ರಾಜ್ಯದಲ್ಲಿ ಮತ್ತೆ ಮೋಡ ಬಿತ್ತನೆ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಅದಕ್ಕಾಗಿ ಮುಖ್ಯಮಂತ್ರಿಯ ಅನುಮತಿಗಾಗಿ ಕಾಯುತ್ತಿದ್ದಾರೆ. ರಾಜ್ಯ ಜಲಾನಯನ ಪ್ರದೆಶ ಹಾಗೂ ಮಲೆನಾಡು ಭಾಗಗಳಲಿ ಈ ಬಾರಿ ವಾಡಿಕೆಯಂತೆ ಮಳೆ ಬಾರದ ಕಾರಣ ಈ ನಿರ್ಧಾರಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಜಲಾನಯನ ಪ್ರದೇಶಗಳಲ್ಲಿ ಮೋಡದ ವಾತಾವರಣವಿದ್ದರೂ ಸಹ ಅಲ್ಲಿ ಮಳೆ ಬೀಳುತ್ತಿಲ್ಲ ಆದ್ದರಿಂದ ಈ ಬಾರಿ ರಾಜ್ಯದ ಅನೇಕ ಅಣೆಕಟ್ಟುಗಳು ಭರ್ತಿಯಾಗಿಲ್ಲ. ಅದಕ್ಕಾಗಿ ಕೆಆರ್‍ಎಸ್, ಕಬಿನಿ, ಹಾರಂಗಿ ಹಾಗೂ ಮಲೆನಾಡು ಭಾಗವಾದ ಶರಾವತಿ ಲಿಂಗನಮಕ್ಕಿ ಹಾಗೂ ಇತರೆ ಭಾಗಗಳಲ್ಲಿ ಮೋಡಬಿತ್ತನೆ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಇಲ್ಲದಿದ್ದರೆ ಮುಂದೆ ಅಣೆಕಟ್ಟುಗಳಲ್ಲಿ ನೀರಿಲ್ಲದೇ ರೈತರು ಮತ್ತು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಲಾಗಿದೆ.
ಸರ್ಕಾರ ಈ ಹಿಂದೆ 2002 ರಂದ 2010ರ ವರೆಗೂ ಮೋಡ ಬಿತ್ತನೆ ಮಾಡಿತ್ತಾದರೂ, ನಿರೀಕ್ಷಿತ ಫಲ ನೀಡಿರಲಿಲ್ಲ. ಆದರೆ ಈ ಬಾರಿಯ ಮೋಡ ಬಿತ್ತನೆಯಿಂದ ಸೂಕ್ತ ಫಲ ದೊರೆಯುವ ನಿರೀಕ್ಷೆ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅದಕ್ಕೆ ಬೇಕಾದ ಹೆಲಿಕಾಪ್ಟರ್ ಸಹಿತ ಎಲ್ಲಾ ಪರಿಕರಗಳನ್ನು ಅಮೇರಿಕಾದಿಂದ ತರಿಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದ್ದಾರೆ.
POPULAR STORIES :
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!