CIB ನಿವೃತ್ತ ಅಧಿಕಾರಿ R.N.ಕುಲಕರ್ಣಿ ಕೊಲೆ ಪ್ರಕರಣ ಏನಾಯ್ತು ?

Date:

ಮೈಸೂರಿನಲ್ಲಿ CIB ನಿವೃತ್ತ ಅಧಿಕಾರಿ R.N.ಕುಲಕರ್ಣಿ ಸಾವು ಪ್ರಕರಣ ಸಂಬಂಧ ಇದು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿರುವ ಪ್ರಕರಣವಾಗಿದೆ ಎಂದು ಜಯಲಕ್ಷ್ಮೀಪುರಂ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ . ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಮೈಸೂರಲ್ಲಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ .  ಕುಲಕರ್ಣಿ ಸಾವಿನ ಬಗ್ಗೆ ಅನೇಕ ಆಯಾಮಗಳಲ್ಲಿ ವಿಶ್ಲೇಷಣೆ ಮಾಡಲಾಗ್ತಿತ್ತು . ಘಟನೆ ನಡೆದ ಬಳಿಕ ಕುಲಕರ್ಣಿಯವರ ಅಳಿಯ ದೂರು ನೀಡಿದ್ದಾರೆ . ದೂರಿನಲ್ಲಿ ಪಕ್ಕದ ಮನೆ ನಿವಾಸಿ ಮಾದಪ್ಪ ಮೇಲೆ ಸಂಶಯ ವ್ಯಕ್ತಪಡಿಸಿದ್ರು . ವಿಚಾರಣೆ ವೇಳೆ ನಿವೇಶನ ವ್ಯಾಜ್ಯ ಸಲುವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು .


ಮಾದಪ್ಪನ ಹಿರಿಯ ಮಗ, ಆತನ ಸ್ನೇಹಿತನಿಂದ ಕುಲಕರ್ಣಿಯವರ ಕೊಲೆ ನಡೆದಿದೆ . ನಿವೇಶನ ವ್ಯಾಜ್ಯದಿಂದ ಪದೇ ಪದೇ ತೊಂದರೆಯಾಗುತ್ತಿದ್ದ ಹಿನ್ನೆಲೆ ಹತ್ಯೆ ಕೊಲೆ ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ . ಕೃತ್ಯವೆಸಗುವ ಮುನ್ನ ಕುಲಕರ್ಣಿ ಅವರ ಚಲನವನಗಳನ್ನ ಗಮನಿಸಿದ್ದಾರೆ .
ಕೊಲೆ ಆರೋಪಿ ಮನು MBA ಪದವೀಧರ, ಮತ್ತೊಬ್ಬ MCA ಪದವೀಧರ . ಆದಷ್ಟು ಬೇಗ ಈ ಕೃತ್ಯಕ್ಕೆ ಸಹಾಯ ಮಾಡಿದ್ದವರನ್ನೂ ಬಂಧಿಸಲಾಗುತ್ತೆ ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ .

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...