ಮಾರುತಿ ಸುಜುಕಿ ಸಂಸ್ಥೆ ಇತ್ತೀಚೆಗೆ ಸಿಯಾಜ್ ಸೆಡಾನ್ ಫೇಸ್‍ಲಿಫ್ಟ್ ಬಿಡುಗಡೆಗೊಳಿಸಿತ್ತು. ಇದೀಗ ಎರ್ಟಿಗಾ ಫೇಸ್‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಎರ್ಟಿಗಾ ಹೊಸ ಕಾರು ನವೆಂಬರ್ 21ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಸುಜಕಿ ಎರ್ಟಿಗಾ ಫೇಸ್‌ಲಿಫ್ಟ್ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡು ಭರ್ಜರಿಯಾಗಿ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿದೆ.
ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಎಂಪಿವಿ ಕಾರು ನೆಕ್ಸಾ ಶೋರಂನಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಇಗ್ನಿಸ್, ಬಲೆನೊ, ಬಲೆನೊ ಆರ್‍ಎಸ್, ಎಸ್ ಕ್ರಾಸ್ ಮತ್ತು ಸಿಯಾಜ್ ಕಾರುಗಳ ಜೊತೆಗೆ ಮಾರಾಟಗೊಳ್ಳಲಿದೆ.
ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍ಲ್ಯಾಂಪ್‍ಗಳನ್ನು ಪಡೆದುಕೊಂಡಿರಲಿದೆ.
ಕಾರಿನ ಸೈಡ್ ಪ್ರೋಫೈಲ್‌ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ ಮತ್ತು 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ ‘ಎಲ್’ ಆಕಾರದ ಟೈಲ್ ಲೈಟ್ ಅನ್ನು ಹೊಂದಿದೆ.