ಸಾಮಾನ್ಯವಾಗಿ ತಾಯಿಯ ಗರ್ಭದಿಂದ ಮಗು ಜನ್ಮತಾಳೋದು ಒಂದೇ ಬಾರಿ.. ಎರೆಡೆರೆಡು ಬಾರಿ ಜನ್ಮ ತಾಳಿದ ಪ್ರಸಂಗ ಯಾರೂ ಕೂಡ ಊಹೆ ಮಾಡ್ಕೊಂಡಿಲ್ಲ.. ಆದ್ರೆ ಅಂತಹದೊಂದು ಆಶ್ಚರ್ಯಕರ ಸಂಗತಿ ನಡೆದರೆ ಹೇಗಿರುತ್ತೆ..? ಹೌದು.. ಟೆಕ್ಸಾಸ್‍ನಲ್ಲಿ ನೆಡೆದ ಒಂದು ವಿಚಿತ್ರವಾದ ಸಂಗತಿಯೊಂದು ಇಡೀ ವೈದ್ಯ ಲೋಕಕ್ಕೆ ಅಚ್ಚರಿಯಾಗಿದೆ.. ವೈದ್ಯರು ಮಾಡಿದ ಪವಾಡಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.. ತಾಯಿಯ ಗರ್ಭಕೋಶದಿಂದ ಭ್ರೂಣವನ್ನು ತೆಗೆದು ಮತ್ತೆ ಗರ್ಭದೊಳಗೆ ಇಟ್ಟು ಬೆಳೆಸಿ ಹೆರಿಗೆಯನ್ನು ಮಾಡಿದ್ದಾರೆ.. ಈ ಮೂಲಕ ಒಂದು ಹೆಣ್ಣು ಮಗು ಎರೆಡೆರೆಡು ಬಾರಿ ಜನ್ಮ ತಾಳಿದ ವಿಶ್ವದ ಏಕೈಕ ಶಿಶು ಎಂಬ ಖ್ಯಾತಿಗೂ ಪಾತ್ರವಾಗಿದೆ.
23 ವಾರದ ಭ್ರೂಣ ಶಿಶು ನೈನಿಲಾಲ ಮೂಳೆತುದಿಯಲ್ಲಿ ಗೆಡ್ಡೆ ಬೆಳೆದಿರುವ ಸಂಗತಿ ವೈದ್ಯರಿಗೆ ತಿಳಿದು ಬಂದಿದೆ. ಕೂಡಲೇ ಶಸ್ತ್ರ ಚಿಕಿತ್ಸೆಗೆ ಮುಂದಾದ ವೈದ್ಯರು ತಾಯಿಯ ಗರ್ಭದಲ್ಲಿರುವ ಭ್ರೂಣವನ್ನು ತೆಗೆದು ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬೇರ್ಪಡಿಸುವಲ್ಲಿ ಸಫಲರಾಗಿದ್ದಾರೆ. ಆನಂತರ ಮತ್ತೆ ಭ್ರೂಣವನ್ನು ತಾಯಿಯ ಗರ್ಭದೊಳಗೆ ಇಟ್ಟು ಬೆಳೆಸಲಾಗಿದೆ. ಈ ಕುರಿತು ಮಾತನಾಡಿದ ಮಗುವಿನ ತಾಯಿ ಮಾರ್ಗರೇಟ್ ಬೋಮರ್, ವೈದ್ಯರು ಸ್ಕ್ಯಾನ್ ಮಾಡಿದ ನಂತರ ಮಗುವಿನ ಮೂಳೆಯ ಮೇಲೆ ಗೆಡ್ಡೆ ಬೆಳೆಯುತ್ತಿರುವುದಾಗಿ ಹೇಳಿದಾಗ ನನಗೆ ಅಘಾತದ ಜೊತೆ ಭಯವೂ ಉಂಟಾಗಿತ್ತು.. ಮಗುವಿನ ಮೂಳೆಯ ಮೇಲಿನ ಗಡ್ಡೆ ತೆಗೆಯದೇ ಹೋದರೆ ಮಗು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುವ ಸಂಭವವಿದೆ ಎಂದಾಗ ನಾನು ಕೂಡಲೇ ಶಸ್ತ್ರ ಚಿಕಿತ್ಸೆಗೆ ಒಳಗಾದೆ ಎಂದು ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆಯ ವೇಳೆ ಮಗುವನ್ನು ಗರ್ಭದಿಂದ ಹೊರತೆಗೆದಿದ್ದು, ಮಗುವಿನ ಮೂಳೆಯ ಮೇಲೆ ಬೆಳೆದಿದ್ದ ಗಡ್ಡೆಯನ್ನು ತೆಗೆದ ಬಳಿದ ಮತ್ತೆ ಗರ್ಭದೊಳಗೆ ಜೋಡಿಸಿದ್ದಾರೆ. ಮಗುವನ್ನು ಹೊರಗೆ ತೆಗೆದಾಗ ಅದರ ಒಟ್ಟು ತೂಕ 0.53 ಕೆಜಿ ಮಾತ್ರ ಇತ್ತು ಎಂದು ವೈದ್ಯರು ತಿಳಿಸಿದ್ದರು. ಅದಾದ ನಂತರ ಮಗುವನ್ನು ಗರ್ಭದಲ್ಲಿಟ್ಟು ಬೆಳೆಸಿದ್ದಾರೆ. 36 ವಾರಗಳ ಬಳಿಕ ಮಗುವನ್ನು ಹೆರಿಗೆಯ ಮೂಲಕ ಗರ್ಭದಿಂದ ಹೊರ ತೆಗೆದಿದ್ದು ಮಗು ಈಗ ಆರೋಗ್ಯದಿಂದ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
https://www.youtube.com/watch?v=G834cQDU2pE
Like us on Facebook The New India Times
POPULAR STORIES :
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?
ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!
ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!