ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಮತ್ತು ಪೃಥ್ವಿ ಸಿನಿಮಾದ ನೋಡದೇ ಇರೋರು ಬಹಳಾ ಕಮ್ಮಿ ಮಂದಿ ಎಂದು ಅನಿಸುತ್ತದೆ. ಪುನೀತ್ ಅಭಿಮಾನಿಗಳಂತೂ ಈ ಸಿನಿಮಾ ನೋಡದೇ ಇರೋಕೆ ಸಾಧ್ಯನೇ ಇಲ್ಲ.
ಈ ಚಿತ್ರದ ಹೀರೋಯಿನ್ ಬಹುಭಾಷಾ ನಟಿ ಪಾರ್ವತಿ ಮೆನನ್ ಕೂಡ ಈಗ ಎಲ್ಲರಿಗೂ ಚಿರಪರಿಚಿತ.
ಇವರೂ ಕೂಡ ಈಗ ಮೀ ಟೂ ಅಭಿಯಾನಕ್ಕೆ ಎಂಟ್ರಿಕೊಟ್ಟಿದ್ದಾರೆ.
ಪಾರ್ವತಿ ಅವರಿಗೆ ಬಾಲ್ಯದಲ್ಲೇ ಲೈಂಗಿಕ ಕಿರುಕುಳದ ಅನುಭವ ಆಗಿತ್ತಂತೆ. 17 ವರ್ಷದವರಿರುವಾಗ ಅವರಿಗೆ ಅದರ ಅರಿವಾಯಿತಂತೆ. ಸುಮಾರು 12 ವರ್ಷಗಳ ಕಾಲ ಈ ಒಂದು ಘಟನೆ ಇವರನ್ನು ಇನ್ನಿಲ್ಲದಂತೆ ಕಾಡಿತ್ತಂತೆ.
ಮಾಮಿ ಫಿಲ್ಮ್ ಫೆಸ್ಟಿವಲ್ ಲಿ ಈ ವಿಷಯವನ್ನು ಪಾರ್ವತಿ ಬಹಿರಂಗಪಡಿಸಿದ್ದಾರೆ.
ಹೀಗೆ ಮೀ ಟೂ ಸ್ಯಾಂಡಲ್ ವುಡ್ ನಲ್ಲಿ ಬಹಳಾ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಹಿಂದೆ ತಪ್ಪು ಮಾಡಿದವರು ಇಂದು ಬೆತ್ತಲಾಗುವ ಭಯದಲ್ಲಿದ್ದಾರೆ.