ಇವತ್ತು ಸಾಮಾಜಿಕ ಜಾಲತಾಣ ಫೇಸ್‍ಬುಕ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಕೇವಲ ಫೋಟೋಗಳನ್ನು ಹಾಕಿ ಲೈಕ್ ಕಾಮೆಂಟ್ ಪಡೆಯುವುದು, ಹೊಸ ಸ್ನೇಹಿತರ ಪರಿಚಯ ಮಾಡಿಕೊಳ್ಳುವುದು, ಅವರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಮಾತ್ರ ಫೇಸ್‍ಬುಕ್ ಎಂಬ ಮಾಯೆ ಸೀಮಿತವಾಗಿಲ್ಲ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ, ವಿಚಾರವನ್ನು ಪ್ರತಿಪಾದಿಸುವ ವೇದಿಕೆಯಾಗಿ ಫೇಸ್‍ಬುಕ್ ಬಳಕೆಯಾಗ್ತಾ ಇದೆ.
ಆದರೆ, ಇದು ಇಷ್ಟಕ್ಕೇ ಸೀಮಿತವಾಗಿಲ್ಲ, ವಾದ-ಪ್ರತಿವಾದದಗಳ ಜೊತೆಗೆ ವ್ಯಕ್ತಿಗಳ ನಡುವಿನ ವೈಮನಸ್ಸಿಗೂ ಕಾರಣವಾಗಿದೆ ಎಂಬುದು ಗೊತ್ತಿರುವ ವಿಷಯವೇ. ಇದರಿಂದ ಸ್ವತಃ ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಬೇಸರಗೊಂಡಿದ್ದಾರೆ.
ಫೇಸ್‍ಬುಕ್ ನಕಾರಾತ್ಮಕ ಪರಿಣಾಮ ಬೀರುತ್ತಿರುವುದರಿಂದ ಜುಕರ್ ಬರ್ಗ್‍ಗೆ ಬೇಜಾರಾಗಿದ್ದು, ಜನರನ್ನು ಒಂದುಗೂಡಿಸಲು ಬಳಕೆಯಾಗಬೇಕಿದ್ದ ಫೇಸ್‍ಬುಕ್ ಜನರನ್ನು ಪರಸ್ಪರ ದೂರಮಾಡಲು ಬಳಕೆಯಾಗುತ್ತಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ.
ಫೇಸ್‍ಬುಕ್ ಸ್ಟೇಟಸ್ ಹಾಕಿರುವ ಜುಕರ್ ಬರ್ಗ್, ಈ ವರ್ಷ ನಾನು ಯಾರ ಮನಸ್ಸಿಗಾದ್ರು ನೋವುಂಟು ಮಾಡಿದ್ದರೆ ಕ್ಷಮಿಸಿ ಬಿಡಿ. ನನ್ನ ಕಾರ್ಯ ಜನರನ್ನು ಒಂದು ಗೂಡಿಸುವ ಬದಲು ವಿಂಗಡಿಸಲು ಬಳಕೆ ಆಗ್ತಾ ಇದೆ’ ಅಂತ ಹೇಳಿಕೊಂಡಿದ್ದಾರೆ.
ಫೇಸ್‍ಬುಕ್ ಒಳ್ಳೆಯ ಉದ್ದೇಶಗಳಿಗೆ ಬಳಕೆಯಾಗಲಿ ಎಂಬುದು ಜುಕರ್ ಬರ್ಗ್ ಆಶಯ.