ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!' ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

Date:

raaa ಮುಸಲ್ಮಾನರೇ ಇನ್ನು ಮುಂದೆ ನೀವು ಮೋದಿಯನ್ನು ದ್ವೇಷ ಮಾಡುವಂತಿಲ್ಲ, ಏಕೆಂದರೇ ಅವರೂ ಮುಸ್ಲಿಂ…!!
ಕೆಲವು ತಿಂಗಳ ಹಿಂದೆ ಪುನರ್ಜನ್ಮದ ಬಗ್ಗೆ ಸಂಶೋಧನೆ ನಡೆಸುವ ಅಮೇರಿಕಾದ ಇನ್ಸ್ಟಿಟ್ಯೂಟ್ ಫಾರ್ ಇಂಟ್ರಗ್ರೇಷನ್ ಆಫ್ ಸೈನ್ಸ್ ಇಂಟ್ಯೂಷನ್ ಅಂಡ್ ಸ್ಪಿರಿಟ್ ಸಂಸ್ಥೆ ಈ ಮಾಹಿತಿಯನ್ನು ನೀಡಿದಾಗ ಕೆಲ ಮುಸ್ಲೀಮರಿಗೆ ಖುಷಿಯೋ ಖುಷಿ, ಹಲವು ಮುಸ್ಲಿಮೇತರರಿಗೆ ಇರುವೆ ಬಿಟ್ಟುಕೊಂಡಂತಹ ಅನುಭವ. ಅವೆಲ್ಲಾ ಸುಳ್ಳು ಬಿಡ್ರೀ.. ಅಂತ ಇವ್ರು ಸಮಾಧಾನ ಮಾಡಿಕೊಂಡರೇ, ನಿಜ ಏಕಿರಬಾರದು ಎಂಬ ಸಮಜಾಯಿಷಿ ಅವರದ್ದು..! ಇನ್ನು ನೇರವಾಗಿ ಮೋದಿ ಮುಸ್ಲಿಂ ಹೇಗಾಗುತ್ತಾರೆ ಎಂಬುದರ ಬಗ್ಗೆ ಇನ್ಸ್ಟಿಟ್ಯೂಟ್ ಫಾರ್ ಇಂಟ್ರಗ್ರೇಷನ್ ಆಫ್ ಸೈನ್ಸ್ ಇಂಟ್ಯೂಷನ್ ಅಂಡ್ ಸ್ಪಿರಿಟ್ ಅಥವಾ ಐಐಎಸ್ಐಎಸ್ ಏನ್ ಹೇಳುತ್ತೆ ಎಂದು ನೋಡೋಣ.

ಐಐಎಸ್ಐಎಸ್, ಭಾರತದ ಇಂಟರೆಸ್ಟಿಂಗ್ ಪ್ರಧಾನಿ ನರೇಂದ್ರ ಮೋದಿಯವರ ಗತಜನ್ಮ ರಹಸ್ಯವನ್ನು ಹೊರಗೆಡವಿದಾಗ ಹಲವು ಪ್ರಶ್ನೆಗಳು ಹುಟ್ಟಿಕೊಂಡಿತ್ತು. ಅದಕ್ಕೂ ಐಐಎಸ್ಐಎಸ್ ಬಳಿ ಸಮಜಾಯಿಷಿಗಳಿದ್ದವು. ಪುನರ್ಜನ್ಮಗಳ ಸಂಶೋಧನೆಯೇ ಹಾಗೇ, ವಿಚಿತ್ರ, ವಿಶಿಷ್ಟ, ವಿಜ್ಞಾನಕ್ಕೂ ನಿಲುಕದ ಸಮಾಚಾರ. ನಿಗೂಢವನ್ನು ಬೆನ್ನತ್ತಿ ವಿಜ್ಞಾನಿಗಳು ನೀಡುವ ವರದಿಯಲ್ಲಿ ಲೋಪಗಳನ್ನು ಹುಡುಕುವಂತಿಲ್ಲ. ಅವರು ಕೊಡುವ ಕಾರಣ, ಒದಗಿಸುವ ಸಾಕ್ಷ್ಯ, ಯಾವುದೇ ಕಾರಣಕ್ಕೂ ಸುಳ್ಳೆಂದು ಹೇಳುವಂತಿಲ್ಲ.

