ಅಂತರಾಷ್ಟ್ರೀಯ ಮಟ್ಟದಲ್ಲಿ ಗಾಂಜಾ ಬೆಳೆ ನಿಷೇಧಿತವಾದ್ರೂ ಅದರ ಉತ್ಪನ್ನ ಮತ್ತು ಮಾರಾಟ ಮಾತ್ರ ನಿಂತಿಲ್ಲ. ಅದರ ವಿಸ್ತಾರ ಭಾರತವನ್ನೂ ಬಿಟ್ಟಿಲ್ಲ ಅನ್ಬೋದು. ದೇಶದಲ್ಲಿ ಮಾದಕ ದ್ರವ್ಯಗಳ ಮಾರಾಟ ನಿಷೇಧವಿದ್ದರೂ ಕೂಡ ಅದರ ವ್ಯಸನಿಗಳ ಪ್ರಮಾಣ ಮಾತ್ರ ಹೇಳ ತೀರದು..! ಪ್ರಾಣಕ್ಕೆ ಹಾನಿಯನ್ನುಂಟು ಮಾಡುವ ಈ ಮಾದಕ ದ್ರವ್ಯಕ್ಕೆ ಮಾರು ಹೋದ ಜನರೆ ಇಲ್ಲ. ಆದರೆ ನಾವು ಈಗ ಹೇಳೋಕೆ ಬಂದ ವಿಷಯ ಸ್ವಲ್ಪ ಡಿಫ್ರೆಂಟಾಗಿದೆ ಅಷ್ಟೆ. ದೇಶದಲ್ಲಿ ಗಾಂಜಾ ಬೆಳೆ ನಿಷೇಧ ಇದ್ರೂ ಕೂಡ ಈ ಗಿಡವನ್ನು ತಮ್ಮ ಜಮೀನಿನ ಇತರೆ ಸಸ್ಯಗಳ ಮಧ್ಯೆ ಬೆಳೆಸಿ ಪೋಷಣೆ ಮಾಡ್ತಾರೆ..! ಆದ್ರೆ ಇಲ್ಲೋರ್ವ ಭೂಪ ಇದೆಲ್ಲಕ್ಕಿಂತಲೂ ವಿಭಿನ್ನವಾಗಿ ಆಲೋಚನೆ ನಡೆಸಿದ್ದಾನೆ ನೋಡಿ..! ಹೈದ್ರಾಬಾದ್ ಮೂಲದ ಸೈಯದ್ ಶಾಹಿದ್ ಹುಸೈನ್(33) ಎಂಬಾತ ತನ್ನ ಮನೆಯಲ್ಲೆ ಸುಮಾರು 40 ಪಾಟ್‍ಗಳಲ್ಲಿ 9ಕೆ.ಜಿ ಗಾಂಜಾಗಿಡವನ್ನು ಬೆಳೆಸಿ ಪೋಷಣೆ ಮಾಡಿದ್ದ ನೋಡಿ..! ಮಾರುಕಟ್ಟೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಈತ ಹೆಚ್ಚುವರಿ ತನಿಖೆ ನಡೆಸಿದ ಪೊಲೀಸರಿಗೆ ಸಖತ್ ಶಾಕ್ ಆಗಿದೆ. ತಾನಿರುವ ಅಪಾರ್ಟ್‍ಮೆಂಟ್‍ನ ಮೂರು ಕೊಠಡಿಗಳಲ್ಲಿ 40 ಪಾಟ್‍ಗಳಲ್ಲಿ ಗಾಂಜಾ ಗಿಡ ಬೆಳೆದಿರುವುದನ್ನು ಕಂಡು ಬಂದಿತ್ತು. ಕೃತಕ ಬೆಳಕಿನ ಸಹಾಯದಿಂದ ಗಾಂಜಾಗಿಡ ಪೋಷಣೆ ಮಾಡ್ತಾ ಇದ್ದ ಶಾಹಿದ್‍ಗೆ ಅಮೇರಿಕಾದಲ್ಲಿ ನೆಲೆಸಿರುವ ಕ್ರಿಸ್ಟೋಫರ್ ಎಂಬಾತ ಸಹಕರಿಸುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಸದ್ಯಕ್ಕೆ ಆರೋಪಿ ಪೊಲೀಸರ ವಶದಲ್ಲಿದ್ದು ಮನೆಯಲ್ಲಿ ಬೆಳೆಸಲಾಗಿದೆ ಎನ್ನಲಾದ 9 ಕೆ.ಜಿ ಗಾಂಜಾ ಗಿಡಗಳನ್ನು ವಶ ಪಡಿಸಿಕೊಳ್ಳಲಾಗಿದೆ.
@hydcitypolice arrested a 33 year old for cultivating Ganja/Cannabis/weed/marijuana in his 3BHK flat. #Hyderabad 😊 pic.twitter.com/XAmvmgQO6z
— Ashish (@Ashi_IndiaToday) January 2, 2017
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!
ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?
ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!
ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!