ಶ್!!!!! ಬೊಂಬೆಗಳಿವೆ ಹುಷಾರ್!!!

Date:

ಇಂದು ನಾವು ಹೇಳೋ ಸ್ಟೋರಿ ಅಂತಿಂತದಲ್ಲ. ಬದಲಾಗಿ ಸಿಕ್ಕಾಪಟ್ಟೆ ಭಯಾನಕ, ಭೀತಿ ಹುಟ್ಟಿಸುವಂತಹ ದೆವ್ವದ ಸ್ಟೋರಿ. ದೆವ್ವಗಳನ್ನ ಯಾರು ನಂಬ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಬಹುಶಃ ಈ ಸ್ಟೋರಿ ಓದಿದ ನಂತ್ರ ನಂಬಿದ್ರೆ ನಂಬ್ಲೂಬಹುದು. ಐಲ್ಯಾಂಡ್ ಅಥವಾ ದ್ವೀಪ ಎಂದು ಹೇಳೋದಾದ್ರೆ ನಮಗೆ ನೆನಪಿಗೆ ಬರೋದು ಸುಂದರ ಮನಮೋಹಕ ದೃಶ್ಯಗಳು. ಸುತ್ತಮುತ್ತಲು ಹಸಿರು, ಜುಳು ಜುಳು ನೀರಿನ ಸಪ್ಪಳ ಇತ್ಯಾದಿ ಇತ್ಯಾದಿ ನೀವು ಇಮ್ಯಾಜಿನ್ ಮಾಡಿದ ಹಾಗೆ. ಆದ್ರೆ ನಾವು ಹೇಳ್ತಾ ಇರೋದು ಇಂತಹ ಕಣ್ಣಿಗೆ ಆನಂದ ನೀಡೋ ದ್ವೀಪದ ಬಗ್ಗೆ ಅಲ್ಲ. ಬದ್ಲಾಗಿ ನೀವು ಎಂದಿಗೂ ನಿರೀಕ್ಷಿಸದ ಭಯಾನಕ ಮತ್ತು ರೋಚಕತೆಯಿಂದ ಕೂಡಿರೋ ದ್ವೀಪದ ಬಗ್ಗೆ. ಹೌದು. ಇದು ಅಂತಿಂಥಾ ದ್ವೀಪವಲ್ಲ. ಬದಲಾಗಿ ಇಡೀ ದ್ವೀಪದ ತುಂಬಾ ಭಯಾನಕ ಗೊಂಬೆಗಳಿವೆ. ಇಲ್ಲಿರುವ ಮರದ ತುಂಬೆಲ್ಲಾ ಮುಖದ ಮೇಲೆ ರಕ್ತ ಚೆಲ್ಲಿರುವ, ರುಂಡವೇ ಇಲ್ಲದ, ತಲೆಗೂದಲು ಹರಡಿಕೊಂಡಿರುವ ಒಟ್‍ನಲ್ಲಿ ನೋಡಿದ್ರೆನೇ ಹೆದರಿಸುವಂತಹಾ ಸಾವಿರಾರು ಗೊಂಬೆಗಳು ಮರಗಳಲ್ಲಿ ಜೋತುಬಿದ್ದಿವೆ.
ಈ ದ್ವೀಪವಿರೋದು ಮೆಕ್ಸಿಕೋದಿಂದ ಕೆಲ ಕಿಲೋ ಮೀಟರ್ ಅಂತರದ ಹೊರವಲಯದಲ್ಲಿರುವ ಝೋಚಿಮಿಲ್ಕೋ ಎನ್ನೋ ಪ್ರದೇಶದಲ್ಲಿ. ಈ ದ್ವೀಪವನ್ನ ಯಾರೂ ಇಂದಿಗೂ ಇಷ್ಟ ಪಡೋದಿಲ್ಲ. ಇಲ್ಲಿಗೆ ಬರೋದಕ್ಕೆ ಸಿಕ್ಕಾಪಟ್ಟೆ ಹೆದರ್ತಾರೆ. ಯಾಕಂದ್ರೆ ಈ ದ್ವೀಪದಲ್ಲಿ ಹರಿಯೋ ನೀರಿನಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಎನರ್ಜಿಯಿದೆ. ಅದಕ್ಕೆ ಕಾರಣ 1911ರಲ್ಲಿ ಇಲ್ಲಿ ನಡೆದ ಭೀಕರ ಮೆಕ್ಸಿಕನ್ ಯುದ್ಧ. ಹೌದು. ಈ ಯುದ್ಧದಲ್ಲಿ ಮೃತಪಟ್ಟ ಸಾವಿರಾರು ಜನರನ್ನ ಈ ದ್ವೀಪದಲ್ಲಿ ಅರೆಬರೆ ಸುಟ್ಟು ಎಸೆಯಲಾಗಿತ್ತಂತೆ. ಕ್ಲೀನಿಂಗ್ ಮಾಡೋ ವೇಳೆ ಇಲ್ಲಿ ಸಿಕ್ಕಿವೆ ಸಾವಿರಾರು ತಲೆ ಬರುಡೆಗಳು ಮತ್ತು ಮಾನವನ ಅಸ್ತಿಪಂಜರಗಳು. ಒಂದು ನಂಬಿಕೆಯ ಪ್ರಕಾರ ಕೆಲ ಅತೃಪ್ತ ಆತ್ಮಗಳು ಇನ್ನೂ ನೆಲೆಸಿವೆಯಂತೆ.
