ನಿಮ್ಮಲ್ಲಿ ಎಷ್ಟು ಜನರು ನೀವು ಮಾಡುತ್ತಿರೋ ಕೆಲಸದ ಬಗ್ಗೆ ಗಂಭೀರವಾಗಿ ಯೋಚಿಸಿದ್ದೀರಾ??? ಎಷ್ಟು ಜನರು ಪಾರ್ಟ್ ಟೈಂ ಕೆಲಸವನ್ನು ಮಾಡುತ್ತಾ ನಿಮ್ಮಶಿಫ್ಟ್ ಅವಧಿ ಮುಗಿಯುತ್ತಿದ್ದಂತೆ, ನಮ್ಮ ಕೆಲಸದ ಸಮಯ ಮುಗಿಯಿತೆಂದು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದೀರಾ? ಹೀಗೇನಾದರೂ ನೀವು ಮಾಡುತ್ತಿದ್ದಿರೆಂದಾದಲ್ಲಿ ನೀವು ಖಂಡಿತವಾಗಿಯೂ ರಾಬರ್ಟ್ ಫ್ಯೂನ್ ನಿಂದ ಕಲಿಯಬೇಕಾದ್ದು ಬಹಳಷ್ಟಿದೆ ಕಣ್ರಿ…
ಹೌದು, ಕೇವಲ ಮೂರು ವರುಷಗಳಲ್ಲಿ ಮೆಕ್ ಡೊನಾಲ್ಡ್ಸ್ ನಲ್ಲಿ ಕೆಲಸ ಮಾಡುತ್ತಲೇ ಮಿಲಿಯನೇರ್ ಆಗಿ ಬದಲಾದಂತಹ ವ್ಯಕ್ತಿ ಈ ರಾಬರ್ಟ್ ಫ್ಯೂನ್;
ಅದೂ ತನ್ನ ಹದಿಹರೆಯದ 19 ನೇ ವರುಷದಲ್ಲಿ.ಈ ವಯಸ್ಸಿನಲ್ಲಿ ನಮ್ಮಲ್ಲಿ ಹಲವರು ಇನ್ನೂ ತನ್ನ ಶೈಕ್ಷಣಿಕ ಅವಧಿಯನ್ನೇ ಮುಗಿಸಿರುವುದಿಲ್ಲ,ಇನ್ನೂ ಕೆಲವರು ಅಪ್ಪ ಅಮ್ಮ ಮಾಡಿಟ್ಟ ದುಡ್ಡನ್ನು ನುಂಗಿ ನೀರು ಕುಡಿತಿರ್ತಾರೆ, ಇನ್ನೂ ಕೆಲವ್ರು ಪ್ರೀತಿ ಪ್ರೇಮ ಅಂತೆಲ್ಲಾ ಸುತ್ತಾಡಿ ತಮ್ಮ ಅಮೂಲ್ಯವಾದ ಸಮಯವನ್ನು, ಹಣವನ್ನು ಹಾಳು ಮಾಡುತ್ತಾ ಹುಟ್ಟಿದ್ದೇ ವೇಸ್ಟ್ ಎಂಬಂತೆ ಲೈಫ್ ನೇ ವೇಸ್ಟ್ ಮಾಡ್ತಾರೆ…ಛೀ..ಛೀ..ಬೇಡ ಕಣ್ರಿ..ಈ ಥರ ಎಲ್ಲಾ ಮಾಡ್ಬೇಡಿ..ಬದ್ಲಾಗಿ ನಮ್ಮಿಂದ್ಲೂ ಏನಾದ್ರೂ ಮಾಡಲು ಸಾಧ್ಯ ಎಂದು ಸಾಧಿಸಿ ತೋರಿಸಿದ ಒಬ್ಬಯಶಸ್ವೀ ಯುವಕನ ಸ್ಟೋರಿ ಓದಿ ನೋಡಿ…
ಸೌಥಾಂಪ್ಟನ್ ನಲ್ಲಿ ವಾಸಿಸೋ ರಾಬರ್ಟ್ ಎರಡು ತರಹದ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ,ಒಂದು ಮೆಕ್ ಡೊನಾಲ್ಡ್ ನಲ್ಲಿ ಸರ್ವರ್ ಹಾಗೂ ಇನ್ನೊಂದು ಫ಼ೈನಾನ್ಸ್ ಕಂಪನಿಯಲ್ಲಿ ಟೀ ಬಾಯ್.ತನ್ನ ಸಮಯವನ್ನು ಉತ್ತಮ ರೀತಿಯಲ್ಲಿ ವಿನಿಯೋಗಿಸುತ್ತಾ ಎರಡೂ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾತ.
