ಮದುವೆಯಲ್ಲಿ ವಧು-ವರರಿಗೆ ಗಿಫ್ಟ್ ನೀಡೋದು ಕಾಮನ್.ಬಟ್ಟೆ, ಚಿನ್ನ, ಬೆಳ್ಳಿ , ದಿನನಿತ್ಯ ಬಳಕೆಯ ವಸ್ತುಗಳು ಹೀಗೆ ನಾನಾ ರೀತಿಯ ಉಡುಗೊರೆ ಕೊಡಲಾಗುತ್ತದೆ. ಆದರೆ, ಇಲ್ಲಿ ಸ್ನೇಹಿತರು ತಮ್ಮ ಗೆಳೆಯನ ಮದುವೆಗೆ ಪೆಟ್ರೋಲ್ ಉಡುಗೊರೆ ನೀಡಿದ್ದಾರೆ!
ತಮಿಳುನಾಡಿನ ಕಡಲೂರ್ ಜಿಲ್ಲೆಯ ಕುಮಾಚ್ಚಿ ಗ್ರಾಮದಲ್ಲಿ ಈ ಘಟನೆ ನಡೆದಿರೋದು.
ಎಲೆಂಚ್ ಜಿಯನ್ ಮತ್ತು ಕನಿಮೋಳಿ ಎಂಬುವವರ ಮದುವೆಗೆ ಆಗಮಿಸಿದ್ದ ಸ್ನೇಹಿತರು 5ಲೀ ಪೆಟ್ರೋಲ್ ನೀಡಿದ್ದಾರೆ!.
ಪೆಟ್ರೋಲ್ ಬೆಲೆ ದಿನೇ ದಿನೇ ಹೆಚ್ಚುತ್ತಿದೆ. ತಮಿಳುನಾಡಿನಲ್ಲಿ 85ರ ಗಡಿ ದಾಟಿದೆ. ಇದರಿಂದ ವರನ ಸ್ನೇಹಿತರು ಪೆಟ್ರೋಲ್ ಅನ್ನೇ ಉಡುಗೊರೆಯಾಗಿ ಕೊಟ್ಟಿದ್ದಾರೆ. ದರ ಇಳಿಕೆ ಆಗುವ ಸಾಧ್ಯತೆ ಇಲ್ಲ. ನಾವು ಪೆಟ್ರೋಲ್ ಅನ್ನು ಉಡುಗೊರೆಯಾಗಿ ಕೊಟ್ಟರೆ ಉಪಯೋಗಕ್ಕೆ ಬರುತ್ತದೆ ಎಂದು ಗಿಫ್ಟ್ ಕೊಟ್ಟ ಸ್ನೇಹಿತರು ಅಭಿಪ್ರಾಯಪಟ್ಟಿದ್ದಾರೆ.