ನವವಿವಾಹಿತೆಯೊಬ್ಬಳು ಮದುವೆಯಾದ ಮರುದಿನವೇ ಪ್ರಿಯಕರನ ಜೊತೆ ಮತ್ತೊಂದು ಮದುವೆಯಾದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಸಾರನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಸಂಜನಾ ಕಾತ್ಕರ್ ಎಂಬಾಕೆ ಫೆಬ್ರವರಿ 28ರಂದು ನಿತೇಶ್ ನಾಗಲೇ ಎಂಬುವವರ ಜೊತೆ ವಿವಾಹವಾಗಿದ್ದಳು. ಈ ಮದುವೆ ಈಕೆಗೆ ಇಷ್ಟವಿರಲಿಲ್ಲವಂತೆ. ಕುಟುಂಬದವರ ಒತ್ತಾಯಕ್ಕೆ ಮಣಿದು ನಿತೇಶ್ ಅವರನ್ನು ಮದುವೆಯಾದ ಸಂಜನಾ ಮರುದಿನ ಸಂಪ್ರದಾಯದಂತೆ ತವರುಮನೆಗೆ ಹೋಗಿದ್ದಾಳೆ. ಅಲ್ಲಿ ತನ್ನ ಪ್ರಿಯಕರನ ಜೊತೆ ಮದುವೆಯಾಗಿದ್ದಾಳೆ…!
ಬಳಿಕ ತಾನು ಪ್ರಿಯಕರನನ್ನು ಮದುವೆಯಾದ ಫೋಟೋವನ್ನು ಮೊದಲ ಪತಿ ನಿತೇಶ್ ಮತ್ತು ಸಂಬಂಧಿಕರಿಗೆ ವಾಟ್ಸಪ್ ನಲ್ಲಿ ಕಳುಹಿಸಿದ್ದಾಳೆ.
ನಿತೇಶ್ ಕುಟುಂಬದವರು ಸಂಜನಾ ವಿರುದ್ಧ ಚಿನ್ನಾಭರಣ ಹಾಗೂ ಹಣ ಕಳ್ಳತನದ ದೂರು ನೀಡಿದ್ದಾರೆ. ಅಲ್ಲದೆ ಮದುವೆ ಖರ್ಚು ನೀಡುವಂತೆ ಸಂಜನಾಳ ಮನೆಯವರನ್ನು ಒತ್ತಾಯಿಸಿದ್ದಾರೆ.