ಅವನು ಎಫ್‍ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ಹೋದ. ಆದ್ರೆ ಅಲ್ಲಿ ಅವನಿಗೆ ಕಾದಿತ್ತು ಅಚ್ಚರಿ..! ಪೊಲೀಸರು ಕೇಕ್ ತಿನ್ನಿಸಿ ಶುಭಹಾರೈಸಿದ್ರು..!
ಇದನ್ನು ನಂಬಲು ಕಷ್ಟವಾದ್ರೂ ನಂಬಲೇ ಬೇಕು..! ಅದು ಮುಂಬೈನ ಸಾಕಿನಕಾ ಪೊಲಿಸ್ ಠಾಣೆ. ಅಲ್ಲಿಗೆ ಯುವಕನೊಬ್ಬ ಯಾವುದೋ ವಿಷ್ಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದ..! ವಿವರ ನೀಡುವಾಗ ಆ ದೂರುದಾರನ ಹುಟ್ಟಿದ ದಿನ ಅಂತ ಗೊತ್ತಾಗಿದೆ..! ದೂರು ದಾಖಲಿಸಿಕೊಂಡ ಬಳಿಕ ಪೊಲೀಸರು ಠಾಣೆಗೆ ಕೇಕ್ ತರಿಸಿ ದೂರುದಾರ ಯುವಕನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ ಕಳುಹಿಸಿಕೊಟ್ರು..!
ಎಫ್‍ಐಆರ್ ದಾಖಲಿಸಲು ಹೋದವನಿಗೆ ಕೇಕ್ ತಿನ್ಸಿದ್ರು…!
Date: