ಕೆಲವು ದಿನಗಳ ಹಿಂದಷ್ಟೇ ಮಂಡ್ಯದ ತಿಮ್ಮನಹೊಸೂರಿನಲ್ಲಿ 19 ವರ್ಷದ ಯುವತಿ ಮೋನಿಕಾಳನ್ನು ಕೊಂದು ತರಾತುರಿಯಲ್ಲಿ ಮೃತದೇಹವನ್ನು ಸುಟ್ಟುಹಾಕಿದ್ದರು. ಅದಕ್ಕೆ ಕಾರಣವಾಗಿದ್ದು ಆಕೆಯ ಪ್ರೀತಿ. ಕೆಳಜಾತಿಯ ಯುವಕನನ್ನು ಪ್ರೀತಿ ಮಾಡುತ್ತಿದ್ದ ಕಾರಣ ಹೆತ್ತವರೇ ಕೊಂದು ಸುಟ್ಟು ಹಾಕಿದ್ದರು. ಆದ್ರೆ ಅದು ಪೊಲೀಸ್ ತನಿಖೆಯಲ್ಲಿ ಮರ್ಯಾದಾ ಹತ್ಯೆ ಎಂಬುದು ಸ್ಪಷ್ಟವಾಗಿದೆ. ಈಗ ಅದೇ ತೆರನಾದ ಕೃತ್ಯ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ನಂಜನಗೂಡು ತಾಲ್ಲೂಕಿನ ಚಂದ್ರವಾಡಿ ಗ್ರಾಮದಲ್ಲಿ ಮಧು ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಪೋಷಕರು ತರಾತುರಿಯಲ್ಲಿಯೇ ಅಂತ್ಯಸಂಸ್ಕಾರ ಮುಗಿಸಿದ್ರು. ಈ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಘಟನೆ ಸಂಬಂಧ ಮೃತ ಮಧುವಿನ ತಂದೆ, ತಾಯಿ, ಸಹೋದರನನ್ನು ಬಂಧಿಸಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸ್ಫಷ್ಟನೆ ನೀಡಿದ್ದಾರೆ.
- ರಘು ಆರ್ ಇಂಜನಹಳ್ಳಿ
POPULAR STORIES :
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’