ಅವರಿಬ್ಬರಿಗೆ ಮದುವೆ ನಿಶ್ಚಯವಾಗಿತ್ತು. ನಿನ್ನೆ ಸಂಜೆ ಆರತಕ್ಷತೆಗೆ ಎಲ್ಲಾ ಏರ್ಪಾಡುಗಳು ಆಗಿದ್ವು. ಅಷ್ಟರಲ್ಲೇ ಆರತಕ್ಷತೆಗೆ ಕೂರಬೇಕಾದ ವಧು ಕಾಣೆ…! ಮದುವೆ ನಿಲ್ಲಬಾರದೆಂದು ವರನಿಗೆ ಬೇರೆ ಹುಡುಗಿಯನ್ನು ಆ ಕೂಡಲೇ ನಿಶ್ಚಯ ಮಾಡಲಾಗುತ್ತೆ…! ಅವನೂ ಒಪ್ಪಿಕೊಳ್ತಾನೆ. ಇಂದು ಬೆಳಗ್ಗೆಯೇ ಮದುವೆ ಇತ್ತು. ಆದ್ರೆ, ವರ ನಾಪತ್ತೆ…!
ಇದು ಯಾವುದೋ ಸಿನಿಮಾ ಕಥೆಯಲ್ಲ. ಕೋಲಾರದಲ್ಲಿ ನಡೆದ ರಿಯಲ್ ಸ್ಟೋರಿ.
ಜಿಲ್ಲೆಯ ಬಂಗಾರಪೇಟೆ ನೇರ್ನಳ್ಳಿಯ ಎನ್. ಸೌಮ್ಯ ಮಾಲೂರಿನ ಚನ್ನಕಲ್ಲಿನ ನಿವಾಸಿ ಗುರೇಶ್ ಗೆ ಮದುವೆ ನಿಶ್ಚಯವಾಗಿತ್ತು. ನಿನ್ನೆ ಆರತಕ್ಷತೆಗೆ ಎಲ್ಲಾ ತಯಾರಿ ಆದ್ಮೇಲೆ ವಧು ಸೌಮ್ಯ ನಾಪತ್ತೆ ಆಗಿದ್ದಾಳೆ. ಕೂಡಲೇ ಮದುವೆ ಮುರಿದು ಬೀಳಬಾರದೆಂದು ಸೌಮ್ಯಳ ಚಿಕ್ಕಪ್ಪನ ಪುತ್ರಿ ವೆಂಕಟರತ್ನಮ್ಮ ಜೊತೆ ಗುರೇಶ್ ವಿವಾಹ ನಿಶ್ಚಯ ಮಾಡ್ತಾರೆ.
ಇದಕ್ಕೆ ಗುರೇಶ್ ಕೂಡ ಒಪ್ಪಿಗೆ ಸೂಚಿಸಿದ್ದ…ಆದರೆ,ಇಂದು ಬೆಳಗ್ಗೆ ನಾಪತ್ತೆಯಾಗಿದ್ದಾನೆ…! ಇದರಿಂದ ಮದುವೆ ಮುರಿದು ಬಿದ್ದಂತಾಗಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.