ರಸ್ತೆ ಅಪಘಾತದಲ್ಲಿ ಗೆಳೆಯನನ್ನು ಕಳೆದುಕೊಂಡ ಯುವಕರ ತಂಡ ಸರ್ಕಾರಕ್ಕೆ ಸೆಡ್ಡೆ ಹೊಡೆದು ಮಹತ್ವದ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಾದರಿಯಾಗಿದೆ.
ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ಸಾವನ್ನಪ್ಪುತ್ತಿರುವುದರಿಂದ ನೊಂದ ಮಾತೃಭೂಮಿ ಯುವಕರ ತಂಡ ಸರ್ಕಾರ, ಬಿಬಿಎಂಪಿಗೆ ಸೆಡ್ಡು ಹೊಡೆದು ರಸ್ತೆ ಗುಂಡಿಗಳನ್ನು ಮುಚ್ಚುವ ಕಾಯಕದಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಯಾವ ಏರಿಯಾದಲ್ಲಿ ಗುಂಡಿ ಇದ್ದರೂ ಸಹ ಇವರಿಗೆ ಲೊಕೇಶನ್ ಕಳುಹಿಸಿದರೆ ಸಾಕು, ಅಲ್ಲಿಗೆ ಹೋಗಿ ಗುಂಡಿ ಮುಚ್ಚುತ್ತಾರೆ. ಮೂರು ದಿನಕ್ಕೊಮ್ಮೆ ಈ ಕೆಲಸ ಮಾಡುತ್ತಾರೆ.
ರಸ್ತೆ ಅಪಘಾತದಲ್ಲಿ ಗೆಳೆಯನನ್ನು ಕಳೆದುಕೊಂಡ ತಂಡ ಹೀಗೆ ಮಹತ್ವದ ಕೆಲಸದಲ್ಲಿ ತೊಡಗಿಸಿಕೊಂಡಿದೆ