ನಂಗೆ ಆಂಕರ್ ಆಗ್ಬೇಕು ಅಂತ ಆಸೆ, ನಾನು ರಿಪೋರ್ಟರ್ ಆಗ್ಬೇಕು ಅನ್ಕೊಂಡಿದೀನಿ, ನಂಗೆ ವೀಡಿಯೋ ಎಡಿಟಿಂಗ್ ನಲ್ಲಿ ಸಖತ್ ಇಂಟರೆಸ್ಟ್ ಇದೆ..! ಇದು ಸಾಮಾನ್ಯವಾಗಿ ಮಾಧ್ಯಮಕ್ಕೆ ಬರಬೇಕು ಅಂತ ಆಸೆ ಇಟ್ಕೊಂಡೋರು ಹೇಳೋ ಮಾತುಗಳು. ಆದ್ರೆ ಟಿವಿಯಲ್ಲಿ ಕೆಲಸ ಗಿಟ್ಟಿಸೋದು ಹೇಗೆ, ಆಂಕರ್ ಆಗೋಕೆ ಏನೆಲ್ಲಾ ಗೊತ್ತಿರಬೇಕು..? ರಿಪೋರ್ಟರ್ ಆಗೋಕೆ ಏನೇನೆಲ್ಲಾ ತಿಳ್ಕೊಂಡಿರಬೇಕು ಅನ್ನೋದು ಸಾಕಷ್ಟು ಜನರಿಗೆ ಗೊತ್ತಿರಲ್ಲ..! ಅಂಥವರಿಗೆ ಅಂತಲೇ ಟಿವಿ ಮಾಧ್ಯಮಕ್ಕೆ ಸಂಬಂಧಿಸಿದ ಕೋರ್ಸ್ ಆರಂಭಿಸಿದೆ ಎನ್ ಲೈಟ್ಮೆಂಟ್ ಮೀಡಿಯಾ ಹೌಸ್..!
ಆಂಕರ್ ಹಾಗೂ ರಿಪೋರ್ಟರ್ ಆಗೋರ ಭಾಷೆ, ಉಚ್ಛಾರಣೆ, ಮಾತಾಡೋ ಸ್ಟೈಲ್, ಬಾಡಿ ಲಾಂಗ್ವೇಜ್ ಹೇಗಿರಬೇಕು..? ಧ್ವನಿಯ ಏರಿಳಿತಗಳು ಹೇಗಿರಬೇಕು..? ಹೇಗೆ ಕ್ಯಾಮೆರಾ ಎದುರಿಸಬೇಕು..? ಹೀಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಒಂದು ತಿಂಗಳ ಕೋರ್ಸ್..! ನೀವು ಯಾವುದೇ ಡಿಗ್ರಿ ಓದ್ತಾ ಇದ್ರೆ, ಅಥವಾ ಡಿಗ್ರಿ ಮುಗಿದಿದ್ರೆ ಈ ಕೋರ್ಸ್ ಗೆ ಸೇರಿಕೊಳ್ಳಬಹುದು. ನೀವು ಒಂದು ತಿಂಗಳ ಒಳಗೆ ಧೈರ್ಯವಾಗಿ ಕ್ಯಾಮೆರಾ ಎದುರಿಸೋ ಹಾಗೆ ತರಭೇತಿಯನ್ನು ನೀಡೋ ಭರವಸೆ ಈ ಮೀಡಿಯಾ ಹೌಸಿಗಿದೆ. ಟಿವಿ ಮಾಧ್ಯಮದ ಪ್ರಸಿದ್ಧ ನಿರೂಪಕರು ಹಾಗೂ ವರದಿಗಾರರು ವಿದ್ಯಾರ್ಥಿಗಳಿಗೆ ತರಭೇತಿ ನೀಡಲಿದ್ದಾರೆ.
ಹಾಗೆಯೇ ಕನಿಷ್ಟ ಎಸ್ಸೆಸ್ಸೆಲ್ಸಿ ಪಾಸಾಗಿ ಕಂಪ್ಯೂಟರ್ ಜ್ಞಾನ ಇದ್ದವರು ವೀಡಿಯೋ ಎಡಿಟಿಂಗ್ ಕೋರ್ಸ್ ಗೂ ಸೇರಿಕೊಳ್ಳಬಹುದು. ಇದೂ ಸಹ ಒಂದು ತಿಂಗಳ ಕೋರ್ಸ್. ಈಗಾಗಲೇ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರವವರು ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಲು ಸಹಾಯವಾಗುವಂತೆ ತರಭೇತಿ ನೀಡುತ್ತಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತರಗತಿಗಳು ನಡೆಯುತ್ತವೆ. ಫೆಬ್ರವರಿಯಿಂದ ಹೊಸ ಬ್ಯಾಚ್ ಆರಂಭವಾಗಲಿದೆ. ನಿಮಗೂ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡೋ ಆಸಕ್ತಿ ಇದ್ದರೆ ಈ ಕೋರ್ಸ್ ನಿಮಗೆ ಉಪಯೋಗಕ್ಕೆ ಬರುತ್ತೆ..! ಕೋರ್ಸ್ ಗೆ ಸೇರುವುದಾದರೆ 9620971071 ಅಥವಾ 9741194934 ನಂಬರಿಗೆ ಕರೆಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ..!
ಎನ್ಲೈಟ್ಮೆಂಟ್ ಮೀಡಿಯಾ ಹೌಸ್
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!
ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!