ಚೀನಾ ದೇಶ ಇದೀಗ ಕೃತಕ ಚಂದ್ರನನ್ನು ನಿರ್ಮಿಸಲು ಉದ್ದೇಶಿಸಿದೆ.
ಸಿಯಾಚಿನ್ ವಿಭಾಗದ ಈಶಾನ್ಯ ಭಾಗದ ಅಧಿಕಾರಿ ಚೆಂಗುಡು ಈ ವಿಷಯವನ್ನು ತಿಳಿಸಿದ್ದು, ಇಲ್ಯುಮಿನೇಷನ್ ಸ್ಯಾಟಲೈಟ್ ಮೂಲಕ ನಕಲಿ ಚಂದ್ರನನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಇದು ನೋಡಲು ಚಂದ್ರನಂತೆಯೇ ಕಾಣುತ್ತದೆ. ಅಲ್ಲದೇ ಮಾಮೂಲಿ ಚಂದ್ರನಿಗಿಂತ 8 ಪಟ್ಟು ಹೆಚ್ಚು ಪ್ರಕಾಶಮಾನವಾಗಿರುತ್ತದೆ ಎಂದಿದ್ದಾರೆ.
ಬೀದಿ ದೀಪ ಹಾಗೂ ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಕಳಪೆ ದೀಪಗಳ ನಿರ್ವಹಣೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದ ಜೊತೆ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಕೃತಕ ಚಂದ್ರನನ್ನು ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
2022ರ ವೇಳೆಗೆ ಚಂದ್ರನ ಮೇಲೆ ಮಾನವನನ್ನು ಕಳುಹಿಸುವ ಯೋಜನೆಯನ್ನು ಚೀನಾ ಸರಕಾರ ಹಮ್ಮಿಕೊಂಡಿದ್ದು, ಅದಕ್ಕೂ ಮೊದಲೇ ಕೃತಕ ಚಂದ್ರನನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿದೆ.