ಕರುಣಾನಿಧಿ, ಫರ್ನಾಂಡಿಸ್ ಗೆ ಶುಭಕೋರಿದ ಪ್ರಧಾನಿ

admin
1 Min Read

ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರು 94ನೇ ಹಾಗೂ ಹಿರಿಯ ರಾಜಕಾರಣಿ ಜಾರ್ಜ್ ಫರ್ನಾಂಡೀಸ್ 88ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಇವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ.
ಎಂ ಕರುಣಾನಿಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕರುಣಾನಿಧಿ ಒಬ್ಬ ಒಳ್ಳೆಯ ಲೇಖಕ, ಕವಿ, ಚಿಂತಕ ಹಾಗೂ ವಾಗ್ಮಿ. ಇವರಿಗೆ ದೀರ್ಘಾಯುಷ್ಯಾ,‌ಆರೋಗ್ಯ ದೊರೆಯಲಿ ಎಂದು ಆಶಿಸುತ್ತೇನೆ ಅಂತ ಮೋದಿ ಟ್ವೀಟ್ ಮಾಡಿದ್ದಾರೆ.


ಅದೇರೀತಿ ಜಾರ್ಜ್ ಫರ್ನಾಂಡೀಸ್ ಅವರಿಗೆ ಶುಭಕೋರಿರುವ ಮೋದಿ, ಭಾರತದ ಪ್ರಜಾಪ್ರಭುತ್ವ ಉಳಿಸುವಲ್ಲಿ ಜಾರ್ಜ್ ಸಾಹೇಬರ ಪಾತ್ರವನ್ನು ಭಾರತ ನೆನಪಿಡುತ್ತದೆ. ಅವರು ಜನನಾನಾಯಕ, ಸಮರ್ಥ ಆಡಳಿತಗಾರ ಅವರಿಗೆ ಒಳ್ಳೆಯ ಆರೋಗ್ಯ ಸಿಗಲೆಂದು ಪ್ರಾರ್ಥಿಸ್ತೀನಿ ಎಂದು‌ ಮೋದಿ ಟ್ವೀಟ್ ಮಾಡಿದ್ದರು.

Share This Article
Leave a Comment