 2018 : ಮಂಜುಳ ಮೂರ್ತಿ

55) 05ಜನವರಿ 2018 : ಅಭಿಷೇಕ್ ರಾಮಪ್ಪ

56) 06ಜನವರಿ 2018 : ರೋಹಿಣಿ ಅಡಿಗ

57) 07ಜನವರಿ 2018 :ಮಾದೇಶ್ ಆನೇಕಲ್

58) 08ಜನವರಿ 2018 :ಶ್ರುತಿ ಕಿತ್ತೂರು

59) 09ಜನವರಿ 2018 : ಕೆ.ಸಿ ಶಿವರಾಂ

ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

60)  11ಜನವರಿ 2018 : ಮಾರುತೇಶ್

61)  12ಜನವರಿ 2018 :ನೀತಿ ಶ್ರೀನಿವಾಸ್

62) 13ಜನವರಿ 2018 :ರಕ್ಷಾ ವಿ

ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

63) 15ಜನವರಿ 2018  :  ಸುಮ ಸಾಲಿಯಾನ್

64) 16ಜನವರಿ 2018  : ಶಕುಂತಲ

ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

65) 19 ಜನವರಿ 2018  : ವಸಂತ್ ಕುಮಾರ್ ಗಂಗೊಳ್ಳಿ

ಜನವರಿ 20 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

66)  21 ಜನವರಿ 2018  : ಮುದ್ದು ಮೀನ

67)  22 ಜನವರಿ 2018  : ಪ್ರಜ್ವಲ ಹೊರನಾಡು

ಜನವರಿ 23, 24 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

68)  25 ಜನವರಿ 2018  : ಮಂಜುನಾಥ್ ದಾವಣಗೆರೆ

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...