ಆತಂಕ ಸೃಷ್ಟಿಸಿರುವ ಡೆಡ್ಲಿ ಗೇಮ್ ಮೋಮೋ ಬಗ್ಗೆ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮಕ್ಕಳು,ಯುವ ಪೀಳಿಗೆ ಬ್ಲ್ಯೂ ವೇಲ್ ಹಾಗೂ ಮೋಮೋ ಗೇಮ್ ನಂತಹ ಮಾರಣಾಂತಿಕ ಆಟಗಳ ಹಿಂದೆ ಬಿದ್ದು ಜೀವನ ಮತ್ತು ಜೀವವನ್ನು ಕಳೆದುಕೊಳ್ಳುತ್ತಿರುವುದು ಆತಂಕ ಮೂಡಿಸುತ್ತಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಸಾಮಾಜಿ ಜಾಲತಾಣಗಳ ಮೂಲಕ ಪೋಷಕರಿಗೆ ಅರಿವು ಮೂಡಿಸುತ್ತಿದ್ದಾರೆ.
Advisory on MOMO Challenge Games: To Students:a) Do not share any content related to…
Posted by Cybercrimes Division CID Bangalore on Monday, August 27, 2018
ಈ ಗೇಮ್ ಗಳಿಗೆ ಸಂಬಂಧಿಸಿದ ಯಾವುದೇ ಲಿಂಕ್ ಗಳನ್ನು ಶೇರ್ ಹಾಗೂ ಡೌನ್‌ಲೋಡ್ ಮಾಡದಂತೆ ಎಚ್ಚರವಹಿಸುವಂತೆ ಮಕ್ಕಳು ,ಶಿಕ್ಷಕರು ಮತ್ತು ಪೋಷಕರಿಗೆ ಪೊಲೀಸರು ತಿಳಿ ಹೇಳಿದ್ದಾರೆ. ಇದೊಂದು ಡೆಡ್ಲಿಗೇಮ್ ಆಗಿದ್ದು, ಆಟ ಪೂರ್ಣಗೊಳಿಸದೇ ಇದ್ದರೆ ಕಠಿಣ ಶಿಕ್ಷೆ ನೀಡುತ್ತೆ…! ಇದನ್ನು ಜಪಾನಿನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದು ಮಕ್ಕಳನ್ನು ಅತಿಹೆಚ್ಚಾಗಿ ಸೆಳೆಯುತ್ತದೆ.ಈ ಚಾಲೆಂಜ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಆಟವನ್ನು ಫೇಸ್ ಬುಕ್ ಮತ್ತು ವಾಟ್ಸಪ್ ಮೂಲಕ ಆಡಲಾಗುತ್ತದೆ. ಇದು ಜನ ತಮ್ಮ ಜೀವವನ್ನು ತಾವೇ ತೆಗೆದುಕೊಳ್ಳುವಂತೆ ಮಾಡುವಂತೆ ಪ್ರಚೋದನೆ ನೀಡುತ್ತದೆ.
we have published an advisory on MOMO CHALLENGE game. Please spread awareness about the issue.https://t.co/rukCZ7m8NM
— Cyber Crime CID (@CybercrimeCID) August 27, 2018