ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ 85 ದಿನಗಳ ಪರಿವರ್ತನಾ ಯಾತ್ರೆ ಇಂದು ಮುಕ್ತಾಯವಾಗಲಿದೆ. ಪ್ರಧಾನ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅವರು ಭಾಷಣ ಮಾಡಲಿದ್ದಾರೆ. ಮೋದಿ ಆಗಮನದ ಕಾರ್ಯಕ್ರಮಕ್ಕೆ ಸಿದ್ಧತೆ ಜೋರಾಗಿದೆ.
ಈ ನಡುವೆ ಅರಮನೆ ಮೈದಾನದಲ್ಲಿ ಹಾಕಲಾಗಿರುವ ಅಡುಗೆ ಸೆಟ್ ನಲ್ಲಿ ಸಂಭವಿಸ ಬಹುದಿದ್ದ ಭಾರೀ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ.
ಅರಮನೆ ಮೈದಾನದಲ್ಲಿ ಅಡುಗೆ ಮಾಡಿವಾಗ ಸಿಲೆಂಡರ್ ನಿಂದ ಗ್ಯಾಸ್ ಲೀಕ್ ಆಗಿದ್ದು, ಅಡುಗೆ ಮಾಡುವವರು ಭಯಗೊಂಡು ಓಡಿ ಹೋಗಿದ್ದಾರೆ. ಆಯೋಜಕರ ಜೊತೆ ಜಗಳ ಮಾಡಿದ್ದಾರೆ. ಬಳಿಕ ಗ್ಯಾಸ್ ರೆಗ್ಯುಲೇಟರ್ ಬದಲಿಸಿದ್ದು, ಪುನಃ ಅಡುಗೆ ಕೆಲಸ ಶುರುಮಾಡಿದ್ದಾರೆ.