ಬಿಎಂಆರ್‌ಸಿಎಲ್ ಮುಂಜಾನೆ ಮತ್ತು ತಡರಾತ್ರಿ ರೈಲು ಸಂಚಾರದ ಅವಧಿಯನ್ನು ಕಡಿಮೆ ಮಾಡಿದ್ದು, ಆದರೆ ಇದು ಈಗ ಪ್ರಯಾಣಿಕರಿಗೆ ಅನಾನುಕೂಲ ಉಂಟು ಮಾಡಿದೆ. ಆಗಸ್ಟ್ 8ರಿಂದಲೇ ಜಾರಿಗೆ ಬರುವಂತೆ ಬೆಳಗ್ಗೆ 5 ರಿಂದ 6 ಮತ್ತು ರಾತ್ರಿ 10 ರಿಂದ 11 ಗಂಟೆ ನಡುವಿನ ಅವಧಿಯಲ್ಲಿ ಪ್ರತಿ ರೈಲು ಸಂಚಾರದ ನಡುವೆ ಇದ್ದ 20 ನಿಮಿಷದ ಅಂತರವನ್ನು 15 ನಿಮಿಷಕ್ಕೆ ಇಳಿಕೆ ಮಾಡಲಾಗಿದೆ.
ಆದರೆ ಇದು ಈಗ ಪ್ರಯಾಣಿಕರಿಗೆ ಅನುಕೂಲವಾಗುವ ಬದಲು ಅನಾನುಕೂಲ ಉಂಟು ಮಾಡಿದೆ. ಆದ್ದರಿಂದ ಇದನ್ನು ಪರಿಷ್ಕರಣೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ರೈಲು ಸಂಚಾರದ ಅವಧಿ ಕಡಿಮೆ ಮಾಡಿದರೂ ಜನರು ಕಾಯುವ ಅವಧಿ 30 ನಿಮಿಷಕ್ಕೆ ಏರಿಕೆಯಾಗಿದೆ. ಬೈಯಪ್ಪನಹಳ್ಳಿಯಿಂದ ಪ್ರಯಾಣ ಮಾಡಿ, ನಾಗಸಂದ್ರದ ಕಡೆಗೆ ಹೋಗುವ ಮೆಟ್ರೋ ಪ್ರಯಾಣಿಕರಿಗೆ ಹೊಸ ವೇಳಾಪಟ್ಟಿಯ ಕಾರಣ ತೊಂದರೆಯಾಗಿದೆ. ಅವರ ಕಾಯುವ ಅವಧಿ ಜಾಸ್ತಿಯಾಗಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.ಆದ್ದರಿಂದ ನಾಗಸಂದ್ರ ಕಡೆ ಸಾಗುವ ಹಸಿರು ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಲಾಗುತ್ತಿದೆ…