ಈ ಪುಟ್ಟ ದ್ವೀಪದಲ್ಲಿ ಬರೀ ಮೀನುಗಳು ಮತ್ತು ತಲೆ ಬುರುಡೆಗಳಷ್ಟೇ ಅಲ್ಲ, ಇಲ್ಲಿ ಕೆಲ ಮತ್ಸ್ಯಕನ್ಯೆಯರೂ ಇದ್ದಾರೆ ಎಂದು ಸುತ್ತಮುತ್ತಲಿನ ಸ್ಥಳೀಯರು ತಿಳಿಸುತ್ತಾರೆ. ಆದ್ರೆ ಇಲ್ಲಿಯವರೆಗೂ ಯಾವ ಸಂಶೋಧಕರಿಗೂ ಇವು ಕಾಣಿಸಿಲ್ಲ. ಆದ್ರೆ ಇಲ್ಲಿನ ಸ್ಥಳೀಯರು ಮಾತ್ರ ಇಲ್ಲಿ ಅವುಗಳಿರೋದು ಸತ್ಯ ಎಂದು ಕಾನ್ಫಿಡೆನ್ಸಾಗಿ ಹೇಳ್ತಾರೆ. ಅದಕ್ಕೆ ಪೂರಕವೆಂಬಂತೆ ಒಂದು ಕತೆಯೂ ಇದೆ. ಆ ಕತೆಯನ್ನ ನಾವು ಮುಂದೆ ಹೇಳ್ತೀವಿ. ಒಟ್‍ನಲ್ಲಿ ಈ ದ್ವೀಪ ಒಂದು ವಿಚಿತ್ರ ಸತ್ಯಗಳಿಗೆ ಎಡೆಮಾಡಿಕೊಟ್ಟಿದೆ ಎನ್ನೋದಂತೂ ಸತ್ಯ.
ಈ ದ್ವೀಪದಲ್ಲಿ ಜೋತು ಬಿದ್ದಿರೋ ಗೊಂಬೆಗಳು ಅಂತಿಂತಾ ಗೊಂಬೆಗಳಲ್ಲ, ನಿರ್ಜಿವ ಗೊಂಬೆಗಳಾದ್ರೂ ರಾತ್ರಿ ಹೊತ್ತಲ್ಲಿ ನೀವೇನಾದ್ರು ಅಲ್ಲಿ ತಂಗಿದ್ದೇ ಆದಲ್ಲಿ ನಿಮ್ಮ ಖೇಲ್ ಖತಂ. ಯಾಕಂದ್ರೆ ಅವುಗಳು ಹೊರಡಿಸೋ ಶಬ್ದಗಳು ಭಯಾನಕ ಹುಟ್ಟಿಸುವಂತಿವೆ. ಹ್ಹಾ. ಇದನ್ನ ನಾವು ಕತೆ ಕಟ್ ಹೇಳ್ತಿಲ್ಲ. ಮುಂದೆ ನಿಮಗೆ ಗೊತ್ತಾಗುತ್ತೆ. ಈ ಗೊಂಬೆಗಳು ರಾತ್ರಿ ಹೊತ್ತಲ್ಲಿ ಪರಸ್ಪರ ಮಾತನಾಡ್ತವೆ. ಜೋರಾಗಿ ಕಿರುಚುತ್ವೆ, ಜತೆಗೆ ಕೆಲವೊಮ್ಮೆ ನಮ್ಮಂತೆ ಅಳುತ್ತವೆ ಕೂಡ. ಮರಗಳಲ್ಲಿ ಜೋತು ಬಿದ್ದಿರುವ ಗೊಂಬೆಗಳು ಬಂದಿದ್ದಾದ್ರೂ ಎಲ್ಲಿಂದ ಎನ್ನೋ ಡೌಟ್ ಸಾಮಾನ್ಯವಾಗಿ ಎಲ್ರಿಗೂ ಬರೋದು ಮೋಸ್ಟ್ ಕಾಮನ್. ಯಾಕಂದ್ರೆ ಮರಗಳಲ್ಲಿ ಗೊಂಬೆಗಳು ಬೆಳೆಯುವುದಿಲ್ಲವಲ್ಲ? ಹ್ಹಾ! ಈ ಮರಗಳಲ್ಲಿ ಗೊಂಬೆಗಳೇನೋ ಬೆಳೆಯೋದಿಲ್ಲ. ಆದ್ರೆ ಒರ್ವ ವ್ಯಕ್ತಿ ಇವುಗಳನ್ನ ಸುಮಾರು 50 ವರ್ಷಗಳಿಂದ ತೂಗು ಹಾಕ್ತಾ ಬಂದಿದ್ದಾನೆ. ಈ ವ್ಯಕ್ತಿಯ ಹೆಸರು ಡಾನ್ ಜುಲಿಯನ್ ಸಂತಾನಾ ಬರೇರಾ. ಮೆಕ್ಸಿಕೋ ನಿವಾಸಿಯಾದ್ರೂ ಈ ಐಲ್ಯಾಂಡ್‍ನಲ್ಲೇ ಅವನು ಪುಟ್ಟದಾದ ಮನೆಯೊಂದನ್ನ ಕಟ್ಟಿಕೊಂಡು ವಾಸವಾಗಿದ್ದ. ಅವನು ಇಲ್ಲಿದ್ದು ಈ ದ್ವೀಪವನ್ನ ನೋಡಿಕೊಳ್ತಾ ಇದ್ದ. ಆದ್ರೆ ಇವನ ಜೀವನದಲ್ಲಿ ಆದ ಒಂದು ದುರ್ಘಟನೆ ಈ ರೀತಿ ಗೊಂಬೆಗಳನ್ನ ನೇತಾಕೋಕೆ ಪ್ರೇರೇಪಿಸಿತು. ಸುಮಾರು 50-60 ವರ್ಷದವರಿಗೂ ಗೊಂಬೆಗಳನ್ನ ಮರಕ್ಕೆ ನೇತು ಹಾಕಿ ಬಂದಿದ್ದು, ಆ ಗೊಂಬೆಗಳೇ ಈಗ ನಮಗೆ ಕಾಣಿಸೋದು. ಮುಂದೊಂದು ದಿನ ಅವನು ಇದೇ ದ್ವೀಪದಲ್ಲಿ ಸತ್ತೂ ಹೋದ. ಆದ್ರೆ ಅವನು ಹೇಗೆ ಸತ್ತ ಎನ್ನೋದು ಇಂದಿಗೂ ಮಿಸ್ಟರಿಯಾಗೇ ಉಳಿದಿದೆ.
ಡಾನ್ ಜುಲಿಯನ್ ಒಮ್ಮೆ ಈ ಪುಟ್ಟ ದ್ವೀಪದಲ್ಲಿ ಓಡಾಡ್ತಾ ಇರೋವಾಗ ಅವನಿಗೆ ಒಂದು ಹುಡುಗಿ ಕಿರುಚುವ ಶಬ್ಧ ಕೇಳಿಸುತ್ತೆ. ಆ ಹುಡುಗಿ ನೀರಿನಲ್ಲಿ ಮುಳುಗ್ತಾ ಇದ್ದು, ಸಹಾಯಕ್ಕಾಗಿ ಅಂಗಾಲಾಚುತ್ತಾ ಇರ್ತಾಳೆ. ಇದನ್ನ ನೋಡಿದ ಡಾನ್ ಆಕೆಯನ್ನ ಬದುಕಿಸೋಕೆ ಸಾಕಷ್ಟು ಪ್ರಯಾಸ ಪಡ್ತಾನಂತೆ. ಆದ್ರೆ ದುರಾದೃಷ್ಟವಶಾತ್ ಆಕೆ ಅಲ್ಲೇ ಮುಳುಗಿ ಹೋಗಿ ಬಿಡ್ತಾಳೆ. ಈ ಘಟನೆ ಡಾನ್ ಮನಸ್ಸನ್ನ ಅತಿಯಾಗಿ ಕಾಡುತ್ತೆ. ಒಂದು ಪುಟ್ಟ ಬಾಲಕಿ ಸಹಾಯಕ್ಕಾಗಿ ಅಂಗಾಲಾಚಿದ್ರೂ ಕೂಡ ಅವಳನ್ನ ಬದುಕಿಸೋಕೆ ಆಗಲಿಲ್ಲವಲ್ಲ ಎನ್ನೋ ಪಾಪ ಪ್ರಜ್ಞೆಯನ್ನ ಅವನಿಗೆ ಕಾಡುತ್ತೆ. ಡಾನ್ ಜುಲಿಯನ್ ನೀರಿನಲ್ಲಿ ಮುಳುಗುತ್ತಿರೋ ಹುಡುಗಿಯನ್ನೇನೋ ನೋಡ್ದ ಆದ್ರೆ ಆಕೆ ಯಾರು ಎಲ್ಲಿಂದ ಬಂದ್ಳು, ಅವಳ ಪೋಷಕರು ಎಲ್ಲಿದ್ದಾರೆ ಎನ್ನೋ ಮಾಹಿತಿ ಇವನು ಎಷ್ಟೇ ಪ್ರಯತ್ನ ಪಟ್ರೂ ಸಿಗೋದಿಲ್ಲ. ಆದ್ರೆ ನಿಮಗೊಂದು ಆಶ್ಚರ್ಯವಾಗೋವಂತಾ ಕತೆಯನ್ನ ಹೇಳ್ತೀವಿ ಕೇಳಿ. ಮೂಲಗಳ ಪ್ರಕಾರ ಡಾನ್‍ಗೆ ಅದು ಹುಡುಗಿಯಂತೆ ಕಂಡ್ರೂ ಅದು ನಿಜವಾಗಿಯೂ ಹುಡುಗಿಯಲ್ಲ ಬದಲಾಗಿ ಅವನಿಗೆ ಕಂಡಿದ್ದು ಒಂದು ಮಾಯಾಜಾಲ ಎಂದು ಸ್ಥಳೀಯರು ಹೇಳ್ತಾರೆ. ಈ ರೀತಿ ಹೇಳೋದಕ್ಕೆ ಒಂದು ಕಾರಣವೂ ಇದೆ. ಡಾನ್ ಹುಡುಗಿಯನ್ನ ರಕ್ಷಿಸೋಕೆ ಆಗಲಿಲ್ಲವಲ್ಲ ಎನ್ನೋ ಕೊರಗಿನಲ್ಲೇ ಇರ್ತಾಇರೋವಾಗ ಇನ್ನೊಂದು ವಿಚಿತ್ರ ಘಟನೆ ಅವನ ಜೀವನದಲ್ಲಿ ನಡೆದು ಹೋಗುತ್ತೆ. ಆ ಘಟನೆಯೇ ಹುಡುಗಿ ಮುಳುಗಿದ್ದ ಜಾಗದಲ್ಲೇ ಒಂದು ಬೊಂಬೆ ಸಿಕ್ಕಿದ್ದು. ಈ ಬೊಂಬೆ ನೋಡೋಕೆ ಒಂಥರಾ ವಿಚಿತ್ರವಾಗಿದ್ದು, ಬಹುಶಃ ಆ ಹುಡುಗಿಯ ಆತ್ಮ ಇನ್ನೂ ಮುಕ್ತಿ ಹೊಂದಿಲ್ಲ ಎನ್ನೋ ಕಾರಣದಿಂದ ಅವನು ಆ ಆತ್ಮವನ್ನ ಖುಷಿಪಡಿಸೋಕೆ ಮರಕ್ಕೆ ನೇತು ಹಾಕ್ತಾನೆ. ಆದ್ರೆ ಆ ಹುಡುಗಿಯ ಆತ್ಮ ಅಷ್ಟಕ್ಕೇ ತೃಪ್ತಿ ಪಡೋದಿಲ್ಲ. ಬದಲಾಗಿ ಡಾನ್‍ಗೆ ಪದೇ ಪದೇ ಕಾಡ್ತಾನೇ ಇರುತ್ತೆ. ಜತೆಗ ಅವನಿಗೆ ಆಗಾಗ್ಗೆ ವಿಚಿತ್ರ ಬೊಂಬೆಗಳು ಸಿಗೋಕೆ ಶುರುವಾಗುತ್ತವೆ.
ಆಗ ಅವನಿಗೆ ಗೊತ್ತಾಗುತ್ತೆ ಹುಡುಗಿಯ ಆತ್ಮ ಈ ರೀತಿ ಮಾಡ್ತಾ ಇದೆ ಅನ್ನೋದು. ಈ ಆತ್ಮದಿಂದ ರಕ್ಷಿಸಿಕೊಳ್ಳೋಕೆ ಡಾನ್ ಪದೇ ಪದೇ ಒಂದೊಂದು ಗೊಂಬೆಯನ್ನ ಅಲ್ಲಲ್ಲಿ ಕಟ್ಟು ಹಾಕೋಕೆ ಪ್ರಾರಂಭಿಸ್ತಾನೆ. ಅನೇಕ ವರ್ಷಗಳವರೆಗೆ ಡಾನ್ ಇದೇ ರೀತಿ ಮಾಡ್ತಾನೇ ಹೋಗ್ತಾನೆ. ಇಷ್ಟಾದ್ರು ಅವನಿಗೆ ಆ ಆತ್ಮಕ್ಕೆ ತೃಪ್ತಿ ಪಡಿಸೋಕೆ ಸಾಧ್ಯವಾಗೋದಿಲ್ಲ. ಒಂದು ದುರಾದೃಷ್ಟದ ಸಂಗತಿ ನೋಡಿ. ಮುಂದೊಂದು ದಿನ ಆ ಹುಡುಗಿ ಮೃತಪಟ್ಟ ಸ್ಥಳದಲ್ಲೇ ಇವನೂ ಕೂಡ ಸತ್ತು ಹೋಗ್ತಾನೆ. ಆದ್ರೆ ಅವನು ಹೇಗೆ ಸತ್ತ ಅನ್ನೋದು ಇಲ್ಲಿಯವರೆಗೆ ಮಿಸ್ಟ್ರಿಯಾಗೇ ಉಳಿದು ಹೋಗಿದೆ. ಹಾಗೆನೇ ಅವನು ನೇತು ಹಾಕಿದ ಸಾವಿರಾರು ಬೊಂಬೆಗಳು ಈಗಲೂ ಅಲ್ಲೇ ಇವೆ. ಕೆಲ ಬೊಂಬೆಗಳಂತೂ ನೋಡೋದಕ್ಕೆ ಸಿಕ್ಕಾಪಟ್ಟೆ ವಿಕಾರವಾಗಿವೆ. ಜತೆಗೆ ಭಯವನ್ನ ಕೂಡ ಹುಟ್ಟಿಸುತ್ತವೆ. ಡಾನ್ ಅಚಾನಕ್ಕೆ ಮೃತಪಟ್ಟಿರೋ ಸುದ್ದಿ ಕೇಳಿದ ಅವನ ಅಳಿಯ ಅನಾಸ್ತಾಸಿಯೋ ವೆಲಾಜಾಕ್ ಅಲ್ಲಿಗೆ ಆಗಮಿಸಿದಾಗ ಅವನಿಗೊಂದು ಅಚ್ಚರಿ ಎದುರಾಗುತ್ತೆ. ಆ ಅಚ್ಚರಿಯೇ ಆ ಹುಡುಗಿ ಮೃತಪಟ್ಟ ಸ್ಥಳದಲ್ಲೇ ಡಾನ್ ಮೃತಪಟ್ಟಿರೋದು. ಇಷ್ಟೇ ಆಗಿದ್ರೆ ಅಳಿಯ ಜಾಸ್ತಿ ತಲೆ ಕೆಡಿಸಿಕೊಳ್ತಾ ಇರ್ಲಿಲ್ವೇನೋ ಆದ್ರೆ ಡಾನ್ ಮೃತಪಟ್ಟ ಸ್ಥಳದಲ್ಲಿ ಒಂದು ದೊಡ್ಡ ಮೀನು ಕಾಣಿಸಿಕೊಂಡಿರುತ್ತೆ. ಸಾಮಾನ್ಯವಾಗಿ ಅಷ್ಟೊಂದು ದೊಡ್ಡದಾದ ಮೀನು ಆ ನೀರಿನಲ್ಲಿ ಇರೋ ಉದಾಹರಣೆಗಳೇ ಇಲ್ಲ. ಹೀಗಾಗಿ ಇದೇ ಮೀನು ಬಹುಶಃ ಡಾನ್ ಅವರ ಜೀವವನ್ನ ತೆಗೆದುಕೊಂಡಿರಬಹುದು ಎನ್ನೋದು ಅಳಿಯನ ನಂಬಿಕೆ. ಈ ಘಟನೆ ನಡೆದಿದ್ದು ಸರಿಯಾಗಿ ಹುಡುಗಿ ಮೃತಪಟ್ಟು 50 ವರ್ಷಗಳ ಬಳಿಕ ಹಾಗೂ ಅದೇ ದಿನ ಎನ್ನೋದು ಇನ್ನೊಂದು ಅಚ್ಚರಿ.
ಇಲ್ಲಿಯವರೆಗೆ ನಾವು ಹೇಳೋ ಸ್ಟೋರಿ ಬರೀ ಒಂದು ಕಟ್ಟು ಕತೆಯಾಗಿರ್ಬಹುದು ಹೆಚ್ಚು ಮಂದಿ ಭಾವಿಸೋದು ಸರ್ವೇ ಸಾಮಾನ್ಯ. ಇಂತಹವರ ಪಟ್ಟಿಯಲ್ಲಿ ಗೋಸ್ಟ್ ಹಂಟರ್ಸ್ ಎಂದೇ ಖ್ಯಾತರಾಗಿರೋ ಒಂದು ಸುಪ್ರಸಿದ್ಧ ತಂಡ. ಈ ತಂಡ ವಿಶ್ವಾದಾದ್ಯಂತ ಸಂಚರಿಸಿ ದೆವ್ವ, ಭೂತ ಪ್ರೇತಗಳ ಸಂಶೋಧನೆ ನಡೆಸ್ತಾರೆ. ಈ ತಂಡ ದೆವ್ವಗಳಿಗೆ ಹೆದರೋರಲ್ಲ. ಹಲವಾರು ಬಾರಿ ಪ್ರಾಣಕ್ಕೆ ಕುತ್ತು ತರುವಂತಹ ಘಟನೆಗಳಾದ್ರೂ ದೆವ್ವಗಳ ಬಗ್ಗೆ ಇವರ ರಿಸರ್ಚ್ ನಿಂತಿಲ್ಲ. ಈ ತಂಡದಲ್ಲಿ ಸುಮಾರು 8 ಜನರಿದ್ದು, ಅದರಲ್ಲಿ ಝಾಕ್ ಬಗಾನ್ಸ್ ಎಂಬುವವರು ಲೀಡ್ ಇನ್ವೆಸ್ಟಿಗೇಟರ್. ಇವರ ಜತೆ ಆರೋನ್ ಗುಡ್‍ವಿನ್ ಎನ್ನೋ ವ್ಯಕ್ತಿ ಕೂಡ ಸಾಥ್ ನೀಡ್ತಾರೆ. ಇತರೆ ತಂಡದವರು ಸ್ವಲ್ಪ ಭಯಪಟ್ರೂ ಯಾವುದೇ ಅಳುಕಿಲ್ಲದೇ ಧೈರ್ಯವಾಗಿ ನುಗ್ಗೋ ಆಸಾಮಿ ಇವರು. ಇವರ ಬಗ್ಗೆ ಈಗ ನಾವ್ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ಈ ರಿಸರ್ಚ್ ತಂಡ ನಾವು ಹೇಳ್ತಾ ಇದ್ದ ಡಾಲ್ಸ್ ಐಲ್ಯಾಂಡ್‍ಗೆ ತೆರಳಿತ್ತು. ಇಲ್ಲಿಗೆ ತೆರಳೋಕೂ ಮುಂಚೆ ಅವರು ಸಿಕ್ಕಾಪಟ್ಟೆ ಪೂರ್ವ ಸಿದ್ಧತೆಗಳನ್ನ ಮಾಡಿಕೊಂಡಿದ್ರು. ಈ ಸ್ಥಳದ ಬಗ್ಗೆ ಸಾಕಷ್ಟು ಸಂಶೋಧನೆಯನ್ನ ನಡೆಸಿಯೇ ಅವರು ತನಿಖೆಯನ್ನ ಕೈಗೊಂಡಿದ್ರು. ಘಟನಾ ಸ್ಥಳಕ್ಕೆ ಹೋದಾಗ ಅವರು ಸಾಕಷ್ಟು ಸ್ಥಳೀಯರ ಅಭಿಪ್ರಾಯವನ್ನ ಪಡೆದಿದ್ರು. ಸ್ಥಳಿಯರು ಹೇಳೋ ಕತೆಯನ್ನ ಕೇಳಿ ಅದರ ನಿಜ ಸಂಗತಿಯನ್ನ ಬಯಲು ಮಾಡೋಕೆ ಹೊರಟ್ರು. ಅವರಿಗೆ ಹಿಂದೆಂದೂ ಆಗದ ವಿಚಿತ್ರ ಘಟನೆಗಳು ಅವರಿಗಾದ್ವು.