ವ್ಯಕ್ತಿಯ ಸಾವಿನನಂತರ ಭೌತಿಕ ಶರೀರವನ್ನು ತೊರೆಯುವ ಆತ್ಮವು ಮತ್ತೊಂದು ಶರೀರವನ್ನು ಮೂರು ಕಾಲಘಟ್ಟಗಳಲ್ಲಿ ಪ್ರವೇಶಿಸುವ ಅವಕಾಶ ಹೊಂದಿರುತ್ತದಂತೆ. ಅದು ಯಾವಾಗ ಮತ್ತು ಯಾರ ದೇಹವನ್ನು ಸೇರುತ್ತದೆ ಎನ್ನುವುದೇ ಸೀಕ್ರೆಟ್. ಅದನ್ನೇ ಮೃತ್ಯು ರಹಸ್ಯ ಎಂದು ಕರೆಯುತ್ತಾರೆ. ಅಂತಹ ಮೃತ್ಯು ರಹಸ್ಯಗಳ ಬೆನ್ನು ಹಿಡಿದಿರುವ ಅಮೆರಿಕಾದ ಐಐಎಸ್ಐಎಸ್, ನರೇಂದ್ರ ಮೋದಿಯವರ ಜನ್ಮ ರಹಸ್ಯದ ಬಗ್ಗೆ ಸಂಶೋಧನೆ ಮಾಡುವುದಕ್ಕೂ ಕಾರಣವಿದೆ. ಏಕೆಂದರೇ ಜಾಗತಿಕವಾಗಿ ನರೇಂದ್ರ ಮೋದಿ ದೊಡ್ಡ ಸುದ್ದಿಯಾದವರು. ಭಾರತದ ರಾಜಕೀಯ ಐತಿಹ್ಯದಲ್ಲಿಯೇ ಹೊಸ ಪರ್ವವನ್ನು ಬರೆದವರು. ಯಾವ ಮುಸ್ಲೀಮರು ಅವರನ್ನು ದ್ವೇಷಿಸುತ್ತಿದ್ದರೋ, ಒಂದು ಹಂತದಲ್ಲಿ ಅದೇ ಮುಸ್ಲೀಮರು ಮೋದಿಗೆ ಜೈಕಾರ ಹಾಕಿದರು. ಓಟು ಹಾಕಿಯೂ ಗೆಲ್ಲಿಸಿದರು. ಹೇಳುವುದಕ್ಕೆ ಏನೂ ಉಳಿದಿಲ್ಲ. ಮೋದಿ ಭಾರತದ ಪ್ರಧಾನಿ, ಬದಲಾವಣೆಯ ಹೊಸ ಪರ್ವ. ಆಶಾಕಿರಣ.

ಮೋದಿಯವರನ್ನು ಮುಸ್ಲಿಂ ಜಗತ್ತು ದ್ವೇಷಿಸಲು ಕಾರಣ, ಗುಜರಾತ್ ನ ಗೋದ್ರಾ ಹತ್ಯಾಕಾಂಡ. ಇವತ್ತಿಗೂ ಮುಸ್ಲೀಮರು ಈ ವಿಚಾರದಲ್ಲಿ ಮೋದಿಯ ಯಾವ ಸಮರ್ಥನೆಯನ್ನು ಒಪ್ಪಿಕೊಳ್ಳುವುದಿಲ್ಲ.
ಆದರೆ ಯಾವ ಮುಸ್ಲೀಮರ ಮೇಲೆ ಮೋದಿ ಹಕೀಕತ್ತು ಈಡೇರಿದೆ ಎಂದು ಭಾವಿಸಲಾಗಿದೆಯೋ, ಅದೇ ಮೋದಿ ಗುಜರಾತ್ ನಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾದರು. ಮುಸ್ಲೀಮರ ಬೆಂಬಲ ಇಲ್ಲದಿದ್ದರೇ ಮೋದಿ ಗೆಲ್ಲಲು ಸಾಧ್ಯವಿಲ್ಲ, ಅವರು ಪ್ರಧಾನಿ ಆಗಲಾರರು ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಮುಸ್ಲೀಮರು ಕೂಡ ತಮ್ಮ ಗಟ್ಟಿ ನಿಧರ್ಾರದಿಂದ ಹಿಂದೆ ಸರಿಯಲಿಲ್ಲ. ಆದರೆ ಚುನಾವಣೆ ಮುಗಿದು ಬಿಜೆಪಿ ಗದ್ದುಗೆ ಏರಿತ್ತು. ಯಾವ ಮುಸಲ್ಮಾನ ಮೋದಿಯನ್ನು ಬೆಂಬಲಿಸಲಾರ ಎಂದು ಭಾವಿಸಲಾಗಿತ್ತೋ ಅದೇ ಮುಸಲ್ಮಾನ ಮೋದಿಯನ್ನು ಪ್ರಧಾನಿ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ. ಅಲ್ಲೊಂದು ಶುದ್ಧ ಮಾಂತ್ರಿಕತೆ ಇದ್ದದ್ದು ಅತ್ಯಂತ ಸ್ಪಷ್ಟವಾಗಿತ್ತು.

