ರಿಲಾಯನ್ಸ್ ಜಿಯೋ ತನ್ನ ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಫೋಟೋವನ್ನು ಬಳಸಿದಕ್ಕಾಗಿ ರಿಲಾಯನ್ಸ್ ಜಿಯೋಗೆ ದಂಡ ವಿಧಿಲಾಗಿದೆ. ಜಿಯೋ ಸಂಸ್ಥೆ ಅನುಮತಿ ಇಲ್ಲದೆ ಪ್ರಧಾನಿ ಮೋದಿ ಅವರ ಫೋಟೋವನ್ನು ಬಳಸಿದಕ್ಕಾಗಿ 500ರೂ. ದಂಡ ವಿಧಿಸಲು ಗ್ರಾಹಕರ ವ್ಯವಹಾರ ಸಚಿವಾಲಯ ತೀರ್ಮಾನಿಸಿದೆ.
ಅನುಮತಿ ಇಲ್ಲದೇ ಜಿಯೋ ಸಂಸ್ಥೆ ಪ್ರಧಾನಿ ಮೋದಿ ಅವರ ಚಿತ್ರವನ್ನು ಬಳಸಿಕೊಂಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ರಾಜ್ಯ ಸಭೆಗೆ ಮಾಹಿತಿ ನೀಡಿತ್ತು. ಆದ್ರೂ ಕೂಡ ಜಿಯೋ ಮೋದಿ ಅವರ ಚಿತ್ರ ಬಳಕೆ ಮಾಡಿಕೊಂಡಿತ್ತು. ಈ ಕುರಿತು ಸಮಾಜವಾದಿ ಪಾರ್ಟಿಯ ಸಂಸದ ನೀರಜ್ ಶೇಖರ್ ಅವರು ಪ್ರಶ್ನೆ ಕೇಳಿದ್ದರು. ಇದಕ್ಕೆ ಪಿಎಂಒ ಈ ಸಂಬಂಧ ಕಂಪನಿ ವಿರುದ್ದ ಕ್ರಮ ಕೈಗೊಳ್ಳುವ ಅಧಿಕಾರ ಗ್ರಾಹಕರ ಸಚಿವಾಲಯದ್ದು ಎಂದು ಉತ್ತರ ನೀಡುವ ಮೂಲಕ ಸ್ಪಷ್ಟಪಡಿಸಿದೆ. ಯಾವುದೇ ಕಂಪನಿ ಪ್ರಧಾನಿ ಅಥವಾ ರಾಷ್ಟ್ರಪತಿಗಳ ಫೋಟೋ ಬಳಸಿಕೊಳ್ಳುವ ಮೊದಲು ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು ಆದರೆ ಜಿಯೋ ನಿಯಮ ಉಲ್ಲಂಘಿಸಿದ್ದರಿಂದ ಜಿಯೋಗೆ ದಂಡ ವಿಧಿಸಿದೆ ಎನ್ನಲಾಗಿದೆ.
Like us on Facebook The New India Times
POPULAR STORIES :
ಬಿಗ್‍ಬಾಸ್‍ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?
ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?