ಘಟನಾ ಸ್ಥಳಕ್ಕೆ ಡಾನ್ ಅಳಿಯ ಅನಾಸ್ತಾಸಿಯೋ ವೆಲಾಜಾಕ್ ಕರೆದುಕೊಂಡು ಹೋಗಿ ಸಂಪೂರ್ಣ ಕತೆಯನ್ನ ಈ ತಂಡದವರಿಗೆ ಹೇಳಿದ್ರು. ಜತೆಗೆ ಬೊಂಬೆಗಳ ಪರಿಚಯ, ಇವರಿಗಾದ ಅನುಭವವನ್ನೂ ಹೇಳಿದ್ರು. ಸುತ್ತಮುತ್ತಲೂ ಮೊದಲ ಕಣ್ಣು ಹಾಯಿಸಿದ ಈ ತಂಡ ಹೆಚ್ಚಿನ ಮಾಹಿತಿಗಾಗಿ ಮೆಕ್ಸಿಕೋಗೆ ವಾಪಸ್ಸಾಯ್ತು. ಇಲ್ಲಿಗೆ ಇವರದ್ದೇ ತಂಡದವರೊಬ್ಬ ವ್ಯಕ್ತಿ ವೇಟ್ ಮಾಡ್ತಾ ಇದ್ರು. ಈ ವ್ಯಕ್ತಿ ಇವರಿಗೆ ಒಂದು ವಿಚಿತ್ರ ಬೊಂಬೆಯ ಪರಿಚಯ ನೀಡ್ತಾರೆ.
ಅವರ ತಂಡದ ವ್ಯಕ್ತಿ ನೀಡಿದ ಬೊಂಬೆ ಅಂತಿಂತಹದಲ್ಲ. ಬದಲಾಗಿ ವಿಶ್ವದಲ್ಲೇ ಮೋಸ್ಟ್ ಹಾಂಟೆಡ್ ಡಾಲ್ ಎನ್ನೋ ಕುಖ್ಯಾತಿ ಪಡೆದ ಗೊಂಬೆಯಿದು. ಯೆಸ್! ಆ ಬೊಂಬೆಯ ಇಲ್ಲಿಯವರೆಗೆ ಸುಮಾರು 100ಕ್ಕೂ ಹೆಚ್ಚು ಜನರನ್ನ ಬಲಿಪಡೆದಿದೆ. ನೋಡೋಕೆ ಸಾಧಾರಣ ಬೊಂಬೆಯಂತಿದ್ರೂ ಇದರ ಸುತ್ತಾ ಸಾಕಷ್ಟು ಕತೆಗಳು ಹುಟ್ಟಿಕೊಂಡಿದೆ. ಈ ಬೊಂಬೆ ಆಗಾಗ್ಗೆ ವಿಚಿತ್ರ ಅಳೋ ಶಭ್ದ, ಕಿರುಚಾಡೋ ಶಬ್ದ ಮಾಡುತ್ತಿತ್ತಂತೆ. ಇದು ಎಲ್ಲಿಂದ ಬಂತು ಅನ್ನೋದು ಗೊತ್ತಿಲ್ಲ. ಆದ್ರೆ ಇದನ್ನ ಮನೆಯಲ್ಲಿ ಇಟ್ಟುಕೊಂಡವರೆಲ್ಲಾ ಜೀವಂತವಾಗಿ ಉಳಿದಿಲ್ಲ. ಈ ಬೊಂಬೆಯನ್ನ ಸುಟ್ಟು ಹಾಕೋಕೆ ಪ್ರಯತ್ನ ಪಟ್ರೂ ಸಾಧ್ಯವಾಗಿಲ್ಲ. ಈ ಬೊಂಬೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಒಬ್ಬ ನುರಿತ ಸೈಕಿಕ್‍ಳ ಬಗ್ಗೆ ಮಾಹಿತಿಯನ್ನೂ ಈ ರಿಸರ್ಚ್ ಟೀಂ ಪಡೆದಿರುತ್ತೆ. ಆತ್ಮಗಳು ಸುತ್ತಾಮುತ್ತಾ ಇದ್ದಾಗ ಜನರಿಗಾಗೋ ಅನುಭವವೇನು ಎಂಬ ಮಾಹಿತಿಯನ್ನೂ ಈ ಟೀಂಗೆ ಅವಳು ನೀಡ್ತಾಳೆ
ಈ ರಿಸರ್ಚ್ ಟೀಂ ಈ ಗೊಂಬೆಯನ್ನ ಡಾಲ್ಸ್ ಐಲ್ಯಾಂಡ್‍ಗೆ ಕೊಂಡೊಯ್ದು ಅಲ್ಲಿನ ಸ್ಥಿತಿಗತಿಗಳ ಅಧ್ಯಯನ ನಡೆಸೋಕೆ ಪ್ಲಾನ್ ಮಾಡುತ್ತೆ. ಅಂತೆಯೇ ಈ ಗೊಂಬೆಯನ್ನ ಒಂದು ಬಾಕ್ಸ್ ಅಲ್ಲಿಟ್ಟು ಅಲ್ಲಿಗೆ ಕೊಂಡೊಯ್ತಾರೆ. ಮಾರ್ಗ ಮಧ್ಯದಲ್ಲಿ ಅಲ್ಲಿಗೆ ಕರೆದುಕೊಂಡ ದೋಣಿಯ ಅಂಬಿಗನಿಗಾದ ಅನುಭವವನ್ನೂ ಪಡೀತಾರೆ. ಅವನೂ ಕೂಡ ಈ ಸ್ಥಳ ಸಿಕ್ಕಾಪಟ್ಟೆ ಹಾಂಟೆಡ್ ಆಗಿದೆ ಎನ್ನೋ ಮಾಹಿತಿಯನ್ನ ನೀಡೋದಲ್ದೇ ಕೊಂಚ ಹುಷಾರಾಗಿರಿ ಎನ್ನೋ ವಾರ್ನಿಂಗ್ ಕೂಡ ನೀಡ್ತಾನೆ. ನಾವಾಗ್ಲೇ ಹೇಳಿದ ಹಾಗೆ ಈ ಟೀಂ ಸಿಕ್ಕಾಪಟ್ಟೆ ಮಾಹಿತಿಗಳನ್ನ ಕಲೆಹಾಕಿರುತ್ತೆ. ಅಂತೆಯೇ ಅಲ್ಲಿ ಮೃತಪಟ್ಟ ಡಾನ್‍ನ ಕ್ಲೋಸ್ ಫ್ರೆಂಡ್‍ನನ್ನೂ ಕರೆದುಕೊಂಡು ಹೋಗಿರ್ತಾರೆ.
