ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಪಿಲ್ಲರ್ ಬಳಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಎಲ್ಲರಿಗೂ ಕೆಲಕಾಲ ಆತಂಕ ಸೃಷ್ಟಿಸಿತ್ತು. ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಮಳೆಯ ನೀರು ಕೆಳಗೆ ಹರಿದು ಹೋಗಲಿ ಎಂದು ಪಿಲ್ಲರ್ ಬಳಿ ನಿರ್ಮಿಸಲಾಗಿದ್ದ ಕಿಂಡಿಯೊಳಗಿನಿಂದ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಜನರು ಮೆಟ್ರೋ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸಿಬ್ಬಂಧಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆ ನಂತರವೆ ಅಧಿಕಾರಿಗಳು ಅಗ್ನಿಶಾಮಕ ಧಳದವರಿಗೆ ಕರೆ ಮಾಡಿದ್ದಾರೆ. ಇನ್ನು ಹೊಗೆ ಕಾಣಿಸಿಕೊಂಡಿದ್ದ ಹೊಸಹಳ್ಳಿ ಮೆಟ್ರೋ ಸ್ಟೇಷನ್‍ಗೆ ಅಗ್ನಿಶಾಮಕ ಧಳ ಧಾವಿಸಿ ಪರಿಶೀಲನೆ ನಡೆಸಿದ್ದು, ಕಿಂಡಿಯೊಂದರಿಂದ ಹೊರ ಹೊರ ಬರುತ್ತಿರೋದನ್ನ ಗಮನಿಸಿದ್ದಾರೆ. ಅಲ್ಲದೇ ಕೂಡಲೇ ಅದನ್ನು ನಂದಿಸಿದ್ದಾರೆ
ಮೆಟ್ರೋ ಪಿಲ್ಲರ್ ಬಳಿ ಹೊಗೆ ಕಾಣಿಸಿಕೊಳ್ಳಲು ಇಲ್ಲಿನ ಬೀದಿ ವ್ಯಾಪಾರಿಗಳು ಮತ್ತು ಅಲೆಮಾರಿಗಳೆ ಕಾರಣ ಎನ್ನಲಾಗ್ತಾ ಇದೆ. ಅಲೆಮಾರಿಗಳು ಅಡುಗೆ ತಯಾರಿಗಾಗಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಬೆಂಕಿಯ ಮೇಲೆ ಬಟ್ಟೆ ಹಾಕಿರೋದ್ರಿಂದ ಹೊಗೆ ಹರಡಲು ಶುರು ಮಾಡಿದೆ. ಮಳೆ ನೀರು ಕೊಯ್ಲಿಗಾಗಿ ಪ್ಲಾಸ್ಟಿಕ್ ಪೈಪ್ ಅಳವಡಿಸಲಾಗಿದ್ದು, ಬೆಂಕಿ ಹಚ್ಚಿದ ಪರಿಣಾಮವಾಗಿ ಪೈಪುಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ. ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಈ ಅಗ್ನಿ ಅವಘಡ ಸಂಭವಿಸಿದ್ದು, ಅಲೆಮಾರಿಗಳು ಅಡುಗೆ ಮಾಡಲು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಅಕ್ಕಿ ಮತ್ತು ತರಕಾರಿಗಳು ದೊರಕಿದೆ. ಇನ್ನು ಘಟನೆಯನ್ನು ಗಂಭೀರವಾಗಿ ಪರಗಣಿಸಿದ ಬಿಎಂಆರ್‍ಸಿಎಲ್ ಅಧಿಕಾರಿಗಳು ಪ್ರಕರಣ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Like us on Facebook The New India Times
POPULAR STORIES :
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!