ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ನಕ್ಸಲರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವರದಿ ಬೆನ್ನಲ್ಲೇ ನವದೆಹಲಿಯಲ್ಲಿನ ಅವರ ಮನೆಯ ಮೇಲೆ ಇತ್ತೀಚೆಗೆ ಯುಎಫ್ ಒ (ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಅಬ್ಜೆಕ್ಟ್ , ಅಂದರೆ ಗುರುತಿಸಲಾಗದ ಹಾರಡುತ್ತಿದ್ದ ವಸ್ತು) ಪತ್ತೆಯಾಗಿ ಆತಂಕ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ. ಯುಎಫ್ ಒ ಪತ್ತೆಯಾದ ಬೆನ್ನಲ್ಲೇ ಇಡೀ ಪ್ರದೇಶದಲ್ಲಿ ತಪಾಸಣೆ ನಡೆಸಲಾಗಿದ್ದು , ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಯುಎಫ್ ಒ ಪತ್ತೆಯಾಗಿರುವುದು ದೆಹಲಿ ಪೊಲೀಸರು ಖಚಿತಪಡಿಸಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನವು ಮಾಹಿತಿ ಬಹಿರಂಗಪಡಿಸಿಲ್ಲ.
ಪ್ರಧಾನಮಂತ್ರಿಗಳ ಮನೆಯ ಸುತ್ತಮುತ್ತಲಿನ 2 ಕಿಮೀ ಪ್ರದೇಶವನ್ನು ಹಾರಾಟ ನಿಷಿದ್ಧ ವಲಯ ಎಂದು ಘೋಷಿಸಲಾಗಿದೆ. ಜೂ 7 ರಂದು ಸಂಜೆ 7.30 ರ ಸುಮಾರಿಗೆ ಗುರುತಿಸಲಾಗದ ವಸ್ತುವೊಂದರ ಹಾರಾಟ ಕಂಡುಬಂದಿತ್ತು.
ಪ್ರಧಾನಿ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ ಸಿಬ್ಬಂದಿ ದೆಹಲಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಧಾವಿಸುವುದರ ಒಳಗೆ ಯುಎಫ್‌ಒ ನಾಪತ್ತೆಯಾಗಿತ್ತು.