ಮೈನಾ ಚೇತನ್ ಅಲಿಯಾಸ್ ಚೇತನ್ ಅಹಿಂಸಾ ಭಾರತ ಬಿಟ್ಟು ಅಮೆರಿಕಾ ಹೋಗೋ ಯೋಚ್ನೆಯಲ್ಲಿದ್ದಾರೆ . ಮೀಟೂ ಕಾಟವೇ ಇದಕ್ಕೆ ಕಾರಣ.
ಚೇತನ್ ಕುಟುಂಬ ಅಮೆರಿಕದಲ್ಲಿ ನೆಲಸಿಸಿದ್ದು, ಚೇತನ್ ಬಗ್ಗೆ ಕೇಳಿ ಬರ್ತಿರೋ ಆರೋಪಗಳಿಂದ ಕುಟುಂಬ ನೊಂದಿದೆ.
ನಿನ್ನ ಹೋರಾಟಗಳಿಗೆ ಅಲ್ಲಿ ಬೆಲೆಯಿಲ್ಲ. ಇಂತಹ ಹೋರಾಟದ ನಿಲುವೇಕೆ? ವಾಪಸ್ ಅಮೆರಿಕಾಗೆ ಬಂದು ಬಿಡುವಂತೆ’ ಅವರ ತಂದೆ ಕಿವಿಮಾತು ಹೇಳಿದ್ದಾರಂತೆ.
ಕೆಲವು ಬೆಳವಣಿಗೆಗಳಿಂದ ನೊಂದಿರೋ ಚೇತನ್ ಅಮೆರಿಕಾ ಹೋಗೋ ಪ್ಲಾನ್ ಮಾಡಿದ್ದಾರೆ. ನವೆಂಬರ್ 18 ರಂದು ಇವರ ತಂದೆ ಬೆಂಗಳೂರಿಗೆ ಬರ್ತಿದ್ದಾರಂತೆ ಅವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೋದಾಗಿ ಚೇತನ್ ಹೇಳಿದ್ದಾರೆ.