ರೋಹಿತ್ ಗೆ ಧೋನಿ‌ ನೀಡಿದ ಸಲಹೆಗೆ ಸಿಕ್ಕ ಫಲ ಏನ್ ಗೊತ್ತಾ? ಕ್ಯಾಪ್ಟನ್ ಗಳ ಕ್ಯಾಪ್ಟನ್ ಧೋನಿ ಅಂತ ಮತ್ತೊಮ್ಮೆ ಪ್ರೂವ್ ಆಯ್ತು!

Date:

ಟೀಂ‌ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ ಆಗಿರಲಿ ಅಥವಾ ಅವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅಥವಾ ಇನ್ಯಾರೇ ಟೀಂನ‌ ನೇತೃತ್ವವಹಿಸಿರಲಿ ಧೋನಿ ಒಬ್ಬರಿದ್ರೆ ಸಾಕು, ನಾಯಕನಿಗೆ ಧೈರ್ಯ ಇರುತ್ತೆ! ಧೋನಿ ನಾಯಕಗೇ ನಾಯಕ ಅನ್ನೋದು‌ ಮತ್ತೊಮ್ಮೆ ಸಾಬೀತಾಗಿದೆ. ‌
ಯಸ್,‌ ಮಹೇಂದ್ರ ಸಿಂಗ್ ಧೋನಿಯಂತೆ ಕೂಡಲೇ ನಿರ್ಧಾರ ತೆಗೆದುಕೊಳ್ಳೋರು ಯಾರು ಇಲ್ಲ. ಆನ್ ಫೀಲ್ಡ್ ನಲ್ಲಿ ಕೂಲ್ ಕ್ಯಾಪ್ಟನ್ ಧೋನಿ ತೆಗೆದುಕೊಳ್ಳೋ ದಿಢೀರ್ ನಿರ್ಧಾರ ಪಂದ್ಯದ ಗತಿಯನ್ನೇ ಬದಲಾಯಿಸಿ ಬಿಡುತ್ತೆ. ಇದಕ್ಕೆ ನಿನ್ನೆ ಬಾಂಗ್ಲಾ ವಿರುದ್ಧ ನಡೆದ ಪಂದ್ಯ ಮತ್ತೊಂದು ಉದಾಹರಣೆ ಅಷ್ಟೇ!

ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್ ನಲ್ಲಿ ನಿನ್ನೆ ಭಾರತ -ಬಾಂಗ್ಲಾ ದೇಶದ ನಡುವೆ ಸೂಪರ್ ಫೋರ್ ಹಂತದ ಪಂದ್ಯ ನಡೆಯಿತು.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಬಾಂಗ್ಲಾ ಪ್ರಬಲ ಭಾರತದ ವಿರುದ್ಧ ಬ್ಯಾಟಿಂಗ್ ನಡೆಸಲು ಶುರುಮಾಡಿತು.

ಅದು 10ನೇ ಓವರ್. ಹಾರ್ದಿಕ್ ಪಾಂಡ್ಯ ಬದಲು ಆಡುವ 11ರಲ್ಲಿ ಸ್ಥಾನಪಡೆದ ರವೀಂದ್ರ ಜಡೇಜಾ ಬೌಲಿಂಗ್ ಮಾಡುತ್ತಿದ್ದರು.‌ ಅತ್ತ ಬಾಂಗ್ಲಾದ ಶಕೀಬ್ ಅಲ್ ಅಸನ್ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಿದ್ದರು. ಅವರ ವಿಕೆಟ್ ಪಡೆಯುವುದು ಅನಿವಾರ್ಯವಾಗಿತ್ತು. ರೋಹಿತ್ ಶರ್ಮಾ ಅಟ್ಯಾಕಿಂಗ್ ಫೀಲ್ಡಿಂಗ್ ಸೆಟ್ ಮಾಡಿದ್ದರೂ ಕೂಡ ಅದು ಫಲ ಕೊಟ್ಟಿರಲಿಲ್ಲ.‌
ಶಕೀಬ್ ಆರ್ಭಟಿಸುವ ಸೂಚನೆ ಸಿಕ್ಕಂತೆ ಮಾಜಿ ಕ್ಯಾಪ್ಟನ್ , ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಫೀಲ್ಡಿಂಗ್‌ನಲ್ಲಿ ಬದಲಾವಣೆ ಮಾಡುವಂತೆ ಕ್ಯಾಪ್ಟನ್ ಶರ್ಮಾಗೆ ಸಲಹೆ ನೀಡಿದರು.


ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ ಮನ್ ಶಕೀಬ್ ಹೆಚ್ಚು ಬಾಲ್ ಗಳನ್ನು ಆನ್ ಸೈಡ್ ಗೆ ಅಟ್ಟುತ್ತಾರೆ ಅನ್ನೋದನ್ನು ತಿಳಿದ ಧೋನಿ, ರೋಹಿತ್ ಬಳಿ ಹೋಗಿ ಸ್ಲಿಪ್ ನಲ್ಲಿದ್ದ ಶಿಖರ್ ಧವನ್ ಅವರನ್ನು ಸ್ಕೇರ್ ಲೆಗ್ ಗೆ ಹಾಕುವಂತೆ ಹೇಳಿದರು. ಧೋನಿ ಹೇಳಿದಂತೆ ರೋಹಿತ್ ಕ್ಷೇತ್ರ ರಕ್ಷಣೆಯಲ್ಲಿ ಬದಲಾವಣೆ ಮಾಡಿದರು.‌ ನಂತರ ಶಕೀಬ್ ಶಿಖರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಬಾಂಗ್ಲಾ 49.1 ಓವರ್ ಗಳಲ್ಲಿ‌173 ರನ್ ಗಳಿಸಿತು. ಭಾರತ 36.2ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ತಲುಪಿತು. ಭಾರತದ ಪರ ರವೀಂದ್ರ ಜಡೇಜಾ 4, ಭುವನೇಶ್ವರ್ ಕುಮಾರ್ ಮತ್ತು ಜಸ್ ಪ್ರೀತ್ ಬೂಮ್ರಾ ತಲಾ‌3 ವಿಕೆಟ್ ಪಡೆದರು. ಬ್ಯಾಟಿಂಗ್ ನಲ್ಲಿ ನಾಯಕ ರೋಹಿತ್ ಶರ್ಮಾ ಅಜೇಯ 83, ಶಿಖರ್ ಧವನ್ 40, ಅಂಬಟಿ ರಾಯುಡು 13, ಧೋನಿ 33, ದಿನೇಶ್ ಕಾರ್ತಿಕ್ ಅಜೇಯ 1 ರನ್ ಗಳಿಸಿದರು.

Share post:

Subscribe

spot_imgspot_img

Popular

More like this
Related

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...