ಮೋದಿಗಿದ್ದ ಚಾಮರ್್ ಅದು. ಅತಿಯಾಗಿ ದ್ವೇಷಿಸುವ ಮುಸಲ್ಮಾನ ಅವರನ್ನು ಅಷ್ಟೇ ಆಪ್ತವಾಗಿ ಒಪ್ಪಿಕೊಂಡಿದ್ದ. ಮೋದಿ ಸರಿಯಿಲ್ಲ ಎಂದ ಬೆನ್ನಿಗೆ, ಮೋದಿಯಿಂದ ಭಾರತ ಪ್ರಕಾಶಿಸಲಿದೆ ಎಂದು ಸಮಾಧಾನ ಮಾಡಿಕೊಂಡಿದ್ದ. ಹಾಗಾದ್ರೇ ಮೋದಿಯಲ್ಲಿ ಇರುವ ಆ ಮಾಂತ್ರಿಕ ಶಕ್ತಿ ಏನು..? ಇದು ಯಾವತ್ತಿಗೂ ಯಾರಿಂದಲೂ ಕಂಡುಹಿಡಿಯಲಾಗದ ವಿಚಾರ. ಖುದ್ದು ಮೋದಿಗೆ ಅರ್ಥವಾಗದ ಸಮಾಚಾರ. ಆದರೆ ಮೋದಿಯ ಪುನರ್ಜನ್ಮ ಕಹಾನಿ ಇಂತಹ ವಾಸ್ತವಗಳಿಗೆ ಬೆಸೆದುಕೊಂಡಿತ್ತು. ಅವರನ್ನು ಅತಿಯಾಗಿ ದ್ವೇಷಿಸುವ ಕೆಲ ಮುಸಲ್ಮಾನರು, ಕ್ಷುದ್ರವಿದ್ಯೆಗೆ ಸಿಲುಕಿದವರಂತೆ ಅವರನ್ನು ಒಪ್ಪಿಕೊಳ್ಳುತ್ತಾರೆ. ಅದಕ್ಕೂ ಅವರ ಪುನರ್ಜನ್ಮಕ್ಕೂ ಒಂದಕ್ಕೊಂದು ಸಂಬಂಧವಿರಬಹುದಾ..? ಹಾಗಾದ್ರೆ ಅವರು ಹಿಂದಿನ ಜನ್ಮದಲ್ಲಿ ಯಾರ ರೂಪದಲ್ಲಿದ್ದರು..?. ಅದಕ್ಕೆ ಉತ್ತರ ಇನ್ಸ್ಟಿಟ್ಯೂಟ್ ಫಾರ್ ಇಂಟ್ರಗ್ರೇಷನ್ ಆಫ್ ಸೈನ್ಸ್ ಇಂಟ್ಯೂಷನ್ ಅಂಡ್ ಸ್ಪಿರಿಟ್ ನೀಡುತ್ತದೆ.

