ಸಮ್ಮಿಶ್ರ ಸರ್ಕಾರದ ಪತನದ ಗುರಿಯೊಂದಿಗೆ ಕಾಂಗ್ರೆಸ್ -ಜೆಡಿಎಸ್ ನ ಅತೃಪ್ತ ಶಾಸಕರು ರಾಜೀನಾಮೆ ಕೊಡಲಿದ್ದು, ಈ ರಾಜೀನಾಮೆಯ ಮಹಾಪರ್ವ ಇಂದಿನಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ .
ಇದು ಆಪರೇಷನ್ ಕಮಲ ಅಲ್ಲ. ಸರ್ಕಾರದ ಆಡಳಿತ ವೈಫಲ್ಯದಿಂದ ಶಾಸಕರು ಈ ನಡೆ ಅನುಸರಿಸುತ್ತಿದ್ದಾರೆ. ಒಬ್ಬೊಬ್ಬ ಶಾಸಕರೇ ರಾಜೀನಾಮೆ ನೀಡಲಿದ್ದು , ಇಂದಿನಿಂದ ಈ ಅಭಿಯಾನ ಶುರುವಾಗುತ್ತದೆ ಎಂದು ಖಾಸಗಿವಾಹಿನಿಯೊಂದು ವರದಿ ಮಾಡಿದೆ.
ಸುಮಾರು 19 ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದ್ದು, ಶಾಸಕರ ಹೆಸರು ಬಹಿರಂಗಗೊಂಡಿಲ್ಲ.