ಡಾಲ್ಸ್ ಐಲ್ಯಾಂಡ್‍ಗೆ ರಿಸರ್ಚ್ ಟೀಂ ಎರಡನೇ ಬಾರಿ ಭೇಟಿ ನೀಡಿದಾಗ ಆ ಸ್ಥಳದಲ್ಲಿ ಮೃತಪಟ್ಟ ಡಾನ್ ಅವರ ಅಚ್ಚು ಮೆಚ್ಚಿನ ಬೊಂಬೆಯ ಬಗ್ಗೆ ಮಾಹಿತಿಯನ್ನೂ ಇವನ ಸ್ನೇಹಿತನಿಂದ ಮಾಹಿತಿ ಪಡೀತಾರೆ. ಈ ಗೊಂಬೆಯ ಹೆಸರು ಆಗಸ್ಟಿನಿಟಾ ಅಂತೆ. ಜತೆಗೆ ಸಿಕ್ಕಾಪಟ್ಟೆ ಪವರ್‍ಫುಲ್ ಅಂತೆ. ಡಾನ್‍ನ ಸಮಾಧಿಯಿದ್ದ ಸ್ಥಳದಲ್ಲೇ ಇದನ್ನ ಇಡಲಾಗಿದೆ. ಈ ಗೊಂಬೆಯಲ್ಲಿ ಡಾನ್‍ನ ಆತ್ಮ ಇನ್ನೂ ಇದೆ ಎನ್ನೋದನ್ನ ಟೀಂ ಖಚಿತಪಡಿಸಿದೆ. ಅದಕ್ಕೆ ಅವರಿಗಾದ ವಿಚಿತ್ರ ಅನುಭವಗಳು.
ಹೌದು. ಯಾವ ಬೊಂಬೆ ಮಾತಾಡುತ್ತೆ ಎನ್ನೋ ಬೊಂಬೆಗಳ ರಾಶಿಯನ್ನ ಇವರು ಹುಡುಕ್ತಾ ಇರ್ತಾರೆ. ಆಗ ಒಂದು ವಿಚಿತ್ರ ಅನುಭವವಾಗುತ್ತೆ. ಮೊದಲಿಗೆ ಒಂದು ಬೇಬಿ ಜೋರಾಗಿ ನಗೋದಲ್ದೇ ಆನಂತರ ಅಳೋ ಶಬ್ದ ಕೇಳುತ್ತೆ. ಇದರಿಂದ ಅವರು ಕೊಂಚ ನಲುಗಿ ಹೋಗ್ತಾರೆ. ಆನಂತರ ಇವರು ಡಾನ್‍ನ ಸ್ನೇಹಿತ ನೆರವಿನಿಂದ ಸಮಾಧಿಯ ಸ್ಥಳಕ್ಕೆ ತೆರಳಿ ಆ ಆತ್ಮವನ್ನ ಕರೆಯೋಕೆ ಪ್ರಯತ್ನ ಪಡ್ತಾರೆ. ಜತೆಗೆ ಕೆಲ ಇನ್ಫ್ರಾರೆಡ್ ಕ್ಯಾಮೆರಾ ಕೂಡ ಆ ಸ್ಥಳದಲ್ಲಿಟ್ಟಿರ್ತಾರೆ.
ಇದಾದ ನಂತ್ರ ಈ ತಂಡ ಆಚೆ ಬಂದು ಒಂದು ಹೂವಿನ ಬೊಕೇ ಅವನ ಸಮಾಧಿ ಮುಂದಿಟ್ಟು ಬರ್ತಾರೆ. ಆದ್ರೆ ಇನ್ನೂ ಅಲ್ಲಿರೋ ನೈಟ್ ವಿಷನ್ ಕ್ಯಾಮೆರಾ ತೆಗ್ದಿರಲ್ಲ ಡಾನ್‍ಗೆ ಒಂದು ವಿಶೇಷ ಬಿಯರ್ ಇಷ್ಟವಿದ್ದು ಅದನ್ನ ಸಮಾಧಿಯ ಮುಂದೆ ಅವನ ಪ್ರಾಣ ಸ್ನೇಹಿತ ಇಟ್ಟು ಡಾನ್‍ನ್ನ ಕರೆಯೋಕೆ ಪ್ರಯತ್ನಿಸುತ್ತಾನೆ. ಆಗೊಂದು ಒಬ್ಬ ವ್ಯಕ್ತಿ ಮಾತಾಡಿದ ಶಬ್ದ ಕೇಳಿಸುತ್ತೆ. ಜತೆಗೆ ಅವನು ಓಡಾಡಿದ ಶಬ್ದ ಕೂಡ ಕೇಳಿಸುತ್ತೆ. ಇದೆಲ್ಲಾ ಹೈ ಡೆಫಿನೇಷನ್ ಲೇಸರ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದ ಬಳಿಕ ಆ ಟೀಮ್ ನಾಲ್ಕು ಸ್ಪೆಕ್ಟ್ರಮ್ ಕ್ಯಾಮೆರಾ ಇಟ್ಕೊಂಡು ಮತ್ತೆ ಮನೆಯೊಳಗಡೆ ಹೋಗಿ ಗೊಂಬೆಗಳ ಮಧ್ಯೆ ಆ ವಿಶ್ವದ ಮೋಸ್ಟ್ ಹಾಂಟೆಡ್ ಡಾಲ್ ಕೂಡ ಆ ಸ್ಥಳದಲ್ಲಿಡ್ತಾರೆ. ಆಗ ತಂಡದ ಮುಖ್ಯಸ್ಥನಿಗೆ ಹಿಂದಿನಿಂದ ಯಾರೊ ಹೊಡೆದ ಅನುಭವವಾಗುತ್ತೆ. ಜತೆಗೆ ಸಿಕ್ಕಾಪಟ್ಟೆ ತಣ್ಣನೆಯ ಸ್ಪರ್ಷ ಕೂಡ ಅವರಿಗಾಗುತ್ತೆ. ಈ ಎಲ್ಲಾ ಕ್ಲೂಗಳನ್ನ ಗಮನಿಸಿದ್ರೆ ಹಿಂದೆ ಬೇಟಿಯಾಗಿದ್ದ ಆ ಮಹಿಳೆ ಹೇಳಿದ್ದೇ ಅನುಭವವಾಗುತ್ತೆ. ಜತೆಗೆ ಒಂದು ಗೊಂಬೆ ಮುಖ್ಯಸ್ಥನಿಗೆ ಇಂಗ್ಲಿಷ್‍ನಲ್ಲೇ ಐ ಡೋನ್ಟ್ ಲೈಕ್ ಹರ್ ಸ್ಟೂಪಿಡ್ ಎನ್ನೋ ಶಬ್ದ ಕೂಡ ಕೇಳಿಸುತ್ತೆ. ಬೇಸಿಕಲ್ಲೇ ಅಲ್ಲಿರೋ ಗೊಂಬೆಗೆ ಹೊರಗಿನಿಂದ ತಂದ ಗೊಂಬೆ ಇಷ್ಟವಾಗಲ್ಲ. ಸಿಕ್ಕಾಪಟ್ಟ ಕೋಪಗೊಂಡಿದ್ದ ಒಂದು ಆತ್ಮ ಇವರನ್ನ ಮನೆ ಬಿಟ್ಟು ತೊಲಗುವಂತೆ ಆದೇಶ ನೀಡೋದಲ್ದೇ ಮೈಮೇಲೆ ಕೆಲ ತರಚಿದ ಗಾಯಗಳನ್ನೂ ಮಾಡುತ್ತೆ.
ಅಪಾಯದ ಮುನ್ಸೂಚನೆಯನ್ನ ಅರಿತ ರಿಸರ್ಚ್ ಟೀಮ್ ವಾಪಾಸ್ಸಾಗೋಕೆ ರೆಡಿಯಾಗುತ್ತೆ. ಜತೆಗೆ ಡಾನ್‍ನ ಸ್ನೇಹಿತನಿಗಾದ ಅನುಭವವನ್ನೂ ಪಡೆಯುತ್ತೆ. ಡಾನ್ ತಮಗೆ ಹಲವಾರು ಬಾರಿ ಮಾತಾನಾಡೋಕೆ ಪ್ರಯತ್ನಿಸಿತು ಎನ್ನೋ ನಿಜಾಂಶವನ್ನ ಅವನು ಹೇಳ್ತಾನೆ. ಡಾನ್‍ಗೆ ಬಿಯರ್ ನೀಡಿ ಚಿಯರ್ ಅಪ್ ಮಾಡೋವಾಗ ಒಂದು ವಿಶೇಷ ಶಕ್ತಿಯ ಅನುಭವವಾಗಿದ್ದನ್ನ ಅವನ ಸ್ನೇಹಿತ ತೋಡಿಕೊಂಡಿದ್ದಾನೆ. ಕೊನೆಗೆ ತಂಡ ವಿಚಿತ್ರ ಅನುಭವವೊಂದಿಗೆ ವಾಪಸ್ಸಾಗಿದೆ. ಒಟ್‍ನಲ್ಲಿ ಈ ಸ್ಥಳ ಒಂದು ಹಾಂಟೆಡ್ ಎನ್ನೋದು ಖಚಿತವಾಗಿದೆ.

  • ವಿಶ್ವನಾಥ್ ಶೇರಿಕಾರ್.

Like us on Facebook  The New India Times

POPULAR  STORIES :

ಚಿನ್ನದ ಮೇಲೂ ಐಟಿ ಕಣ್ಣು..!

ಜಿಯೋ ಸಿಮ್ ಗ್ರಾಹಕರಿಗೆ ಬಂಪರ್ ಆಫರ್.!

ಬಾಂಗ್ಲಾ ಕ್ರಿಕೆಟಿಗರು ಮಾಡಿದ ತಪ್ಪಿಗೆ ಸಿಕ್ತು ದೊಡ್ಡ ಶಿಕ್ಷೆ..!

ಒಬಿಸಿ ಪಟ್ಟಿಗೆ 15 ಹೊಸ ಜಾತಿ ಸೇರ್ಪಡೆ..!

ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!

ಯಶ್-ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವಿಡಿಯೋ ರಿಲೀಸ್.!

ಚಿನ್ನದ ಬೆಲೆ ದಿಢೀರ್ ಕುಸಿತ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...