ಸಯ್ಯದ್ ಅಹ್ಮದ್ ಖಾನ್. ಮುಘಲ್ ಸಾಮ್ರಾಜ್ಯದ ಅಧಿಪತಿ. ಆಂಗ್ಲೋ ಇಂಡಿಯನ್, ಮುಸ್ಲೀಂ ಫಿಲಾಸಫರ್. ಅವರ ಅವತಾರವೇ ಈ ಮೋದಿ ಎನ್ನಲಾಗುತ್ತಿದೆ. ಇವತ್ತು ನಾವು ನೋಡುತ್ತಿರುವ ಮೋದಿಯ ತೆರನಾದ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿಯಾಗಿದ್ದರು ಸಯ್ಯದ್ ಅಹ್ಮದ್ ಖಾನ್. ಇವರ ಪೂರ್ಣ ಹೆಸರು ಸಯ್ಯದ್ ಅಹ್ಮದ್ ತಖ್ವಿ. ಅಕ್ಟೋಬರ್ 17, 1817ರಲ್ಲಿ ದೆಹಲಿಯ ಮುಘಲ್ ಕುಟುಂಬದಲ್ಲಿ ಹುಟ್ಟಿ ಬೆಳೆದ ಧೀಮಂತ ವ್ಯಕ್ತಿ. ಪರ್ಷಿಯನ್ ಮೂಲದವರು. ಮೊಘಲ್ ದೊರೆ ಅಕ್ಬರ್ ವಂಶಸ್ತರು. ಬಾಲ್ಯಾವಸ್ಥೆ ಕಳೆದ ನಂತರ ಈಸ್ಟ್ ಇಂಡಿಯಾ ಕಂಪನಿ ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿ ಆಗ್ರಾದ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿಕೊಂಡಿದ್ದರು. 1858ರಲ್ಲಿ ಮುರಾದಾಬಾದ್ ಕೋರ್ಟ್ ನಲ್ಲಿ ಹೈ ರ್ಯಾಂಕಿಂಗ್ ಪದವಿ ಸಿಕ್ಕಿತ್ತು. ಮುಂದೆ ರಾಜಾಡಳಿತದಲ್ಲಿ ಇನ್ನಿಲ್ಲದಂತೆ ಯಶಸ್ಸು ಸಾಧಿಸಿ ಅಲೀಘಡದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸಿದರು.

ಪ್ರಪ್ರಥಮ ಬಾರಿಗೆ ಪಾಕಿಸ್ತಾನ ಸ್ಥಾಪನೆಯ ವಾದ ಮಂಡಿಸಿದರು. ಅವರ ಆಗ್ರಹವೇ ಮುಂದೇ ಪಾಕಿಸ್ತಾನ ಸೃಷ್ಟಿಗೆ ಕಾರಣವಾಗಿತ್ತು. ದೇಶವನ್ನು ಕಟ್ಟುವ ಚಿಂತನೆ ಮಾಡಿದ್ದ ಸಯ್ಯದ್ ಅಹ್ಮದ್ ಖಾನ್ ನೇರ, ನಿಷ್ಠುರಿಯಾಗಿದ್ದರು. ಅವರ ರಾಜಾಡಳಿತದ ಶೈಲಿಗೂ ಮೋದಿಯ ಶೈಲಿಗೂ ಹೋಲಿಕೆಯಿದೆ. ಅಲ್ಲದೆ ಮೋದಿಯ ದೇಹದಲ್ಲಿ ಸೇರಿಕೊಂಡಿರುವುದು ಸಯ್ಯದ್ ಅಹ್ಮದ್ ಖಾನ್ ಆತ್ಮ ಎಂದು ಅಮೇರಿಕಾದ ಸಂಶೋಧನೆ ಹೇಳುತ್ತಿದೆ. ಮೋದಿ ಗತಜನ್ಮ ರಹಸ್ಯದಲ್ಲಿ ಇನ್ನೊಂದು ಸಾಧ್ಯತೆಯ ಸ್ಪಷ್ಟೀಕರಣವಿದೆ. ಅದೇನೆಂದರೇ ಮುಸ್ಲೀಮರ ಮಾರಣಹೋಮ ನಡೆಸಿದ ಮೋದಿಯನ್ನು ಯಾವುದೇ ಕಾರಣಕ್ಕೂ ಅಮೇರಿಕಾದ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ ಎಂದು ಅಲ್ಲಿನ ಆಡಳಿತ ಶಪಥ ಮಾಡಿತ್ತು. ಆದ್ರೆ ಮೋದಿ ಮ್ಯಾಜಿಕ್ ನಡೆದು ಭಾರತದಲ್ಲಿ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದ್ದೇ ಅಮೇರಿಕಾ ತನ್ನ ಶಪಥ ಮರೆತು ಮೋದಿಯವರಿಗೆ ವೆಲ್ಕಮ್ ಹೇಳಿತ್ತು.

