ಗಣಿತ ಮೇಷ್ಟ್ರೇ‌ ಇದನ್ನು ಓದಿ…!

Date:

ಗಣಿತ ಅಂದ್ರೆ ಕಬ್ಬಿಣದ ಕಡ್ಲೆ..! ಯಾವ್ ಸಬ್ಜೆಕ್ಟ್ ಆದ್ರೂ ಓಕೆ..ಗಣಿತ ಏಕೆ? ಎನ್ನೋದು ಬಹುತೇಕ ವಿದ್ಯಾರ್ಥಿಗಳನ್ನು ಕಾಡುವ ಪ್ರಶ್ನೆ…! ಗಣಿತ ಮೇಷ್ಟ್ರು ಶಾಲೆಗೆ ಬರ್ದೆ ಹೋಗ್ಲಿ ಅಂತ ದೇವ್ರಲ್ಲಿ ಪ್ರಾರ್ಥಿಸಿಕೊಳ್ಳೋ ಸ್ಟೂಡೆಂಟ್ಸ್ ಕೂಡ ಇದ್ದಾರೆ…! ಇವರೆಲ್ಲರಿಗಿಂತ ಇಲ್ಲೊಬ್ಬ ವಿದ್ಯಾರ್ಥಿ ಗಣಿತದಲ್ಲಿ ಕಡಿಮೆ ಅಂಕ ಬಂತು ಅಂತ ತನ್ನ ಟೀಚರ್ ಗೆ ಚಾಕುವಿನಿಂದ ಇರಿದಿದ್ದಾನೆ…!
ಈ ಘಟನೆ ನಡೆದಿದ್ದು ಹರಿಯಾಣದ ಝಜ್ಜರ್ ಜಿಲ್ಲೆಯ ಬಹದೂರ್ ಘರ್ ನ ಹರದಯಾಲ್ ಪಬ್ಲಿಕ್ ಶಾಲೆಯಲ್ಲಿ. ಇಲ್ಲಿನ 12 ನೇ‌ ತರಗತಿ ವಿದ್ಯಾರ್ಥಿ ಗಣಿತದಲ್ಲಿ ತನಗೆ ಕಡಿಮೆ ಮಾರ್ಕ್ಸ್ ಕೊಟ್ಟಿದ್ದಾರೆ ಅಂತ ಕ್ಲಾಸ್ ರೂಂ ನಲ್ಲೇ ಶಿಕ್ಷಕಗೆ‌ ಚಾಕುವಿನಿಂದ ತಿವಿದಿದ್ದಾನೆ…!
ಶಿಕ್ಷಕ ರವೀಂದ್ರ ಹಲ್ಲೆಗೊಳಗಾದವರು.‌ ಕಡಿಮೆ‌‌ ಅಂಕ ಪಡೆದ ವಿದ್ಯಾರ್ಥಿ ರವೀಂದ್ರ ಅವ್ರಿಗೆ ತಲೆ,‌ಕುತ್ತಿಗೆ ಸೇರಿದಂತೆ ಹತ್ತಾರು ಕಡೆ ಚಾಕು ಇರಿದಿದ್ದಾನೆ. ಇದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಅಪರಾಧವೆಸಗಿದ ವಿದ್ಯಾರ್ಥಿ ಹಾಗೂ ಅವನಿಗೆ‌ ಚಾಕು‌ ತಂದ ಸ್ನೇಹಿತರನ್ನು‌ ಪೊಲೀಸರು ಬಂಧಿಸಿದ್ದಾರೆ..! ರವೀಂದ್ರ ಅವ್ರು ತನ್ನ ವಿದ್ಯಾರ್ಥಿ ಗೆ ಉದ್ಧಾರ ಆಗು ಅಂತ ಬೈದು‌ ಬುದ್ದಿ ಹೇಳಿದ್ದಕ್ಕೇ ‌ನೋವುಣ್ಣ ಬೇಕಾಗಿದೆ…! ಎಂಥೆಂಥಾ ವಿದ್ಯಾರ್ಥಿಗಳಿರ್ತಾರೆ..?

Share post:

Subscribe

spot_imgspot_img

Popular

More like this
Related

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...