ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿಮಾನಿಗಳು ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ ವಿದೇಶಗಳನಲ್ಲೂ ಅವರ ಅಭಿಮಾನಿಗಳಿದ್ದಾರೆ. ಅಷ್ಟೆ ಅಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫಾಲೋವರ್ಸ್‍ಗಳ ಸಂಖ್ಯೆ ಹೆಚ್ಚು. ಅದೇ ರೀತಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೂ ಕೂಡ. ಆದ್ರೆ ಇವರೆಲ್ಲರನ್ನೂ ಮೀರಿಸಿದ ಆ ವ್ಯಕ್ತಿ ಯಾರು ಗೊತ್ತಾ..? ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..? ಅವರ್ಯಾರೂ ಅಲ್ಲ ಬಾಲಿವುಡ್‍ನ ಮಾದಕ ತಾರೆ ಸನ್ನಿ ಲಿಯೋನ್..!
ಹೌದು ವೆಬ್ ಹುಡುಕಾಟದಲ್ಲಿ ನಟಿ ಸನ್ನಿ ಅವರ ಹೆಸರನ್ನು ಅತೀ ಹೆಚ್ಚು ಬಾರಿ ಸರ್ಚ್ ಮಾಡುತ್ತಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ..! ಈ ಮೂಲಕ ಸತತ ಐದನೇ ವರ್ಷವೂ ನಂ.1 ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ ಎಂದು ಯಾಹೂ..! ಇಂಡಿಯಾ ಬಹಿರಂಗಪಡಿಸಿದೆ. ಇವರ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಇದ್ದರೆ ಐದನೇ ಸ್ಥಾನದಲ್ಲಿ ಯಾವ ಸ್ಟಾರ್ ನಟರ ಹೆಸರೂ ಇಲ್ಲ. ಬದಲಾಗಿ ಕಪಿಲ್ ಶರ್ಮಾ ಅವರಿದ್ದಾರೆ. ಆನಂತರದಲ್ಲಿ ಅಮಿತಾಬ್, ಶಾರೂಖ್ ಖಾನ್, ಅಮೀರ್ ಖಾನ್ ಅವರ ಹೆಸರನ್ನು ಜಾಲತಾಣಗಳು ಹೆಚ್ಚು ಸರ್ಚ್ ಮಾಡುತ್ತಾರೆ ಎಂದು ತಿಳಿದು ಬಂದಿದೆ.
ಇನ್ನು ಸನ್ನಿ ಲಿಯೋನ್ ಹೊರತು ಪಡಿಸಿದರೆ ಬಿಪಾಶಾ ಬಸು, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಪ್ರಿಯಾಂಕಾ ಛೋಪ್ರಾ, ಪ್ರತ್ಯುಷಾ ಬ್ಯಾನರ್ಜಿ, ಕರೀನಾ ಕಪೂರ್, ರಾಧಿಕಾ ಆಪ್ಟೆ, ಐಶ್ವರ್ಯ ರೈ ಹಾಗೂ ಅನುಷ್ಕಾ ಶರ್ಮಾ ಅವರ ಹೆಸರು ಕೂಡ ಇದೆ.
ಇದಲ್ಲದೇ ಪುರುಷ ಸ್ಟಾರ್ ನಟರಲ್ಲಿ ನಟ ಸಲ್ಮಾನ್ ಖಾನ್ ಅವರ ಹೆಸರು ನಂ.1 ಸ್ಥಾನದಲ್ಲಿದ್ದರೆ ದಿ ಕಪಿಲ್ ಶರ್ಮಾ ಷೋ ನಿರೂಪಕ ಕಪಿಲ್ ಶರ್ಮಾ ಎರಡನೇ ಸ್ಥಾನದಲ್ಲಿ ಮಿಂಚಿದ್ದರೆ. ಇವರನ್ನೊರತುಪಡಿಸಿದಂತೆ ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವ್ ಗನ್, ತನ್ಮಯ್ ಭಟ್, ಶಾಹಿದ್ ಕಪೂರ್, ರಣ್ವೀರ್ ಸಿಂಗ್ ನಂತರ ಸ್ಥಾನದಲ್ಲಿದ್ದಾರೆ.
Like us on Facebook The New India Times
POPULAR STORIES :
ರಸ್ತೆ ಮೇಲೆ 2 ಸಾವಿರದ ಹೊಸ ನೋಟು ಬಿದ್ದಿದ್ರೆ ನೀವೇನ್ ಮಾಡ್ತಿರಾ..?
ಜಿಯೋ ಸಿಮ್ ಗ್ರಾಹಕರಿಗೆ ಬಂಪರ್ ಆಫರ್.!