ಹಾಗಂತ ಮೋದಿಯೇನು, ಅಮೆರಿಕಾ ಪ್ರವೇಶಕ್ಕೆ ಬೇಡಿಕೆಯಿಡಲಿಲ್ಲ. ಖುದ್ದು ಅಮೇರಿಕಾ ಮೋದಿಯ ಅರ್ಜಿಗೆ ಕಾಯದೇ ವಿಸಾ ರೆಡಿ ಮಾಡಿತ್ತು. ಇಲ್ಲೊಂದು ಸಮರ್ಥನೆ ಇರಬಹುದಾದ ಸಾಧ್ಯತೆಯಿದೆ. ಅದೇನೆಂದರೇ ಮೋದಿಯ ಗತಜನ್ಮದ ರಹಸ್ಯದ ಬಗ್ಗೆ ವರದಿ ನೀಡಿರುವುದು ಅಮೇರಿಕಾದ ಐಐಎಸ್ಐ. ಆ ಮೂಲಕ ಮೋದಿ ಸಹ ಹಿಂದಿನ ಜನ್ಮದಲ್ಲಿ ಮುಸ್ಲಿಂ ಆಗಿದ್ದರು ಎಂದು ಅವರು ಮುಸ್ಲಿಂ ಜಗತ್ತಿಗೆ ಸಮಾಧಾನ ಹೇಳಿ, ತಾನು ಮಾತು ತಪ್ಪಿದಕ್ಕೆ ಸಮರ್ಥನೆ ಹೇಳುವ ಪ್ರಯತ್ನವೂ ಮಾಡಿರಬಹುದು..!

ಪುನರ್ಜನ್ಮ ಸಂಶೋಧನೆಯಲ್ಲಿ ಒಬ್ಬ ವ್ಯಕ್ತಿಯ ಹಿಂದಿನ ಜನ್ಮದ ರಹಸ್ಯ ತಿಳಿಯಲು ಕೆಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ವ್ಯಕ್ತಿಯ ಮುಖ ಲಕ್ಷಣ, ರಾಜಕೀಯ ಬೆಳವಣಿಗೆಯ ಹಾದಿಯನ್ನು ತಾಳೆ ಹಾಕಲಾಗುತ್ತದೆ. ಕೆಲವರಿಗೆ ಇನ್ನೊಂದು ರೀತಿಯ ಗೊಂದಲ ಕಾಡುತ್ತದೆ. ಅದೇನೆಂದರೇ ಮುಸ್ಲಿಂ ವ್ಯಕ್ತಿಯ ಆತ್ಮ, ಹಿಂದೂ ದೇಹವನ್ನು ಹೇಗೆ ಪ್ರವೇಶಿಸುವುದಕ್ಕೆ ಸಾಧ್ಯ..? ಆ ಬಗ್ಗೆಯೂ ಡಿಬೆಟ್ ನಡೆದಿದೆ. ಆದರೆ ಆತ್ಮಕ್ಕೆ ಯಾವ ಧರ್ಮವೂ ಇಲ್ಲ ಎಂದು ವರದಿ ಹೇಳಿದೆ. ಸಂಶೋಧನೆಯ ವರದಿಯನ್ನು ಸ್ಫುಟವಾಗಿ ಹೇಳುವುದಾದರೇ ಮೋದಿ ಹಾಗೂ ಸಯ್ಯದ್ ಮುಖ ಲಕ್ಷಣಗಳಲ್ಲಿ ಸಾಮ್ಯತೆಯಿದೆ. ಕೂದಲಿನ ಮಾದರಿಯೂ ಒಂದೇ ತೆರನಾಗಿದೆ. ಇವರಿಬ್ಬರು ರಾಜಕೀಯವಾಗಿ ಪ್ರಬುದ್ಧರಾಗಲು ತಾವು ನಂಬಿಕೊಂಡು ಬಂದ ಧರ್ಮವನ್ನೇ ದಾಳ ಮಾಡಿಕೊಂಡಿದ್ದರು. ಆ ಧರ್ಮವೇ ಅವರನ್ನು ಗೆಲ್ಲಿಸಿತ್ತು. ಇಬ್ಬರ ವ್ಯಕ್ತಿತ್ವದಲ್ಲೂ ಶಾಂತಭಾವವಿದೆ. ಗಾಂಭೀರ್ಯವಿದೆ. ಒಬ್ಬರಿಗೊಬ್ಬರು ಅಚ್ಚು ಹಾಕಿದಂತ್ತಿದ್ದಾರೆ. ಇವೆಲ್ಲವೂ ಹಿಂದಿನ ಜನ್ಮದಲ್ಲಿ ಮೋದಿ ಮುಸ್ಲಿಂ ಆಗಿದ್ದರು ಎನ್ನುವುದಕ್ಕೆ ಪುರವೆಗಳನ್ನು ಒದಗಿಸುತ್ತದೆ.

