ಸ್ಯಾಂಡಲ್‌ವುಡ್‌ನ ಪ್ರೇಮಿಗಳಾಗಿದ್ದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕುಟುಂಬಕ್ಕೆ ಮುದ್ದಾದ ಹೆಣ್ಣುಮಗುವಿನ ಆಗಮನವಾಗಿದೆ. ಈಗ ಮೊದಲ ಮಗುವನ್ನು ಮನೆಗೆ ಸ್ವಾಗತಿಸಿದ ಸಂಭ್ರಮದಲ್ಲಿ ಈ ಜೋಡಿ ಇದ್ದಾರೆ. ಮಿಲನಾ ನಾಗರಾಜ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅವದನ್ನ ಡಾರ್ಲಿಂಗ್ ಕೃಷ್ಣ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ.
“It’s baby girl ಇದು ಹೆಣ್ಣು ಮಗು . ಅಮ್ಮ ಮತ್ತು ಮಗಳು ಇಬ್ಬರೂ ಕ್ಷೇಮ. ಪ್ರೀತಿಯ ಮಿಲನಾ ನಾಗರಾಜ್, ತಾಯ್ತನದ ಈ ಪ್ರಯಾಣದಲ್ಲಿ ನೀನು ಅನುಭವಿಸಿದ ಒಂದು ರೀತಿಯ ನೋವು, ನಿನ್ನ ತ್ಯಾಗ, ಧೈರ್ಯದ ಕುರಿತು ಯೋಚಿಸಿದಾಗ ನನಗೆ ಗೌರವ ಮೂಡುತ್ತದೆ. ಇಂತಹ ಅದ್ಭುತ ಪ್ರಯಾಣಕ್ಕೆ ಸಾಕ್ಷಿಯಾದ ಎಲ್ಲಾ ತಾಯಂದಿರಿಗೂ ಪ್ರಣಾಮಗಳು. ನಾನು ಹೆಮ್ಮೆಯ ಮತ್ತು ಅದೃಷ್ಟದ ತಂದೆ. ಏಕೆಂದರೆ ನನಗೆ ಮಗಳು ಜನಿಸಿದ್ದಾಳೆ” ಎಂದು ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.