ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!

Date:

ಪ್ರತಿಯೊಬ್ಬನೂ ಒಂದಲ್ಲ ಒಂದು ದಿನ ತಾನೊಬ್ಬ ಬಿಲಿಯನರ್ ಆಗ್ಬೇಕು,ಕೈ ತುಂಬಾ ದುಡ್ಡು ಸಂಪಾದನೆ ಮಾಡ್ಬೇಕು ಅಂತೆಲ್ಲಾ ಕನಸು ಕಾಣ್ತಾನೆ ಅಲ್ಲವೇ?ಆದ್ರೆ ನಾವಿಲ್ಲಿ ಕನಸು ಕಾಣುತ್ತಾ ಕೂತಿರೋವಾಗ ಈ ಮುಂಬಯಿ ಬ್ರದರ್ಸ್ ಆ ನಮ್ಮ ಕನಸನ್ನು ತಮ್ಮದಾಗಿಸಿಕೊಂಡು ಬಿಟ್ರು ನೋಡಿ! ಅವರ ಜೀವನದಲ್ಲಿ ಅದೃಷ್ಟ ಒಲಿದು ಬಂದದ್ದು ಹೇಗೆ ಎಂದು ನೋಡೋಣವೇನು??
ದಿವ್ಯಾಂಕ ತುರಾಕಿಯ ಹಾಗೂ ಭಾವಿನ್ ತುರಾಕಿಯ ಎಂಬ ಸಹೋದರರಿಬ್ಬರು ತಮ್ಮ ಮೀಡಿಯಾ ನೆಟ್ ಎಂಬ ಟೆಕ್ ಸ್ಟಾರ್ಟ್ ಅಪ್ ನ ಒಂದು ಚೈನಾ ಮೂಲದ ಮೀಡಿಯಾ ಹಾಗೂ ಟೆಲಿಕಾಂ ಕಂಪನಿಯಾದ ಬೀಜಿಂಗ್ ಮೈಟೆನೋ ಕಮ್ಯೂನಿಕೇಷನ್ ಟೆಕ್ನಾಲಜಿ ಎಂಬ ಕಂಪನಿಗೆ ಭಾರೀ ಮೊತ್ತಕ್ಕೆ ಮಾರಿ ಬಿಟ್ಟಿದ್ದಾರೆ,ಎಷ್ಟೆಂದು ಅಂದಾಜಿಸಬಲ್ಲಿರಾ?$ 900 ಬಿಲಿಯನ್ ಅರ್ಥಾತ್ ಸುಮಾರು 6,000 ಕೋಟಿ ರೂಪಾಯಿಗಳು.ದಂಗಾಗಿ ಬಿಟ್ರೇನು?
ಮೀಡಿಯಾ ನೆಟ್ ನ ಈ ಡೀಲ್ ನ ಒಂದು ಭಾರೀ ಮೊತ್ತದ ಡೀಲ್ ಎಂದು ಈ ಟೆಕ್ ಕ್ಷೇತ್ರದಲ್ಲಿ ಪರಿಗಣಿಸಲಾಗಿದೆ.ಭಾವಿನ್ ಹಾಗೂ ದಿವ್ಯಾಂಕ್ ಅವರು ತಮ್ಮ ಸ್ಟಾರ್ಟ್ ಅಪ್ ನ ತುಂಬಾ ಜಾಗರೂಕತೆಯಿಂದ ವ್ಯವಸ್ಥಿತವಾಗಿ ಕಾಪಾಡಿಕೊಂಡಿದ್ದಲ್ಲದೆ ಅದನ್ನು ಯಶಸ್ಸಿನ ತುದಿಗೇರುವಂತೆ ಎಲ್ಲಾ ರೀತಿಯ ಪ್ರಯತ್ನ ಪಟ್ಟಿದ್ದಾರೆ.ಕಂಪನಿಯು ಹಲವು ವಿಧದ ಸೇವೆಗಳನ್ನು ನೀಡುತ್ತಿದ್ದು ಹಲವು ಜಾಹೀರಾತುಗಳ ಪ್ರಚಾರದಿಂದ ತಮ್ಮ ಉತ್ಪನ್ನಗಳ ಮೂಲಕ ಕಸ್ಟಮರ್ಸ್ ಗೆ ಅದ್ಬುತ ಸೇವೆ ನೀಡುವುದನ್ನು ತನ್ನ ಗುರಿಯಾಗಿಸಿದೆ
ಯಾಹೂ ಹಾಗೂ ಬಿಂಗ್ ವ್ಯವಸ್ಥೆಯ ಮೂಲಕ ಪಬ್ಲಿಷರ್ಸ್ ನ್ನು ಹಲವು ವಿಧದ ಜಾಹೀರಾತು ಗಳಿಗೆ ಸಂಪರ್ಕಿಸುವತ್ತ ಸಹಕರಿಸುತ್ತದೆ.ಮಾರಾಟದ ಬೆಲೆಯ ಬಗ್ಗೆ ಹೇಳುವುದಾದಲ್ಲಿ ಇದು ಇತರ ಎಲ್ಲಾ ದೊಡ್ಡ ಡೀಲ್ ಗಳನ್ನು ಮೀರಿಸಿದೆ ಎಂದರೆ ತಪ್ಪಾಗಲಾರದು. ಅಂದರೆ ಉದಾಹರಣೆಗಾಗಿ ಗೂಗಲ್ ನ ಆಡ್ ಮೊಬ್ ಖರೀದಿ $ 750ಮಿಲಿಯನ್ ಹಾಗೂ ಟ್ವಿಟ್ಟರ್ ನ ಮೊಬೈಲ್ ಪಬ್ ಖರೀದಿ $350 ಮಿಲಿಯನ್ ಗಳು.ಟೆಕ್ ಇಂಡಸ್ಟ್ರಿಯ ಈಗಿನ ಏರು ಪೇರಿನ ಸ್ಥಿತಿಯಲ್ಲಿ ನಡೆದಿರೋ ಈ ಡೀಲ್ ನ ನೋಡಿ ಎಲ್ಲಾರೂ ಕ್ಷಣ ಕಾಲ ಆಶ್ಚರ್ಯ ಚಕಿತರಾಗಿದ್ದಾರೆ.
ಬೀಜಿಂಗ್ ಮೈಟೆನೊ ನ ಚೇರ್ ಮ್ಯಾನ್ ಆಗಿರೋ ಜಿಯೋಂಗ್ ಜಾಂಗ್ ನಡೆಸಿರೋ ಈ ವ್ಯವಹಾರದಲ್ಲಿ ಇವರಿಗೆ ಈಗಾಗಲೇ $ 426ಬಿಲಿಯನ್ ಮೊತ್ತ ಸಂದಾಯ ಮಾಡಿದೆ.ಇನ್ನುಳಿದಿರೋ $474 ಬಿಲಿಯನ್ ಮೊತ್ತವನ್ನು ಅಗ್ರಿಮೆಂಟ್ ನಲ್ಲಿ ನೀಡಿರೋ ವ್ಯವಸ್ಥೆಯಂತೆ ಸಂದಾಯ ಮಾಡಲಾಗುವುದು ಎಂದು ವರದಿಯು ತಿಳಿಸಿದೆ.

medianet_inside_1471935251-1-600x342
ಮೂಲತ: ಮೀಡಿಯಾ ನೆಟ್ ಬಿ.ಎಮ್ ಸಿ.ಟಿ ಯ ಒಂದು ಸಬ್ಸಿಡಿಯರಿ ಆಗಿರುವುದು.

  • ಸ್ವರ್ಣಲತ ಭಟ್

POPULAR  STORIES :

ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!

ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???

ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!

ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..

ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!

ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???

ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!

ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??

ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...