ನಿಜ ಅವನ ಜಾಬ್ ಪ್ರೊಫೈಲ್ ತಿಳ್ಕೊಂಡ ಯಾರೇ ಆದ್ರೂ ಈತನ ಬಳಿ $ 1,30,000 ಬಂಗಲೆ,ಗೋಲ್ಡ್ ಕೋಟೆಡ್ ಬೆಂಟ್ಲಿ,ರೇಂಜ್ ರೋವರ್ ರಂತಹ ಕಾರುಗಳು ಇವೆಯೆಂದು ಯಾರೂ ಊಹಿಸಲಾರರು.ಹೌದು ಇವನ ಯಶಸ್ಸಿನ ಸೀ ಕ್ರೆ ಟ್…..ಏನು ಗೊತ್ತೇ??? “ಬೈನರಿ ಟ್ರೇಡಿಂಗ್”
ನಿಜ ..ಈ ಎರಡೇ ಎರಡು ಶಬ್ದಗಳಿಂದ ಮಿಲಿಯನೇರ್ ಆದ ಈ ರಾಬರ್ಟ್..
ಹರ್ಷದ್ ಮೆಹ್ತಾ ಹಗರಣದ ನಂತರ ಟ್ರೇಡಿಂಗ್, ಶೇರ್ ಮಾರ್ಕೆಟ್,ಕಮಾಡಿಟಿ ಮಾರ್ಕೆಟ್ ಬಗ್ಗೆ ತಿಳಿಯದವರಿಲ್ಲ ಬಿಡಿ..ಇದ್ರೂ ಬೆರಳೆಣಿಕೆಯಷ್ಟು ಜನರಿರಬಹುದೇನೋ???
ಟೀ,ಫ್ರೆಂಚ್ ಫ್ರೈ,ಬರ್ಗರ್ ಸರ್ವ್ ಮಾಡ್ತಾನೇ ಈತ ಟ್ರೇಡಿಂಗ್ ಫರ್ಮ್ ನ ಎಲ್ಲಾ A -Z ಸೀಕ್ರೇಟ್ ತಿಳ್ಕೊಂಡ್ ಬಿಟ್ಟ ನೋಡಿ. ಟ್ರೇಡಿಂಗ್ ನ ಎಲ್ಲಾ ಮಾಸ್ಟರ್ ಟ್ರಿಕ್ಸ್ ಗಳನ್ನು ಕಲಿತು ನುರಿತ ಟ್ರೇಡಿಂಗ್ ಮಾಸ್ಟರ್ ಆದ. ಕೆಲಸವನ್ನು ನಿಭಾಯಿಸುತ್ತಾ ನಿಭಾಯಿಸುತ್ತಾ ಟ್ರೇಡಿಂಗ್ ಮಾಡುತ್ತಿದ್ದ ಆ ಸಮಯಗಳು ನನ್ನ ಜೀವನದ ಅತೀ ಕಠಿಣ ಪರಿಸ್ಥಿತಿಯಾಗಿತ್ತು ಎಂಬುದಾಗಿ ಹೇಳುತ್ತಾನೆ ರಾಬರ್ಟ್; ಒಬ್ಬಾತನ ಸಹಾಯದಿಂದ ಟ್ರೇಡಿಂಗ್ ಖಾತೆಯನ್ನು ತನ್ನ ಅಮ್ಮನಾದ ಸೂಸನ್ ಹೆಸರಿನಿಂದ ತೆರೆದ ಈತ 17 ವಯಸ್ಸಿನವನಿರುವಾಗಲೇ ತನ್ನ ರೂಂನಿಂದ ಟ್ರೇಡಿಂಗ್ ಆರಂಭಿಸಿದನಂತೆ.ಅಲ್ಲಿಂದ ಯಶಸ್ಸು ಆತನ ಬೆನ್ನು ಹತ್ತಿದ್ದೇ ಹತ್ತಿದ್ದು..