ಅವತ್ತು ಗುಜರಾತ್ನಲ್ಲಿ ನರೇಂದ್ರ ಮೋದಿಯಲ್ಲ, ಇಂದಿರಾಗಾಂಧಿ ಇದ್ದಿದ್ದರೂ ಮಾರಣಹೋಮವನ್ನು ತಪ್ಪಿಸುವುದು ಕಷ್ಟವಿತ್ತು. ಹಿಂದೂಗಳನ್ನು ಮುಸ್ಲೀಮರು ಬೆಂಕಿಯಿಟ್ಟು ಸುಟ್ಟರಂತೆ ಎಂಬ ಸುದ್ಧಿ ಕಾಳ್ಗಿಚ್ಚಿನಂತೆ ರಾಜ್ಯದೆಲ್ಲೆಡೆ ಹರಡಿದಾಗ ಕೋಮುಗಲಾಟೆ ನಡೆದೇ ತೀರುತ್ತದೆ. ಇರುವ ಲಕ್ಷ ಪೊಲೀಸರಿಂದ ತತ್ಕ್ಷಣಕ್ಕೆ ಕೋಟ್ಯಾಂತರ ಜನರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದನ್ನೇ ಕಾರಣವಾಗಿಟ್ಟುಕೊಂಡು ಈ ಕ್ಷಣಕ್ಕೂ ಮೋದಿಯವರನ್ನು ದ್ವೇಷಿಸುವುದು ಸರಿಯಲ್ಲ. ನರೇಂದ್ರ ಮೋದಿ ಕೋಟ್ಯಾಂತರ ಹೃದಯಗಳಲ್ಲಿ ಕನಸಿನ ಬೀಜ ಬಿತ್ತಿರುವ ನಾಯಕ. ಭಾರತದ ಭವಿಷ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸರ್ವ ಸನ್ನದ್ಧವಾಗಿರುವ ಪ್ರಧಾನಿ.

ಬಡವನಿಗೆ ಗೊತ್ತು ಅನ್ನದ ಋಣ. ಮೋದಿಯವರಿಗೆ ಈ ಮಾತು ಅಕ್ಷರಶಃ ಒಪ್ಪುತ್ತದೆ. ಅವರು ಬೆಳೆದು ಬಂದ ಜೀವನ, ದಿನಗಳು ಈ ಪರಿ ಕನಸು ಕಟ್ಟುವುದಕ್ಕೆ ಪ್ರೇರೇಪಿಸಿರಬಹುದು ಅಂದರೇ ತಪ್ಪಲ್ಲ. ಅವರು ಹುಟ್ಟಿದ್ದು ಬಡ ಕುಟುಂಬದಲ್ಲಿ. ಗುಜರಾತ್ ಜಿಲ್ಲೆಯ ವಿದ್ನಗರದಲ್ಲಿ 17 ಸೆಪ್ಟೆಂಬರ್ 1967ರಲ್ಲಿ ಮುಲ್ಚಂದ್ ಮೋದಿ, ಹೀರಾಬೆನ್ ದಂಪತಿಗಳ ಮೂರನೇ ಮಗನಾಗಿ ಹುಟ್ಟಿದರು. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದ್ದರು. ಅರವತ್ತರ ದಶಕದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂ ಪ್ರೇರಣೆಯಿಂದ ಸೇವೆ ಮಾಡಿದ್ದರು. ಅದ್ಭುತ ಸಂಘಟನಾ ಕೌಶಲ್ಯವಿತ್ತು. ಮನಃಶಾಸ್ತ್ರ ಕಲಿತಿದ್ದರು. ಅಖಿಲ ಭಾರತೀಯ ವಿವಿದ್ಯಾರ್ಥಿ ಪರಿಷತ್ ನಾಯಕರಾಗಿ ರಣಾಂಗಣಕ್ಕೆ ಧುಮುಕಿದರು. ಗುಜರಾತ್ನಲ್ಲಿ ಅನೇಕ ಸಾಮಾಜಿಕ ರಾಜಕೀಯ ಚಳವಳಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ಬಾಲ್ಯದಿಂದಲೇ ಕಷ್ಟದ ದಿನಗಳನ್ನು ಕಾಣುತ್ತ ಬಂದರು.
ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ ಸೇರಿದಾಗ ಕಠಿಣ ಹಾದಿಗಳನ್ನು ಸವೆಸಬೇಕಾಯಿತು. ಆನಂತರ ರಾಷ್ಟ್ರೀಯ ಸ್ವಯಂ ಸಂಘ ಸೇರಿದ ಮೋದಿಯವರು ಅಲ್ಲಿ ಪರಮ ಶಿಸ್ತನ್ನು ರೂಢಿಸಿಕೊಂಡರು. 1987ರಲ್ಲಿ ಬಿಜೆಪಿ ಸೇರುವ ಮೂಲಕ ಸಕ್ರೀಯ ರಾಜಕಾರಣಕ್ಕೆ ಬಂದು ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾದರು. ಆ ಹೊತ್ತಿಗಾಗಲೇ ಮೋದಿ ನಾಯಕತ್ವದ ಪ್ರಶಂಸೆಯಾಗುತ್ತಿತ್ತು.

