ಮೊಬೈಲ್ ಬಳಕೆ ಅನಿವಾರ್ಯ. ಆದರೆ, ಇದನ್ನು ಬಳಸೋಕ್ಕೆ ಹೆದರಿಕೆ ಆಗ್ತಿದೆ..! ಮೊಬೈಲ್ ಖರೀದಿಗೆ ಮುನ್ನ ಎಚ್ಚರವಹಿಸಬೇಕಾಗಿದೆ. ಗ್ರಹಚಾರ ಕೆಟ್ಟಾಗ ನಮ್ಮ ಇಷ್ಟದ ಮೊಬೈಲೇ ನಮ್ಮ ಜೀವಕ್ಕೆ ಕುತ್ತು ತರಬಲ್ಲದು. ನೀವು ಪ್ಯಾಂಟ್ ಜೇಬ್‍ನಲ್ಲಿ ಮೊಬೈಲ್ ಇಟ್ಕೊಳ್ತೀರ..? ತುಂಬಾ ಡೇಂಜರ್…!
ಈಗಾಗಲೇ ಮೊಬೈಲ್ ಸ್ಪೋಟ, ಮೊಬೈಲ್ ಚಾರ್ಜರ್ ಸ್ಪೋಟದಿಂದ ನಾನಾ ಸಾವು ನೋವುಗಳು ಸಂಭವಿಸಿರೋದು ನಿಮಗೆ ಗೊತ್ತಿದೆ. ಇದೀಗ ಮೊಬೈಲ್ ಅವಘಡಕ್ಕೆ ಇನ್ನೊಂದು ಸೇರ್ಪಡೆಯಾಗಿದ್ದು, ಮೊಬೈಲ್ ಸ್ಪೋಟಗೊಂಡು ಯುವಕನೋರ್ವನ ಮರ್ಮಾಂಗಕ್ಕೆ ಗಂಭೀರ ಗಾಯಗಳಾಗಿವೆ..!
ಗಂಗಾವತಿ ತಾಲೂಕಿನ ಸಿದ್ಧಾಪುರ ಗ್ರಾಮದ ಹನುಮೇಶ್ ಹರಿಜನ ಎಂಬ ಯುವಕ ಗಾಯಗೊಂಡವರು. ಎಂಐ ನೋಟ್ 4 ಮೊಬೈಲ್‍ನ್ನು ತಮ್ಮ ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡಿದ್ರು. ಆಗ ಇದ್ದಕ್ಕಿದ್ದಂತೆ ಮೊಬೈಲ್ ಸ್ಪೋಟಗೊಂಡು ತೊಡೆ ಮತ್ತು ಮರ್ಮಾಂಗಕ್ಕೆ ಗಾಯಗಳಾಗಿವೆ. ಸದ್ಯ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.