14 ವರ್ಷದ ಬಾಲಕನೊಬ್ಬ ಟಿವಿ ನೋಡುವ ನೆಪದಲ್ಲಿ ಹೋಗಿ 4ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಇಲ್ಲಿನ ಜಲ್ವಾ ಗ್ರಾಮದಲ್ಲಿ ಸಂಜೆ ಬಾಲಕಿಯೊಬ್ಬಳೇ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ, ತಾನೂ ಸಹ ಅವರ ಮನೆಗೆ ಟಿವಿ ನೋಡುವ ನೆಪ ಹೇಳಿಕೊಂಡು ಹೋದ ಬಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಪೋಷಕರು ಮನೆಗೆ ವಾಪಾಸ್ಸಾದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ಅವರು ಘಾಟಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಎಸ್ ಐ ಮನೋಹರ್ ಲಾಲ್ ತಿಳಿಸಿದ್ದಾರೆ.