ಆನಂತರ ಸಕ್ರಿಯ ರಾಜಕಾರಣದಲ್ಲಿ ಮಿಂಚಿದ ಮೋದಿ ನಾಲ್ಕು ಬಾರಿ ಗುಜರಾತ್ ಗದ್ದುಗೆ ಏರಿದರು. ದೇಶದಲ್ಲೇ ಗುಜರಾತ್ ಅನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದರು. ಗೋದ್ರಾ ಹತ್ಯಾಕಾಂಡದ ಕಪ್ಪುಚುಕ್ಕೆ ಶಾಶ್ವತವಾಗಿರುವುದು ಬಿಟ್ಟರೇ ಮೋದಿ ಅಪ್ಪಟ ದೇಶಭಕ್ತ. ಸಮರ್ಥ ನಾಯಕ. ಅಂಥ ಮೋದಿಯನ್ನ ಮುಂದಿಟ್ಟುಕೊಂಡೇ ಬಿಜೆಪಿ ಚುನಾವಣಾ ಅಖಾಢಕ್ಕೆ ಇಳಿದಿತ್ತು. ಗೆದ್ದು ಬೀಗಿತ್ತು. ಮೋದಿ ಹೊರತುಪಡಿಸಿ ಬೇರೇ ಯಾರೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಂದಾಳತ್ವ ವಹಿಸಿದ್ರೂ ಬಿಜೆಪಿ ಲಾಗಾಪಲ್ಟಿ ಹೊಡೆಯುತ್ತಿದ್ದದ್ದು ಬಹುತೇಕ ನಿಶ್ಚಿತ.

ಒಟ್ಟಿನಲ್ಲಿ ಮೋದಿಯವರನ್ನು ಕಂಡರಾಗದ ಕೆಲ ಮುಸ್ಲೀಮರು ಅದನ್ನು ಬಹಿರಂಗವಾಗಿ ಎಲ್ಲೂ ಹೇಳಿಕೊಳ್ಳುತ್ತಿಲ್ಲ. ಒಳಗೊಳಗೆ ತಮಗರಿಯದೆ ಮೋದಿಯನ್ನು ಮೆಚ್ಚಿಕೊಳ್ಳುತ್ತಾರೆ. ಇವೆಲ್ಲಾ ಆಕಸ್ಮಿಕಗಳಿಗೂ ಮೋದಿಯ ಪುನರ್ಜನ್ಮ ಕಹಾನಿಗೂ ಸಂಬಂಧವಿರಬಹುದಾ..? ಗೊತ್ತಿಲ್ಲ. ಆದರೆ ಕಾಕತಾಳೀಯವೆನಿಸುತ್ತಿರುವುದು ಮಾತ್ರ ಸುಳ್ಳಲ್ಲ.

POPULAR  STORIES :

ನಾ ಮಾಡಿದ್ದು ಸಣ್ಣಪುಟ್ಟ ತಪ್ಪುಗಳನ್ನಷ್ಟೆ..!? ನನ್ನವಳ ಪತ್ರದಲ್ಲಿ ನಿಮ್ಮೆಲ್ಲರ ಛಾಯೆ..

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

ಚಂದದ ನಟಿಯರೇಕೆ ಸೂಸೈಡ್ ಮಾಡ್ಕೋತಾರೆ..!?

`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!

ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?

 

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...