ಕೇರಳದ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೆ ಪ್ರವೇಶ ಇಲ್ಲದೇ ಇರೋದು ಸದ್ಯದ ಚರ್ಚಾ ವಿಷಯವಾಗಿದೆ.
ಆದರೆ, ಕೇವಲ ಶಬರಿಮಲೆ ಮಾತ್ರವಲ್ಲ ಈ ಪರ್ವತಕ್ಕೂ ಮಹಿಳೆಯರಿಗೆ ಪ್ರವೇಶ ಇಲ್ವಂತೆ.
ಗ್ರೀಕ್ ನಲ್ಲಿರುವ ಪವಿತ್ರ ಮೌಂಟ್ ಆ್ಯಥೋಸ್‌ನಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಮೌಂಟ್ ಆ್ಯಥೋಸ್ ಕ್ರಿಶ್ಚಿಯನ್ನರ ಪವಿತ್ರ ಪರ್ವತವಾಗಿದ್ದು, ಇಲ್ಲಿ ಕ್ರಿಶ್ಚಿಯನ್ ಸಂತರು ನೆಲೆಸಿದ್ದಾರೆ. ಮೌಂಟ್ ಆ್ಯಥೋಸ್‌ಗೆ ಕೇವಲ ಮಹಿಳೆಯರಷ್ಟೇ ಅಲ್ಲ ಹೆಣ್ಣು ಪ್ರಾಣಿಗಳಿಗೂ ಇಲ್ಲಿ ಪ್ರವೇಶ ನಿರಾಕರಿಸಲಾಗಿದೆಯಂತೆ.