ಭಾರತದ ಸುಂದರಿ ಮಾನುಷಿ ಛಿಲ್ಲರ್ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದಾರೆ.
ಚೀನಾದ ಸನ್ಯಾ ಸಿಟಿಯಲ್ಲಿ ನಡೆದ 2017 ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಹರಿಯಾಣದ ಮಾನುಷಿ ಛಿಲ್ಲರ್ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದಾರೆ.
ಸುಮಾರು 108ರಾಷ್ಟ್ರಗಳ ಸುಂದರಿಯರು ಪಾಲ್ಗೊಂಡಿದ್ದರು. 2016ರ ವಿಶ್ವಸುಂದರಿ ಸ್ಟಿಫೇನಿ ಡೆಲ್ ವಲ್ಲೆ ಮಾನುಷ ಛಿಲ್ಲರ್‍ಗೆ ವಿಶ್ವಸುಂದರಿ ಕಿರೀಟ ತೊಡಿಸಿದರು.
1966ರಲ್ಲಿ ರೀಟಾ ಫರಿಯಾ, 1994ಲ್ಲಿ ಐಶ್ವರ್ಯ ರೈ, 1997ರಲ್ಲಿ ಡಯಾನ್ ಹೇಡನ್, 1999ರಲ್ಲಿ ಯುಕ್ತಾ ಮುಖಿ, 2000ನೇ ಇಸವಿಯಲ್ಲಿ ಪ್ರೀಯಾಂಕ ಚೋಪ್ರಾ ವಿಶ್ವಸುಂದರಿಯಾಗಿದ್ದರು. 17 ವರ್ಷದ ಬಳಿಕ ಮತ್ತೋರ್ವ ಭಾರತದ ಸುಂದರಿ ಮಾನುಷಿ ಛಿಲ್ಲರ್ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.