ಅರೆರೆ… ನೋಡಿ ಸ್ವಾಮಿ ಎಂತಾ ಖದೀಮರಿದ್ದಾರೆ ನೋಡಿ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಿಯನ್ನೇ ಫೋರ್ಜರಿ ಮಾಡದ್ದಾರೆ ಈ ಮಹಾನುಭಾವರು..!
ಮುಂಬರುವ ಸ್ವಾತಂತ್ರ್ಯ ದಿನಾಚಾರಣೆ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸುವಂತೆ ಬರೆದ ಪತ್ರಕ್ಕೆ ಮೋದಿ ಅವರ ನಕಲು ಸಹಿಯನ್ನು ಮಾಡಿದ್ದ ಇಬ್ಬರು ಜಾರ್ಖಂಡ್ ಮೂಲದವರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಮೇ 15 ರಂದು ಪ್ರಧಾನಿ ಮೋದಿ ಅವರ ನಕಲಿ ಸಹಿಯಿರುವ ಪತ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸುವಂತೆ ಜಾರ್ಖಂಡ್ ನಿವಾಸಿಗಳಾದ ಪಂಡಿತ್ ಸ್ವರಾಜ್ ಕುಮಾರ್ ಮತ್ತು ಸುವೇಂದು ಕುಮಾರ್ ಬರ್ಮಾನ್ ಎಂಬುವರು ಪತ್ರ ಬರೆದಿದ್ದರು. ಈ ಪತ್ರ ಪ್ರಧಾನಿ ಮಂತ್ರಿಗಳ ಕಛೇರಿಗೆ ತಲುಪಿತ್ತು. ಮೋದಿ ಈ ರೀತಿಯ ಯಾವುದೇ ಸಂವಹನ ನಡೆಸಿಲ್ಲ ಎಂದು ತಿಳಿದು ಬಂದ ಮೇಲೆ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು.
ಈ ಸಂಬಂಧ ಜಾರ್ಖಂಡ್‍ನ ಬೊರಾಕೋ ಸ್ಟೀಲ್ ಸಿಟಿ ಮತ್ತು ಪಶ್ಚಿಮ ಬಂಗಾಳದ ಬಿಶನ್ ಪುರ್ ಜಿಲ್ಲೆಯ ಬಂಪುರ್‍ನಲ್ಲಿ ಪರಿಶಿಲನೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರೋಪಿ ಮಾಡಿರುವ ಪೋರ್ಜರಿ ಸಹಿ ದಾಖಲೆಗಳನ್ನು ಸಿಬಿಐ ವಕ್ತಾರರು ವಶಪಡಿಸಿಕೊಂಡಿದ್ದಾರೆ.
POPULAR STORIES :
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!
6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!
ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!
ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ
ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!