ಎರಡೇ ಎರಡು ವರುಷಗಳಲ್ಲಿ ಮಿಲಿಯನ್ ಗಟ್ಟಲೆ ಗಳಿಸಲಾರಂಭಿಸದನಂತೆ. U.K ಯಲ್ಲಿರೋ ಕಾಫಿ ಶಾಪ್ ಗಳು,ಬಂಗಲೆಗಳು,ಹಾಗೂ ಸೌಥ್ ಆಫ್ರಿಕಾದಲ್ಲೂ ತನ್ನ ಹಣವನ್ನು ಹೂಡಿಕೆ ಮಾಡಲಾರಂಭಿಸದನಂತೆ. ಅಂತೂ ಇಂತೂ ಮಿಲಿಯನೇರ್ ಆಗಿಯೇ ಬಿಟ್ಟ ನೋಡಿ.ಮೆಕ್ ಡೊನಾಲ್ಡ್ ದಿನಗಳು ಕಳೆದು ಹೋದರೂ ಅದರ ಸ್ಮರಣಾರ್ಥವಾಗಿ ತನ್ನ ಯೂನಿಫಾರ್ಮ್ ನ ಫ್ರೇಮ್ ಹಾಕಿಸಿ ತನ್ನ ಆಫೀಸಿನ ಗೋಡೆಗೆ ತೂಗು ಹಾಕಿದ್ದಾನೆ ಈತ.
ಈತನ ಫ್ರೆಂಡ್ಸ್ ಬಗ್ಗೆ ನೆನಪಿಸಿಕೊಳ್ಳುತ್ತಾ ಏನು ಹೇಳುತ್ತಾನೆಂದರೆ ನನ್ನನ್ನು ಯಾರು ತೀರಾ ತುಚ್ಛವಾಗಿ ಕಾಣುತ್ತಿದ್ದರೋ, ನನ್ನನ್ನು ತೀರಾ ಕೆಳಗಿನ ದರ್ಜೆಯಲ್ಲಿ ನೋಡಲು ಇಷ್ಟ ಪಡುತ್ತಿದ್ದರೋ ಅವರೇ ಈಗ ನನ್ನಿಂದ ಕೆಳಗೆ ಇದ್ದಾರೆ, ಹಾಗೂ ನನ್ನ ಫ್ರೆಂಡ್ಸ್ಶಿಪ್ ಗೋಸ್ಕರ ಹಾತೊರೆಯುತ್ತಿದ್ದಾರೆ..ಬದಲಾದದ್ದು ನಾನಲ್ಲ,ಇವರುಗಳು ಎನ್ನುತ್ತಿದ್ದಾನೆ ರಾಬರ್ಟ್..
ಫ್ರೆಂಡ್ಸ್! ಕೇವಲ ಮೂರು ವರುಷಗಳಲ್ಲಿ ಎಂತಹ ಅದ್ಭುತ ಸಾಧನೆ..ವ್ಹಾವ್! ವಾಟ್ ಎ ಮಾಸ್ಟರ್ ಮೈಂಡ್ ರಾಬರ್ಟ್..ನಿಮಗೆ ಒಳ್ಳೆಯದಾಗಲಿ…
- ಸ್ವರ್ಣಲತ ಭಟ್
Like us on Facebook The New India Times
POPULAR STORIES :
ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!
ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!